ರಮೇಶ್ ಜಾರಕಿಹೊಳಿ ಸೀಕ್ರೆಟ್ ಭೇಟಿ : ರಹಸ್ಯ ಮಾತುಕತೆ ನಡೆಸಿ ಕುತೂಹಲ ಸೃಷ್ಟಿ

By Kannadaprabha News  |  First Published Nov 15, 2021, 7:08 AM IST
  • : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಭಾನುವಾರದ ಸಿಕ್ರೆಟ್ ಮೀಟಿಂಗ್ ಕುತೂಹಲ
  • ಓರ್ವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ ಜಾರಕಿಹೊಳಿ

ವಿಜಯಪುರ (ನ.15): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh jarkiholi) ಅವರು ಭಾನುವಾರ ವಿಜಯಪುರ (Vijayapura) ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda patil yatnal) ಅವರನ್ನು ಭೇಟಿಯಾಗಿ ಕೆಲಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಮಹಾರಾಷ್ಟ್ರಕ್ಕೆ (maharashtra) ಹೋಗಿದ್ದರೆನ್ನಲಾದ ರಮೇಶ್‌ ಜಾರಕಿಹೊಳಿ ಅವರು ನೇರವಾಗಿ ವಿಜಯಪುರ ನಗರದ ಸಿಂದಗಿ (Sindagi) ರಸ್ತೆಯಲ್ಲಿರುವ ಬಸನಗೌಡ ಪಾಟೀಲ ಯತ್ನಾಳ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಉಭಯ ನಾಯಕರ ನಡುವೆ ನಡೆದ ಮಾತುಕತೆಯ ವಿವರ ಬಹಿರಂಗವಾಗಿಲ್ಲವಾದರೂ ಬಿಟ್‌ ಕಾಯಿನ್‌ (Bitcoin), ಪರಿಷತ್‌ ಚುನಾವಣೆ (MLC Election) ಸೇರಿದಂತೆ ರಾಜ್ಯ ರಾಜಕೀಯದ (Karnataka politics) ವಿವಿಧ ವಿಚಾರಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ.

Latest Videos

undefined

ರಮೇಶ್‌ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಇದ್ದಾರೆ. ಈ ವಿಚಾರವಾಗಿ ಹಲವು ಬಾರಿ ದೆಹಲಿಗೆ (Delhi) ತೆರಳಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದಾರೆ.

ಡಿಕೆಶಿ ಆಪ್ತರ ಭೇಟಿ ಮಾಡಿದ್ದರು : 

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh jarkiholi) ಆಪ್ತರು ನನ್ನನ್ನು ಭೇಟಿ ಮಾಡಿ ಚರ್ಚಿಸಿರುವುದು ಸತ್ಯ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ. ಅವರು ಅನೇಕ ವಿಚಾರ ಚರ್ಚೆ ಮಾಡಿದ್ದಾರೆ.  

ಆ ವಿಚಾರಗಳನ್ನು ನಾನು ಈಗ ಗೌಪ್ಯವಾಗಿ ಇಡಬೇಕಾಗಿದೆ. ಹೀಗಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ರಮೇಶ್‌ ಜಾರಕಿಹೊಳಿ ಆಪ್ತರಾದ ವಿವೇಕರಾವ್‌ ಪಾಟೀಲ (Vivek Rao patil) ಅವರು ಶನಿವಾರ ಶಿವಕುಮಾರ್‌ ಅವರನ್ನು ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಿದ್ದರು.

ಜಾರಕಿಹೊಳಿ ಸೀಡಿ ಕೇಸ್ : ವರದಿ ಸಲ್ಲಿಕೆಗಿಲ್ಲ ಅವಕಾಶ

ಸಿಎಂ ಭೇಟಿ ಮಾಡಿದ ಜಾರಕಿಹೊಳೀ :  ಸಚಿವ ಸ್ಥಾನ ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಗೋಕಾಕ್‌(Gokak) ಶಾಸಕ ರಮೇಶ್‌ ಜಾರಕಿಹೊಳಿ ಅವರು  ಕೇದಾರನಾಥಕ್ಕೆ  16ನೇ ಬಾರಿಗೆ ಭೇಟಿ ನೀಡಿದ್ದಾರೆ.  ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ ಬಳಿಕ ತಿಂಗಳಿಗೊಮ್ಮೆಯಾದರೂ ರಮೇಶ್‌ ಜಾರಕಿಹೊಳಿಯವರು(Ramesh Jarkiholi) ದೆಹಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜಕೀಯ(Politics), ಸಚಿವ ಸ್ಥಾನ(Minister), ಕೋರ್ಟ್‌ ಕೆಲಸ ಹೀಗೆ ನಾನಾ ಕಾರಣಗಳಿಗೆ ದೆಹಲಿಗೆ ಎಡತಾಕುತ್ತಿದ್ದ ಜಾರಕಿಹೊಳಿ, ಈ ಬಾರಿ ದೇವರ ದರ್ಶನ ಮಾಡಲಿದ್ದಾರೆ. ಟೆಂಪಲ್‌ ರನ್‌ಗಾಗಿಯೇ(Temple Run) ದೆಹಲಿಗೆ ಆಗಮಿಸಿರುವ ಅವರು ಶುಕ್ರವಾರ ದೆಹಲಿಯಲ್ಲಿರುವ(Delhi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು(Basavaraj Bommai) ಭೇಟಿಯಾಗಿ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದರು.

ಜಾರಕಿಹೊಳಿ ಸೀಡಿ ಕೇಸ್ : ವರದಿ ಸಲ್ಲಿಕೆಗಿಲ್ಲ ಅವಕಾಶ

ರಮೇಶ್‌ ಜಾರಕಿಹೊಳಿ ದೆಹಲಿಗೆ ಬಂದರೆ ಮಾಲ್ಚಾ ಮಾರ್ಗದಲ್ಲಿರುವ (ಕರ್ನಾಟಕ ಭವನ-2) ಬಳಿ ಇರುವ ಹನುಮಾನ್‌ ಮಂದಿರಕ್ಕೆ ಭೇಟಿ ನೀಡುತ್ತಾರೆ. ಹನುಮನಿಗೆ ಕೈ ಮುಗಿದ ಬಳಿಕ ಕರ್ನಾಟಕ ಭವನದಲ್ಲಿ(Karnataka Bhavan)  ತಿಂಡಿ ತಿನ್ನುವುದು ಅವರ ವಾಡಿಕೆ. ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಶಾಸಕರ ಪಕ್ಷಾಂತರ ಕೇಸ್‌ ನಡೆಯುತ್ತಿದ್ದಾಗಲೂ ಅವರು ಎರಡು ಮೂರು ಬಾರಿ ವೈಷ್ಣೋ ದೇವಿಯ(Vaishno Devi) ದರ್ಶನ ಕೂಡ ಪಡೆದಿದ್ದರು. ಇನ್ನು ಕೇದಾರನಾಥ, ಬದರಿನಾಥ(Badrinath) ಭೇಟಿಯೂ ಅಷ್ಟೆ. ಅಧಿಕಾರ ಇರಲಿ ಇಲ್ಲದಿರಲಿ ಎರಡು ವರ್ಷಕ್ಕೊಮ್ಮೆ ಕೇದಾರನಾಥನ ದರ್ಶನ ಪಡೆದೇ ತಿರುತ್ತಾರೆ. ಈಗಾಗಲೇ 15 ಬಾರಿ ಕೇದಾರನಾಥ, ಬದರಿನಾಥಕ್ಕೆ ಅವರು ಭೇಟಿ ನೀಡಿದ್ದಾರೆ. 

ಸಿಎಂ ಭೇಟಿಯಾಗಿ ಖುಷಿ ಖುಷಿಯಿಂದ ಹೊರ ಬಂದ ರಮೇಶ್‌ ಜಾರಕಿಹೊಳಿ, ನಾನೇನು ಕೇಳುವುದಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ ಎಂದರು. ಸಮಾಧಾನಕ್ಕಾಗಿ ನಾನು ಕೇದಾರನಾಥನ ದರ್ಶನಕ್ಕೆ ಹೊರಟಿದ್ದೇನೆ ಎಂದು ತಿಳಿಸಿದ್ದರು.

click me!