ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ಭೇಟಿ ಮಾಡಿದ ಆದಿಚುಂಚನಗಿರಿ ಸ್ವಾಮೀಜಿ

By Suvarna NewsFirst Published Apr 25, 2021, 10:56 AM IST
Highlights

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳು ಶನಿವಾರ ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಮಾಹಿತಿ ಪಡೆದರು. 

ಈ ವೇಳೆ ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ವಾರ್ಡ್‌ಗೆ ತೆರಳಿ ಆರೋಗ್ಯ ವಿಚಾರಿಸಿದರು. 

 "

ನಾಗಮಂಗಲ (ಏ.25):  ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಅವಶ್ಯವಿದ್ದಲ್ಲಿ ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳನ್ನು ಬಿಟ್ಟುಕೊಡಲು ಶ್ರೀಮಠ ಸಿದ್ದವಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪಿಪಿಇ ಕಿಟ್‌ ಧರಿಸಿ ದಾಖಲಾಗಿರುವ ಕೊರೋನಾ ಸೋಂಕಿತ ರೋಗಿಗಳ ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜನರನ್ನು ಕಾಡಿದ್ದ ಕೊರೋನಾ ಮಹಾಮಾರಿ ಈಗ ಎರಡನೇ ಅಲೆಯಾಗಿ ಬಂದು ವಿಚಿತ್ರ ರೂಪತಾಳಿ ಜನರ ನೆಮ್ಮದಿ ಕೆಡಿಸಿದೆ ಎಂದರು.

ಈÜ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸಹ ಬಹಳ ಎಚ್ಚರಿಕೆ ವಹಿಸಬೇಕು. ಸೋಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 250ರಿಂದ 300 ಹಾಸಿಗೆಗಳನ್ನು ಸಿದ್ದಪಡಿಸಿ ಇದಕ್ಕೆ ಬೇಕಾದ ವೆಂಟಿಲೇಟರ್‌ , ಆಕ್ಸಿಜಿನ… ಸೇರಿದಂತೆ ಅಗತ್ಯವಿರುವ ಎಲ್ಲ ಬಗೆಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೀಡಾಗದೆ ಕೋವಿಡ… ಪರೀಕ್ಷೆಗೊಳಪಟ್ಟವೇಳೆ ಸೋಂಕು ದೃಢಪಟ್ಟರೆ ಗಾಬರಿಯಾಗದೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

1.5 ಲಕ್ಷ ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1! ...

ಕೊರೋನಾ ಸೋಂಕು ಮಿತಿಮೀರಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನಮಠಕ್ಕೆ ಸೇರಿದ ಆಸ್ಪತ್ರೆಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಳ್ಳಬಹುದೆಂದು ಸರ್ಕಾರ ಮತ್ತು ಆರೋಗ್ಯ ಸಚಿವರಿಗೆ ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆಯ ಎಲ್ಲ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.

ಮದುವೆ ಇನ್ನಿತರೆ ಶುಭ ಸಮಾರಂಭಗಳಲ್ಲಿ ಸಂಭ್ರಮ ವಿನಿಯೋಗ ಮಾಡಿಕೊಳ್ಳುವ ಭರದಲ್ಲಿ ಖಾಯಿಲೆಗಳು ವಿನಿಯೋಗವಾಗಲು ನಾವು ಅವಕಾಶ ಕೊಡಬಾರದು. ನಾವು ಚೆನ್ನಾಗಿದ್ದರೆ ಮುಂದೆ ಎಂತಹ ಸಂಭ್ರಮಗಳನ್ನಾದರೂ ಆಚರಿಸಬಹುದು. ನಾವು ಸಂಭ್ರಮಿಸಲು ಬಂದು ಮನೆಯಲ್ಲಿ ಆರೋಗ್ಯವಾಗಿರುವ ಕುಟುಂಬಸ್ಥರಿಗೆ, ಊರಿನವರಿಗೆ ಸೋಂಕನ್ನು ಹರಡಿಸುವ ಕಾರ್ಯವನ್ನು ನಿಲ್ಲಿಸಬೇಕಿದೆ. ಇಂತಹ ವಿಷ ಸ್ವರೂಪದ ಕೊಂಡಿಯನ್ನು ಕತ್ತರಿಸದಿದ್ದರೆ ಮತ್ತಷ್ಟುವೇಗವಾಗಿ ಸೋಂಕು ಹರಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್‌ ಧರಿಸುವ ಜೊತೆಗೆ ಪರಸ್ಪರ ದೂರವಿದ್ದಷ್ಟು ಕೊರೋನಾ ಸೋಂಕನ್ನು ನಿಯಂತ್ರಿಸಬಹುದಾಗಿದೆ ಎಂದರು.

click me!