ಸಿಎಂ ಬದಲಾಯಿಸಬೇಕೆಂದುಕೊಂಡವರಿಗೆ ಒಳ್ಳೆಯದಾಗಲಿ : ಬಿಜೆಪಿ ಶಾಸಕ

Suvarna News   | Asianet News
Published : May 31, 2021, 02:06 PM ISTUpdated : May 31, 2021, 03:15 PM IST
ಸಿಎಂ ಬದಲಾಯಿಸಬೇಕೆಂದುಕೊಂಡವರಿಗೆ ಒಳ್ಳೆಯದಾಗಲಿ : ಬಿಜೆಪಿ ಶಾಸಕ

ಸಾರಾಂಶ

 ಯೋಗೇಶ್ವರ ಏನ್ ಸಿನಿಯರ್ ಲೀಡರ್ ಅಲ್ಲ.  ಸುಮ್ನೆ ಕಿರಿಕಿರಿ ಮಾಡ್ತೀದಾನೆ   ಕೊಪ್ಪಳದಲ್ಲಿ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ವಾಗ್ದಾಳಿ ಅವರ ಹಿಂದೆ ಯಾರು ಇದ್ದಾರೆ ಎನ್ನುವುದೇ ಗೊತ್ತಿಲ್ಲ ಎಂದ ಶಾಸಕ

 ಕೊಪ್ಪಳ (ಮೇ.31):  ಯೋಗೇಶ್ವರ ಏನ್ ಸಿನಿಯರ್ ಲೀಡರ್ ಅಲ್ಲ.  ಸುಮ್ನೆ ಕಿರಿಕಿರಿ ಮಾಡ್ತೀದಾನೆ ಎಂದು ಕೊಪ್ಪಳದಲ್ಲಿ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಹೇಳಿದರು. 

ಕೊಪ್ಪಳದಲ್ಲಿಂದು ಮಾತನಾಡಿದ ಶಾಸಕ  ಬಸವರಾಜ್ ದಡೇಸಗೂರು ಆ ಮನುಷ್ಯನ ಮಾತು ಯಾರು ಕೇಳುತ್ತಾರೆ. ಇವತ್ತಿನ ತನಕ ಅವರ ಹಿಂದೆ ಯಾರು ಇದ್ದಾರೆ ಎನ್ನುವುದೇ ಗೊತ್ತಿಲ್ಲ.  ಮುಂದಿನ ದಿನದಲ್ಲಿ ಯಾರಿದ್ದಾರೆ ಎನ್ನೋದು ಗೊತ್ತಾಗಲಿದೆ ಎಂದು ಹೇಳಿದರು. 

ಸರ್ಕಾರ ಟೀಕಿಸಿದ ವ್ಯಕ್ತಿ ಎಷ್ಟು ಪಕ್ಷ ಬದಲಿಸಿದ್ದಾರೆ? : ಅಶೋಕ್‌ ಟಾಂಗ್‌ ..

ಎಲ್ಲಾ ಪಕ್ಷದಲ್ಲಿ ಕಾಣದ ಕೈಗಳು ಇವೆ. ಕಾಂಗ್ರೆಸ್ ಬಿಜೆಪಿ ಜೆ.ಡಿ.ಎಸ್ ಮೂರು ಪಕ್ಷದಲ್ಲಿ ಕಾಣದ ಕೈಗಳಿವೆ.  ಮುಂದಿನ ದಿನದಲ್ಲಿ ಯೋಗೇಶ್ವರ್ ಹಿಂದೆ ಯಾರಿದ್ದಾರೆ ಎನ್ನುವುದು ಬೆಳಕಿಗೆ ಬರಲಿದೆ.  ಸದ್ಯ ಎಲ್ಲ ಶಾಸಕರು ಯಡಿಯೂರಪ್ಪ ಪರ ಇದ್ದಾರೆ. 20 ಜನ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವೆ.  ಯೋಗೇಶ್ವರ್ ಹಗಲು ಕನಸು ಕಾಣುತ್ತಿದ್ದಾರೆ, ಆದರೆ ಅದು ನನಸಾಗಲ್ಲ ಎಂದು ಹೇಳಿದರು.

ಸಣ್ಣ ಪುಟ್ಟ ಗೊಂದಲ ಕಂಡ ಕಾರಣ ನಾವು ಮುಖ್ಯಮಂತ್ರಿ ಭೇಟಿಯಾಗಿದ್ದೇವೆ.  ಕೊರೋನಾ ಸಮಯದಲ್ಲಿ ಯಡಿಯೂರಪ್ಪ ಒಳ್ಳೆ ಕೆಲಸ ಮಾಡುತ್ತಿದ್ದಾರೆ.  ಯಡಿಯೂರಪ್ಪ ಬದಲಾವಣೆ ಪ್ರಶ್ನೆ ಇಲ್ಲ.  ಯಡಿಯೂರಪ್ಪ ಬದಲಾವಣೆ ಮಾಡಬೇಕು ಅಂದುಕೊಂಡವರಿಗೆ ಒಳ್ಳೆದಾಗಲಿ ಎಂದು ಸಚಿವ ದಡೇಸಗೂರು ಹೇಳಿದರು. 

PREV
click me!

Recommended Stories

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್