'BJPಗೆ ನಮ್ಮ ಅವಶ್ಯಕತೆ ಇಲ್ಲ, JDS ಬಿಡೋ ಪ್ರಶ್ನೆ ಇಲ್ಲ'..!

Suvarna News   | Asianet News
Published : Dec 17, 2019, 03:42 PM IST
'BJPಗೆ ನಮ್ಮ ಅವಶ್ಯಕತೆ ಇಲ್ಲ, JDS ಬಿಡೋ ಪ್ರಶ್ನೆ ಇಲ್ಲ'..!

ಸಾರಾಂಶ

ಬಿಜೆಪಿಯವರಿಗೆ ನಮ್ಮ ಅವಶ್ಯಕತೆ ಇಲ್ಲ. ನಾನು ಜೆಡಿಎಸ್ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ತೊರೆಯಲು ಚಿಂತನೆ ನಡೆಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಮಂಡ್ಯ(ಡಿ.17): ಬಿಜೆಪಿಯವರಿಗೆ ನಮ್ಮ ಅವಶ್ಯಕತೆ ಇಲ್ಲ. ನಾನು ಜೆಡಿಎಸ್ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೂ ನಾನು ಅನ್ಯಾಯ ಮಾಡಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಜೆಡಿಎಸ್ ಸೇರಿದ್ದೆ. ವಿರೋಧಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ನಾನು  ಪಕ್ಷ ಬಿಡಬೇಕಾಯಿತು. ಆ ಸಂದರ್ಭದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ನನಗೆ ರಕ್ಷಣೆ ನೀಡಿದ್ದಾರೆ. ನನಗಿಂತ ದೊಡ್ಡವರು ಬಂದರೆ ಕಾಲಿಗೆ ನಮಸ್ಕಾರ ಮಾಡುವುದು ವಾಡಿಕೆ ಎಂದಿದ್ದಾರೆ.

ಇಬ್ಬರು ಶಾಸಕರು JDSಗೆ ಬೈ ಬೈ..! ಮುಂದುವರಿಯುತ್ತಾ ಆಪರೇಷನ್ ಕಮಲ..?

ನಾನು ಯಾರ ಮಾತು ಕೇಳುವವನಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸೋಕೆ ಸಾಧ್ಯವಿಲ್ಲ. ಇದು ನನ್ನ ಬಗ್ಗೆ ತೇಜೊವಧೆ ಮಾಡುವ ಹುನ್ನಾರ ಅಷ್ಟೇ. ಬಿಜೆಪಿಯವರಿಗೆ ನಮ್ಮ ಅವಶ್ಯಕತೆಯೂ ಇಲ್ಲ. ಜೆಡಿಎಸ್ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಮಾರಾಟಕ್ಕಿಲ್ಲ. ಯಾವುದೇ ಪಕ್ಷದವರ ಜೊತೆ ಮಾತುಕತೆ ನಡೆಸಿಲ್ಲ. ದೇವೇಗೌಡರನ್ನ ಮತ್ತು ಕುಮಾರಣ್ಣ ಮತ್ತು ಜೆಡಿಎಸ್ ಪಕ್ಷ ಹಾಗೂ ಕಾರ್ಯಕರ್ತರನ್ನು  ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ಯಾಕೆ ಈ ರೀತಿ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದಿದ್ದಾರೆ.

BJPಯಿಂದ 50 ಕೋಟಿ, ಮಂತ್ರಿಗಿರಿಯ ಆಫರ್‌ ಬಂದಿತ್ತು ಎಂದ JDS ಶಾಸಕ

ಈ ರೀತಿ ಅಪಪ್ರಚಾರ ಮಾಡುವ ಹಿಂದೆ ಯಾರ ಷಡ್ಯಂತ್ರ ಇದೆ ತಿಳಿದುಕೊಳ್ಳುತ್ತೇನೆ. ಒಬ್ಬ ವ್ಯಕ್ತಿಯ ಬಗ್ಗೆ ತೇಜೋವಧೆ ಮಾಡುವುದು ಷಡ್ಯಂತ್ರವೇ. ನಮ್ಮ ಸರ್ಕಾರದಲ್ಲಿ ಕೊಟ್ಟಂತಹ ಅನುದಾನವನ್ನು ಸಂಪೂರ್ಣವಾಗಿ ವಾಪಸ್ಸು ತೆಗೆದುಕೊಂಡಿದ್ದಾರೆ. ಟೆಂಡರ್ ಆಗಿರುವ ಕಾಮಗಾರಿಗಳು , ಟೆಂಡರ್ ಆಗಿ ಅಗ್ರಿಮೆಂಟ್ ಆಗಿರುವ ಕಾಮಗಾರಿಗಳನ್ನು ತಡೆಹಿಡಿದ್ದಾರೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಅದೆಲ್ಲವನ್ನು ಬಿಡುಗಡೆ ಮಾಡದಿದ್ದರೆ ಗಾಂಧಿ ಮಾರ್ಗದಲ್ಲಿ ಹೋರಾಟ ಮಾಡಲಾಗುವುದು. ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳೂ ಯಾಕೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!