ಚಿಂಚೋಳಿ (ಆ.25) : ಮೀಸಲು ಚಿಂಚೋಳಿ ವಿಧಾನಸಭಾ ಮತಕ್ಷೇತ್ರದಲ್ಲಿ ಎಸ್‌ಸಿ,. ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳು ತಾಂಡಾಗಳ ಪಾಲಾಗಿ ಅಭಿವೃದ್ಧಿ ಆಗಿವೆ ಹೊರತು ಗ್ರಾಮಗಳ ಅಭಿವೃದ್ಧಿಯಾಗಿಲ್ಲ. ಶಾಸಕರು ಸ್ವಜಾತಿ ಪ್ರೇಮದಿಂದ ಬೇರೆ ಜಾತಿ ವರ್ಗ ಜನಾಂಗದವರು ಅನ್ಯಾಯಕ್ಕೊಳಗಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ ಟೀಕಿಸಿದ್ದಾರೆ.
ಮಹಾರಾಷ್ಟ್ರದ ದರೋಡೆಕೋರರ ಮೇಲೆ ಕಲಬುರಗಿಯಲ್ಲಿ ಫೈರಿಂಗ್: ನಾಲ್ವರ ಬಂಧನ
ತಾಲೂಕಿನ ಗೋಟೂರ ಗ್ರಾಮದಿಂದ ಜೆಡಿಎಸ್ ಹಮ್ಮಿಕೊಂಡಿರುವ ಹಳ್ಳಿಹಳ್ಳಿಗೆ ಎಚ್.ಡಿ. ಕುಮಾರಸ್ವಾಮಿ ಮನೆ ಮನೆಗೆ ಜೆಡಿಎಸ್ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ತೇಗಲತಿಪ್ಪಿ, ಹಲಚೇರಾ, ಎಚ್.ಹೊಸಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೆಕೆಆರ್‌ಡಿಬಿ, ಎಸ್‌ಸಿಪಿ, ಟಿಎಸ್‌ಪಿ ಮತ್ತು ಅಂಬೇಡ್ಕರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮದ ಕಾಮಗಾರಿಗಳು ಮತ್ತು ಜಲ ಜೀವನ ಮಿಷನ್ ಯೋಜನೆಗಳು ಮತ್ತು ಶಾಸಕರ ಅನುದಾನದ ಕೆಲಸಗಳು ಕೇವಲ ತಾಂಡಾಗಳಲ್ಲಿ ಕೈಕೊಳ್ಳಲಾಗಿದೆ. ಆದರೆ, ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೆಲಸಗಳು ಮಾಡಲಿಲ್ಲ. ಬಿಜೆಪಿ ಶಾಸಕರ ಸ್ವಜಾತಿ ಪ್ರೇಮದಿಂದ ಗ್ರಾಮಗಳಲ್ಲಿ ಅನೇಕ ಬಡವರು ಅನ್ಯಾಯಕ್ಕೊಳಗಾಗಿದ್ದಾರೆ.
ತಾಂಡಾಗಳಲ್ಲಿ ಹೈಮಾಸ್ಟ್ ದೀಪ, ಶುದ್ಧ ನೀರು, ರಸ್ತೆ, ಚರಂಡಿ, ಶಾಲೆ, ಅಂಗನವಾಡಿ ಕೇಂದ್ರ, ಸಮುದಾಯ ಭವನಗಳ ನಿರ್ಮಾಣ, ಶೌಚಾಲಯಗಳು, ಸಾಲ ಸೌಲಭ್ಯಗಳು ತಾಂಡಾಗಳ ಜನರಿಗೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟಜಾತಿ ಓಣಿಗಳಿಗೆ ನೀಡುವ ಮೂಲ ಸೌಕರ್ಯಗಳೆಲ್ಲವೂ ತಾಂಡಾಗಳಲ್ಲಿಯೇ ಕೈಕೊಂಡಿದ್ದಾರೆ. ಗ್ರಾಮಗಳಲ್ಲಿ ಹರಿಜನವಾಡಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ಶೌಚಾಲಯಗಳಿಲ್ಲ ಹೈಮಾಸ್ಟ್ ದೀಪಗಳಿಲ್ಲ ಇಂತಹ ತಾರತಮ್ಮ ನಮ್ಮ ಜೆಡಿಎಸ್ ಸರ್ಕಾರದಲ್ಲಿ ನಡೆದಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಲ್ಲ ಜಾತಿ ಜನಾಂಗದವರಿಗೆ ಸಮನಾಗಿ ಸರ್ಕಾರದ ಸೌಲಭ್ಯ ನೀಡಿದ್ದಾರೆ. ರೈತರ ಸಾಲ ಮನ್ನಾ, ಐನಾಪೂರ ಏತನೀರಾವರಿ ಯೋಜನೆ ಬಗ್ಗೆ ಸಮ್ಮಿಶ್ರ ಸರಕಾರದಲ್ಲಿ ಗಮನ ಸೆಳೆದಿದ್ದರು. ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಶೂನ್ಯವಾಗಿವೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೈಕೊಂಡಿರುವ ಅಭಿವೃದ್ಧಿ ಕೆಲಸಗಳು ಇನ್ನು ತಾಲೂಕಿನಲ್ಲಿ ನಡೆಯುತ್ತಿವೆ. ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದೆ ಎಂದು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪೂರ ಆರೋಪಿಸಿದರು.
ತಾಂಡಾಗಳಿನ್ನು ಕಂದಾಯ ಗ್ರಾಮ, ಕೃಷಿ ಕಾರ್ಮಿಕರ ಮಕ್ಕಳಿಗೂ ಸ್ಕಾಲರ್ಶಿಪ್: ಸಚಿವ ಆರ್.ಅಶೋಕ
ಪಾದಯಾತ್ರೆಯಲ್ಲಿ ರವಿಕುಮಾರ ಕೊಟಗಾ, ಎಸ್.ಕೆ.ಮುಕ್ತಾರ, ರಾಹುಲ ಯಾಕಾಪೂರ, ಸಿದ್ದು ಬುಬಲಿ, ಸೈಯದ ನಿಯಾಜಅಲಿ, ವೀರಾರೆಡ್ಡಿ, ಗೌರಿಶಂಕರ ಸೂರವಾರ, ರೇವಣಸಿದ್ದ ಸೂಗೂರ, ಲಾಲಪ್ಪ ಹೋಳ್ಕರ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ ಪೂಜಾರಿ, ಹಣಮಂತರೆಡ್ಡಿ ದೋಟಿಕೊಳ, ಬಸವರಾಜ ಪಸ್ತಪೂರ, ಸನ್ನಿಜಾಬಶೆಟ್ಟಿ, ಉಲ್ಲಾಸಕುಮಾರ ಕೆರೊಳ್ಳಿ ಇನ್ನಿತರರು ಭಾಗವಹಿಸಿದ್ದರು.