ನಿಮ್ಮಪ್ಪನ ನೋಡಿ ಕಲಿತುಕೊಳ್ಳಿ : ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಮುಖಂಡ

By Kannadaprabha News  |  First Published Nov 15, 2021, 7:28 AM IST
  • ಬಿಟ್‌ ಕಾಯಿನ್‌ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ಹಾಗೂ ಪೊಲೀಸ್‌ ಇಲಾಖೆ ಕಾರ್ಯವೈಖರಿ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ  ಹೇಳಿಕೆ 
  • ಪ್ರಿಯಾಂಕ ಖರ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸುರಪುರ ಶಾಸಕ ನರಸಿಂಹನಾಯಕ (ರಾಜೂಗೌಡ) ವಾಗ್ದಾಳಿ

 ಯಾದಗಿರಿ (ನ.15): ಬಿಟ್‌ ಕಾಯಿನ್‌ (Bitcoin) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ (Karnataka Govt) ವಿರುದ್ಧ ಹಾಗೂ ಪೊಲೀಸ್‌ ಇಲಾಖೆ (Police department) ಕಾರ್ಯವೈಖರಿ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ (Priyank kharge) ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸುರಪುರ ಶಾಸಕ ನರಸಿಂಹನಾಯಕ ( ರಾಜೂಗೌಡ) (Rajugowda) ವಾಗ್ದಾಳಿ ನಡೆಸಿದ್ದಾರೆ.

ಹುಣಸಗಿ ತಾಲೂಕಿನ ಕೊಡೆಕಲ್‌ ನಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ವಿರೋಧ ಪಕ್ಷದಲ್ಲಿ ಇದ್ದೇವೆ ಅನ್ನುವ ಕಾರಣಕ್ಕೆ ಖರ್ಗೆ ಸುಖಾ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಘನತೆ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್ನವರಿಗೆ (Congress) ಸರ್ಕಾರದ ವಿರುದ್ಧ ಯಾವುದಾದರೊಂದು ವಿಷಯದ ಬಗ್ಗೆ ಬೇಕಾಗಿದ್ದರಿಂದ ಈಗ ಬಿಟ್‌ ಕಾಯಿನ್‌ (Bitcoin) ವಿಚಾರ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಾಜುಗೌಡ ವಿಪಕ್ಷಗಳನ್ನು ಟೀಕಿಸಿದರು.

Tap to resize

Latest Videos

undefined

ಶಾಸಕ ಪ್ರಿಯಾಂಕ್‌ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು (Mallikarjun kharge) ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಅವರು ಯಾವ ಯಾವ ಖಾತೆ ಗಳಲ್ಲಿ ಕೆಲಸ ಮಾಡಿದ್ದಾರೆ ಅನ್ನೋದನ್ನು ಶಾಸಕ ಪ್ರಿಯಾಂಕ ಖರ್ಗೆ ಅರಿತುಕೊಳ್ಳಲಿ. ಪೊಲೀಸ್‌ ಇಲಾಖೆ (Police department) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಹೋಮ್‌ ಮಿನಿಸ್ಟರ್‌ (Home Minister) ಆಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರಿಗೆ ಗೊತ್ತಿರುತ್ತದೆ. ಈಗ ಬಿಟ್‌ ಕಾಯಿನ್‌ ಬಗ್ಗೆ ಪೊಲೀಸರ (Police) ವಿರುದ್ಧ ಇಲ್ಲಸಲ್ಲದ ಆರೋಪ ಸಲ್ಲದು ಎಂದು ರಾಜುಗೌಡ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದರು.

ಒಂದು ಬೆರಳು ನೀವು ನೇರ ಮಾಡಿದರೆ, ನಾಲ್ಕು ಬೆರಳು ನಿಮಗೆ ಉಲ್ಟಾ ತೋರಿಸುತ್ತವೆ ಎಂದು ಶಾಸಕ ರಾಜೂಗೌಡ, ಪೊಲೀಸ್‌ (Police) ಇಲಾಖೆ ಏನು ಅನ್ನೋದನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ ಎಂದು ಪ್ರಿಯಾಂಕಗೆ ಟಾಂಗ್‌ ನೀಡಿದರು.

ಬಿಟ್‌ ಕಾಯಿನ್‌ ಬಗ್ಗೆ ಖುದ್ದು ಕಾಂಗ್ರೆಸ್ನವರಿಗೆ ಮಾಹಿತಿ ಗೊತ್ತಿಲ್ಲ, ಅವರು ಬೇರೆಯವರಿಂದ ಮಾಹಿತಿ ಪಡೆದು ಜನರಿಗೆ ಸುಳ್ಳು ಗಳ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ, ಜನರ ತಲೆಯಲ್ಲಿ ಗೊಂದಲದ ಬಿಡುತ್ತಿದ್ದಾರೆ ಎಂದು ರಾಜೂಗೌಡ ಕಾಂಗ್ರೆಸ್‌ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಪ್ರಿಯಾಂಕ್ ಖರ್ಗೆ ಗಂಡೊ ಹೆಣ್ಣೋ..? : 

ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿದ್ದು, ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress) ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ.

ಪೇಪರ್ ಸಿಂಹ ಅಂದರೆ ನನಗೆ ಬೇಸರ ಇಲ್ಲ. ನಾನು ಪತ್ರಿಕೆ ಮೂಲಕವೇ ಘರ್ಜಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಪ್ರಿಯಾಂಕ ಖರ್ಗೆ ಹೆಸರು ಗಂಡೋ ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ. ಹೆಸರಿನಲ್ಲೇ ಮರಿ ಖರ್ಗೆಗೆ ಸ್ವಂತಿಕೆ ಇಲ್ಲ. ಅವರು ರಾಜೀವ್‌ಗಾಂಧಿ ಮಗಳ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.

Bitcoin Scam: ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌!

ಮೈಸೂರಿನಲ್ಲಿ (Mysuru) ಇಂದು (ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದರು.

ರಾಜ್ಯ ಕಾಂಗ್ರೆಸ್‌ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದೆವು‌ ಎಂದು ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದರು.

"

ಬಿಟ್ ಕಾಯಿನ್ ಕಾಲ್ಪನಿಕ ವಿಚಾರವಾಗಿದೆ. ಜನಸಾಮಾನ್ಯರಲ್ಲಿ ಚರ್ಚೆ ಶುರುವಾಗಿದೆ. ಮರಿ ಖರ್ಗೆ ಸುದ್ದಿಗೋಷ್ಠಿ ನಡೆಸುತ್ತಾರೆ. ಸುರ್ಜೆವಾಲ ಡೆಲ್ಲಿಯಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುವ ಅಗತ್ಯವೇನಿದೆ. ಡಿಕೆಶಿ, ಸಿದ್ದು ಜಗಳ ಬಿಡಿಸಲು ವಿಫಲವಾಗಿ ದಿಲ್ಲಿಯಲ್ಲೇ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುದನ್ನು ಬಿಟ್ಟು, ನೇರವಾಗಿ ಕರ್ನಾಟಕಕ್ಕೆ ಬಂದು ಒಟ್ಟಾಗಿ ಪ್ರೆಸ್ ಮೀಟ್ ಮಾಡಿ‌. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಬಿಟ್ ಕಾಯಿನ್‌ ಬಗ್ಗೆ ಗೊತ್ತಿರಬೇಕಲ್ವಾ. ದಯಮಾಡಿ ಜನಸಾಮಾನ್ಯರಿಗೆ ಬಿಟ್ ಕಾಯಿನ್‌ ಬಗ್ಗೆ ಹೇಳಿ‌ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಶ್ರೀಕಿ ಜೊತೆ ವ್ಯವಹಾರ ನಡೆಸಿರುವದು ನಿಮ್ಮ‌ ನಲಪಾಡ್. ನಿಮ್ಮ ಶಾಸಕರ ಮಕ್ಕಳೇ ಶ್ರೀಕಿ ಜೊತೆ ವ್ಯವಹಾರ ಮಾಡಿರುವುದು. ಅಕೌಂಟ್ ಹ್ಯಾಕ್ ಮಾಡಿದ್ದರೆ ಬಹಿರಂಗ ಪಡಿಸಿ. ನಿಮ್ಮ ಯಾವ ಅಕೌಂಟ್ ಹ್ಯಾಕ್ ಆಗಿದೆ ಬಹಿರಂಗ ಪಡಿಸಿ. ಒಂದೇ ಒಂದು ಅಕೌಂಟ್ ನಂಬರ್ ಕೊಡಿ ಎಂದು ಕಾಂಗ್ರೆಸ್‌ ಗೆ ಸವಾಲು ಹಾಕಿದರು.

ಒಂದು ಸಾವಿರ ಕಳೆದುಕೊಂಡರೂ ಇವತ್ತು ದೂರು ಕೊಡ್ತಾರೆ. 7 ಸಾವಿರ ಕೋಟಿ ಎಂದರೆ ಯಾಕೆ ದೂರು ಕೊಟ್ಟಿಲ್ಲ. ನಿಮ್ಮ ಧರ್ಮ ಸಂಕಟ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಮರಿಖರ್ಗೆ, ಬಿಟಿಎಂ ರೆಡ್ಡಿ, ಪಾಟೀಲ, ಜಾರ್ಜ್ ಹೂಡಿರುವ ಅಕೌಂಟ್ ಹ್ಯಾಕ್ ಆಗಿರಬೇಕು‌. ಹಿಂದೆ ಪರ್ಸೆಂಜೆಟ್ ಪಡೆದಿದ್ದರಿಂದಲೇ 2018 ರಲ್ಲಿ ಹೀನಾಯ ಸೋಲಾಗಿತ್ತು. ಸಿದ್ದರಾಮಯ್ಯನವರದ್ದು ಸ್ಪಿಟ್ ಅಂಡ್ ರನ್. ಯಾವ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂದು ಟಾಂಗ್ ಕೊಟ್ಟರು.

ಪೇಪರ್‌ ಸಿಂಹ ಹೇಳಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಎರಡೂ ಅವರ ಬಳಿಯೇ ಇದೆ. ತನಿಖೆ ಮಾಡಿ ಮಾಹಿತಿ ತರಿಸಿಕೊಳ್ಳಲಿ. ನಮ್ಮ ಆರೋಪಗಳಿಗೆ ಉತ್ತರ ಕೊಡಲಾಗದಿದ್ದಾಗ ವೈಯಕ್ತಿಕ ಟೀಕೆ ಮಾಡುತ್ತಾರೆ. ಇದು ಬಿಜೆಪಿಯ ಮಂತ್ರ ಎಂದು ಪ್ರತಾಂಹ ಸಿಂಹಗೆ ತಿರುಗೇಟು ಕೊಟ್ಟಿದ್ದರು. ಪೇಪರ್‌ ಸಿಂಹ ಎಂದಿದ್ದಕ್ಕೆ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಗಂಡೋ ಹೆಣ್ಣೋ ಎಂದು ವೈಯಕ್ತಿಕ ಟೀಕೆ ಮಾಡಿದ್ದಾರೆ.

click me!