ದಾವಣಗೆರೆಯಲ್ಲಿ ಕೋವಿಡ್‌ ವ್ಯಾಕ್ಸಿನ್ ಖಾಲಿ: ಸರ್ಕಾರಕ್ಕೆ ಪತ್ರ ಬರೆದ ಬಿಜೆಪಿ ಸಂಸದ ಸಿದ್ದೇಶ್ವರ್

By Suvarna News  |  First Published Apr 25, 2021, 1:33 PM IST

ಕಳೆದ ಮೂರು ದಿನಗಳಿಂದ ಹೆಚ್ಚಾದ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ| ಲಸಿಕೆ ಸಿಗದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ವಾಪಾಸ್‌ ಹೋಗುತ್ತಿರುವ ಸಾರ್ವಜನಿಕರು| ದಾವಣಗೆರೆ ಜಿಲ್ಲೆಗೆ ಕನಿಷ್ಟ ಒಂದು ಲಕ್ಷ ಡೋಸ್‌ ಕೊರೋನಾ ಲಸಿಕೆ ಪೂರೈಸುವಂತೆ ಸಂಸದ ಸಿದ್ದೇಶ್ವರ್ ಮನವಿ| 


ದಾವಣಗೆರೆ(ಏ.25):  ಕೋವಿಡ್‌ ವ್ಯಾಕ್ಸಿನ್ ಅಭಾವವಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಕನಿಷ್ಟ ಒಂದು ಲಕ್ಷ ಡೋಸ್‌ ಕೊರೋನಾ ಲಸಿಕೆ ಪೂರೈಸುವಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿಯನ್ನ ಮಾಡಿಕೊಂಡಿದ್ದಾರೆ.

ಕಳೆದ ಮೂರು ದಿನಗಳಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಲಸಿಕೆ ಸಿಗದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಸಾರ್ವಜನಿಕರು ವಾಪಾಸ್ಸಾಗುತ್ತಿದ್ದಾರೆ. 

Latest Videos

undefined

ಕಾಳಸಂತೆಯಲ್ಲಿ ರೆಮ್‌ ಡಿಸಿವರ್ ಮಾರಾಟ ಯತ್ನ : ಇಬ್ಬರು ಅರೆಸ್ಟ್

ನಿನ್ನೆ(ಶನಿವಾರ) ಕೇವನ ಏಳು ಸಾವಿರ ಡೋಸ್ ಜಿಲ್ಲೆಗೆ ಬಂದಿದೆ. ಇದರಿಂದ ಯಾವುದೇ  ಪ್ರಯೋಜನವಾಗಲ್ಲ.  ಇದೇ ರೀತಿ ಆದರೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸರ್ಕಾರ ತಕ್ಷಣಕ್ಕೆ ಒಂದು ಲಕ್ಷ ಡೋಸ್ ಪೂರೈಕೆ ಮಾಡಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಆಗ್ರಹಿಸಿದ್ದಾರೆ.
 

click me!