* ಮಕ್ಕಳ ಜೊತೆ ಬೈಕ್‌ನಲ್ಲಿ ಹೋಗುವಾಗ ನಡೆದ ದುರ್ಘಟನೆ
* ತಂದೆ ಶಿವಾನಂದ್ ಸ್ಥಿತಿ ಗಂಭೀರ
* ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಹಾಸನ(ಡಿ.20): ನಾಲ್ಕು ಬೈಕ್‌ಗಳಿಗೆ ಲಾರಿಯೊಂದು ಡಿಕ್ಕಿ(Collision) ಹೊಡೆದ ಪರಿಣಾಮ ಎರಡು ಪುಟ್ಟ ಮಕ್ಕಳು ಸೇರಿ ತಾಯಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಸೋಮವಾರ) ನಡೆದಿದೆ. ದುರ್ಘಟನೆಯಲ್ಲಿ ಪ್ರಣತಿ(3) ಹಾಗೂ ಪ್ರಣವ್(3) ಮೃತಪಟ್ಟ(Death) ದುರ್ದೈವಿ ಅವಳಿ ಮಕ್ಕಳಾಗಿವೆ. ಹಾಸನದ (Hassan) ಗವೇನಹಳ್ಲಿಯ ಶಿವಾನಂದ್ ಮತ್ತು ಪತ್ನಿ ಜ್ಯೋತಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳ ಜೊತೆ ಬೈಕ್‌ನಲ್ಲಿ ಹೋಗುವಾಗ ಲಾರಿ ಡಿಕ್ಕಿ ಹೊಡೆದಿದೆ. ತಂದೆ ಶಿವಾನಂದ್ ಸ್ಥಿತಿ ಗಂಭೀರವಾಗಿದ್ದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ.
ಕುಡಿದ ಮತ್ತಿನಲ್ಲಿ ಚಾಲಕ ಮನಬಂದಂತೆ ಲಾರಿ ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಡಿಕ್ಕಿ ರಭಸಕ್ಕೆ ಮಕ್ಕಳ ದೇಹಗಳು ಅಪ್ಪಚ್ಚಿಯಾಗಿವೆ. ಸುಮಾರು ಎರಡು ಕಿಲೋಮೀಟರ್ ಬೈಕ್ ಎಳೆದುಕೊಂಡು ಹೋಗಿದೆ ಲಾರಿ.ಲಾರಿಯ ಟಯರ್ ನಡಿ ಸಿಲುಕಿ ಮೂರು ಕಿಲೋಮೀಟರ್‌ವರೆಗೆ ಹೋಗಿದೆ ಮಗುವಿನ ಮೃತದೇಹ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Bus And Car Accident: ಕಾರಿನಲ್ಲಿ ಮದ್ವೆಗೆ ಹೊರಟಿದ್ದ ನಾಲ್ವರು ಮಸಣ ಸೇರಿದ್ರು
ನಿಂತ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ
ಪಂಚರ್ ಆಗಿ ನಿಂತಿದ್ದ ಈರುಳ್ಳಿ ಸಾಗಿಸುತ್ತಿದ್ದ ಲಾರಿಗೆ(Truck) ಗ್ಯಾಸ್ ಟ್ಯಾಂಕರ್‌ವೊಂದು(Gas Tanker) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ(Death) ಘಟನೆ ಚಿತ್ರದುರ್ಗ (Chitradurga) ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ಡಿ.04 ರಂದು ನಡೆದಿತ್ತು.
ಮೃತರನ್ನ ರಾಯಚೂರು(Raichur) ಮೂಲದ ಹುಲುಗಪ್ಪ, ಕೊಪ್ಪಳ(Koppal) ಜಿಲ್ಲೆಯ ಕುಷ್ಟಗಿ(Kushtagi) ಮೂಲದ ಮಂಜುನಾಥ, ವಿಜಯಪುರ(Vijayapura) ಮೂಲದ ಕ್ಲೀನರ್ ಸಂಜಯ್, ಗದಗ(Gadag) ಜಿಲ್ಲೆಯ ರೋಣ(Ron) ಮೂಲದ ಚಾಲಕ ಶರಣಪ್ಪ ಎಂದು ಗುರುತಿಸಲಾಗಿದೆ.
ಈರುಳ್ಳಿ ಲಾರಿಗೆ ಪಂಚರ್ ಹಾಕುತ್ತಿದ್ದ ವೇಳೆ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಗುದ್ದಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ವೇಳೆ ದುರಂತ(Accident) ಸಂಭವಿಸಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಮಗನ ಮದುವೆ ಮಾತುಕತೆಗೆ ಹೊರಟಿದ್ದ ಮಹಿಳೆ ಸಾವು
ದಾವಣಗೆರೆ(Davanegere): ಮಗನ ಮದುವೆ(Marriage) ಮಾತುಕತೆಗೆಂದು ಬೈಕ್‌ನಲ್ಲಿ ಹೊರಟಿದ್ದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದರಿಂದ ಮುಖಕ್ಕೆ ತೀವ್ರ ಪೆಟ್ಟಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.
ಹಾವೇರಿ(Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂಕಾಪುರ ಗ್ರಾಮದ ಗಂಗಮ್ಮ(48) ಮೃತ ಮಹಿಳೆ. ತಮ್ಮ ಮಗ ನವೀನನ ಜೊತೆಗೆ ಆತನ ಮದುವೆಗೆ ಮಾತುಕತೆಯಾಡಲೆಂದು ದಾವಣಗೆರೆ ತಾಲೂಕಿನ ಹದಡಿ ಗ್ರಾಮ ಹಾದು ಹೋಗುವಾಗ ಹದಡಿಯ ಸಿ.ಕೆ.ನಾಗರಾಜ ಎಂಬುವರ ಹೊಟೆಲ್ ಎದುರು ಹಂಪ್‌ನಲ್ಲಿ ಬೈಕ್ ಸಾಗಿದ್ದರಿಂದ ಗಂಗಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ಮುಖಕ್ಕೆ ತೀವ್ರ ಪೆಟ್ಟಾಗಿತ್ತು.
Road Accident: ಡಿವೈಡರ್ ದಾಟಿ ಬಂದಪ್ಪಳಿಸಿದ ಬಸ್, ಬೈಕ್ ಸವಾರ ದುರ್ಮರಣ
ತಕ್ಷಣ ಗಂಗಮ್ಮನವರಿಗೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ(Treatment) ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಗಂಗಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ಆರ್.ಕೆ.ಸಂಗೀತ ನೀಡಿದ ದೂರಿನ ಮೇರೆಗೆ ಹದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.
ರಸ್ತೆ ಅಪಘಾತ, ಪಾದಚಾರಿ ಸಾವು
ಮುಂಡರಗಿ: ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಪಟ್ಟಣದ ಗದಗ-ಮುಂಡರಗಿ ರಸ್ತೆಯಲ್ಲಿ ನಡೆದಿತ್ತು. ಪಟ್ಟಣದ ಸಣ್ಣದಾವಲ್‌ಸಾಬ್ ಖಾಸಿಂಸಾಬ್ ಕರ್ನಾಚಿ (55) ಮೃತರು. ಬಯಲಿಗೆ ಹೋಗಿ ಮನೆಗೆ ಬರುವಾಗ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಸಣ್ಣದಾವಲ್‌ಸಾಬ್ ತಲೆಗೆ ತೀವ್ರ ಪೆಟ್ಟು ಬಿದ್ದು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.