
ಕಲಬುರಗಿ(ಏ.25): ನಗರದ ಜಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲೇರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು(ಭಾನುವಾರ) ಬೆಳಿಗ್ಗೆ ನಡೆದಿದೆ. ಕೊರೋನಾ ಸೋಂಕಿತ ತಾಯಿಯ ಮುಖ ನೋಡಲು ಬಿಟ್ಟಿಲ್ಲ ಎಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
"
ಕಳೆದ 12 ದಿನಗಳಿಂದ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ತಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೊಂಕಿನಿಂದ ಬಳಲುತ್ತಿರುವ ತಾಯಿಯ ಮುಖವನ್ನು ನೋಡಲು ಬಿಡುತ್ತಿಲ್ಲ ಎಂದು ಮನನೊಂದ ಯುವಕ ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರೆಮ್‌ಡಿಸಿವಿಯರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ..!
ತಾಯಿಯ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನಲೆಯಲ್ಲಿ ಯುವಕ ತೀವ್ರ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಕೊನೆಗೆ ಕೊರೋನಾ ಸೋಂಕಿತ ತಾಯಿಯ ಮುಖ ನೋಡಲು ಬಿಡುವ ಭರವಸೆ ನೀಡಿದ ಬಳಿಕ ಆಸ್ಪತ್ರೆ ಕಟ್ಟಡದಿಂದ ಯುವಕ ಕೆಳಗೆ ಇಳಿದಿದ್ದಾನೆ.