Council Election Result : ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಸಂಸದರ ಒಳ ಒಪ್ಪಂದ

By Kannadaprabha News  |  First Published Dec 20, 2021, 12:49 PM IST
  •  ಕಾಂಗ್ರೆಸ್ ಜೊತೆ ಬಿಜೆಪಿ ಸಂಸದರ ಒಳ ಒಪ್ಪಂದ 
  •  ಸೋಲಿಗೆ ಬಿಜೆಪಿ - ಕಾಂಗ್ರೇಸ್‌ ಒಳ ಒಪ್ಪಂದ ಕಾರಣ
  •  ಋುಣ ತೀರಿಸಲು ಸಂಸದ ಮುನಿಸ್ವಾಮಿ ಕಾಂಗ್ರೆಸ್‌ ಜತೆ ಕೈಜೋಡಿಸಿದರು 
     

 ಕೋಲಾರ (ಡಿ.20):  ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha election ) ಕೆ.ಎಚ್‌. ಮುನಿಯಪ್ಪನವರನ್ನು (Muniyappa) ಸೋಲಿಸಲು ಕೆಲಸ ಮಾಡಿದ್ದ ಕಾಂಗ್ರೆಸ್‌ (Congress) ಘಟ್‌ಬಂದ್‌ನ ಋುಣ ಸಂದಾಯ ಮಾಡಲು ಸಂಸದ ಮುನಿಸ್ವಾಮಿ ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ಜೆಡಿಎಸ್‌ (JDS) ಸೋಲಿಸುವ ಜತೆಗೆ ಬಿಜೆಪಿ (BJP) ಅಭ್ಯರ್ಥಿಯನ್ನು ಹರಕೆ ಕುರಿಯನ್ನಾಗಿ ಮಾಡಿದ್ದಾರೆ ಎಂದು ವಿಧಾನಪರಿಷತ್‌ (MLC) ಸದಸ್ಯ ಇಂಚರಾ ಗೋವಿಂದರಾಜು ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ (JDS) ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಅಭ್ಯರ್ಥಿ ಗೆಲ್ಲಲು ಸಂಸದ ಮುನಿಸ್ವಾಮಿ ಮತ್ತು ಶಾಸಕ ರಮೇಶ್‌ ಕುಮಾರ್‌ (Ramesh Kumar) ಚಿಂತಾಮಣಿ ಬೆಂಗಳೂರು ರಸ್ತೆಯ ಚನ್ನಸಂದ್ರದ ಬಳಿ ಕಾರಿನಲ್ಲಿ ರಹಸ್ಯ ಮಾತುಕತೆ ನಡೆಸಿದ್ದು ಬಹಿರಂಗಗೊಂಡಿದೆ ಎಂದರು.

Latest Videos

undefined

ಬಿಜೆಪಿ (BJP) ಪಕ್ಷದ ಮತಗಳ ಸಂಖ್ಯೆ ಕೇವಲ 480 ಇದ್ದದ್ದು 1800 ಮತಗಳಿಗೆ ಏರಿಕೆಯಾಗಿದೆ ಎಂದರೆ ಅವರು ಚುನಾವಣೆ (Election) ಪ್ರಾರಂಭದಲ್ಲಿಯೇ ಹಣದ ಹೊಳೆಯನ್ನೆ ಹರಿಸಿ ಮತದಾರರನ್ನು ಸೆಳೆದು ಕೊಂಡರು. ಜೆಡಿಎಸ್‌ನಲ್ಲಿ (JDS) 1700 ಮತಗಳು ಇದ್ದದ್ದು ಸುಮಾರು 300 ಮತಗಳನ್ನು ಸೆಳೆದು ಕೊಂಡಿದ್ದಾರೆ. ಪಕ್ಷೇತರರ ಮತಗಳು ಸೇರಿದಂತೆ ಕಾಂಗ್ರೇಸ್‌ (Congress) ಪಕ್ಷದ ಮತಗಳನ್ನು ಬಿಜೆಪಿ ಸೆಳೆದು ಕೊಂಡಿದೆ ಎಂಬುವುದು ಚುನಾವಣೆ (Election) ಫಲಿತಾಂಶದಲ್ಲಿ ಗೋಚರವಾಗಿದೆ ಎಂದು ಹೇಳಿದರು.

ಶಾಸಕ ಶ್ರೀನಿವಾಸಗೌಡ ಸತ್ತ ಹಾವು :  ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೇಸ್‌ ಅಭ್ಯರ್ಥಿಗೆ ಮತ ಹಾಕಿದ್ದಲ್ಲದೆ ಬೇರೆಯವರಿಗೂ ಮತ ಹಾಕಲು ಒತ್ತಾಯಿಸಿದರು. ಅದರೆ ಅವರಿಗೆ ಒಂದು ಮತ ಹಾಕಿಸುವಷ್ಟುಶಕ್ತಿ ಇಲ್ಲವಾಗಿದೆ. ಅದನ್ನು ಅವರು ಕಳೆದು ಕೊಂಡಿದ್ದಾರೆ. ಇದು ಮುಗಿದ ಅಧ್ಯಾಯವಾಗಿದೆ. ಅವರು ಕೋಲಾರ ಭಾಗಕ್ಕೆ ಕಪ್ಪು ಚುಕ್ಕೆ. ಶಾಸಕ ಶ್ರೀನಿವಾಸಗೌಡರು ಸತ್ತ ಹಾವು. ಅದರ 3 ದಿನದ ಮತ್ತು 11 ದಿನದ ಕಾರ್ಯಗಳಿಲ್ಲವನ್ನೂ ಮುಗಿಸಿದ್ದೇವೆ. ಅವರನ್ನು ಉಚ್ಚಾಟನೆ ಮಾಡಿದರೆ ಕಾಂಗ್ರೇಸ್‌ ಪಕ್ಷಕ್ಕೆ ಅ​ಕೃತವಾಗಿ ಸೇರ್ಪಡೆಯಾಗುವರೆಂದು, ಅವರನ್ನು ತ್ರಿಶಂಕು ಸ್ಥಿತಿಯಲ್ಲಿ ಇಡಲಾಗಿದೆ ಎಂದರು.

ಪರಾಭವ ಅಭ್ಯರ್ಥಿ ವಕ್ಕಲೇರಿ ರಾಮು ಮಾತನಾಡಿ ಚುನಾವಣೆಯಲ್ಲಿ ಮತದಾರರಿಗೆ ಮತ್ತು ಪಕ್ಷದ ನಾಯಕರಿಗೆ,ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿ ನಮ್ಮ ಪಕ್ಷದಲ್ಲಿ ಯಾವೂದೇ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ್ದೇವೆ. ಬಿಜೆಪಿ (BJP) ಒಳಒಪ್ಪಂದದಿಂದಾಗಿ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಇಂದಿನ ಸೋಲು ಮುಂದಿನ ಗೆಲುವಿನ ಸೋಪಾನ ಎಂಬ ಗಾದೆಯಂತೆ ಹತಾಶರಾಗದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜೆ.ಡಿ.ಎಸ್‌.ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್‌, ಮಾಲೂರು ಇ ರಾಮೇಗೌಡ, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ ಪಕ್ಷ ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ಮಲ್ಲೇಶ್‌ಬಾಬು, ಮುಂತಾದವರು ಉಪಸ್ಥಿತರಿದ್ದರು.

ಚಿತ್ರಶೀರ್ಷಿಕೆ; ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡರು.

ಕಾಂಗ್ರೆಸ್  ನಾಯಕರಿಂದ ಜೆಡಿಎಸ್ ಗೆ ಬೆಂಬಲ : 

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ (Election) ಫಲಿತಾಂಶ ಬಂದು ಕಾಂಗ್ರೆಸ್‌ (Congress) ಅಭ್ಯರ್ಥಿ ಅನಿಲ್‌ ಕುಮಾರ್‌ (Anil Kumar) ಗೆಲುವು ಸಾಧಿಸಿದ ನಂತರವೂ ಕಾಂಗ್ರೆಸ್‌ ಪಕ್ಷದಲ್ಲಿನ ಭಿನ್ನಮತ ಶಮನಗೊಂಡಿಲ್ಲ. ಈ ಚುನಾವಣೆಯಲ್ಲಿ (Election) ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ (KH Muniyappa) ಹಾಗೂ ಅವರ ಬೆಂಬಲಿಗರು ಜೆಡಿಎಸ್‌ (JDS) ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಹೈಕಮಾಂಡ್‌ಗೆ ಕಾಂಗ್ರೆಸ್‌ (Congress) ಶಾಸಕರು ಹಾಗೂ ಮುಖಂಡರು ದೂರುಗಳ ಸುರಿಮಳೆ ಸುರಿಸಿದ್ದಾರೆ.

ಎಂಎಲ್‌ಸಿ ಚುನಾವಣೆ (MLC Election) ನಡೆದ ಮಾರನೆ ದಿನವೇ ಮಾಜಿ ಮುಖ್ಯಮಂತ್ರಿ  ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ (RL Jalappa) ಆರೋಗ್ಯ ವಿಚಾರಿಸಲು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭಾ ಸದಸ್ಯರೊಬ್ಬರು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ (Congress) ಅಭ್ಯರ್ಥಿ ಅನಿಲ್‌ ವಿರುದ್ಧ ಮತ ಚಲಾಯಿಸುವಂತೆ ಮತದಾರರಿಗೆ ಸೂಚನೆ ನೀಡಿದ್ದಲ್ಲದೆ, ಜೆಡಿಎಸ್‌ (JDS) ಪಕ್ಷಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಅವರ ಆಡಿಯೋ, ವಿಡಿಯೋ ತುಣುಕುಗಳು ಲಭ್ಯವಾಗಿವೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ (Siddaramaiah) ಅವರಿಗೆ ತಿಳಿಸಿದ್ದಾರೆ.

ಶಿಸ್ತು ಕ್ರಮಕ್ಕೆ ಆಗ್ರಹ:  ಇದರ ಬೆನ್ನಲ್ಲಿಯೇ ಬೆಳಗಾವಿಯ ಸುವರ್ಣ ಸೌಧದಲ್ಲಿ ಬುಧವಾರ ಕರೆಯಲಾಗಿದ್ದ ಕಾಂಗ್ರೆಸ್‌ (Congress) ಶಾಸಕಾಂಗ ಪಕ್ಷದ ಸಭೆಯಲ್ಲಿ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

click me!