ನನ್ನ ತಾಯಿ ರೊಟ್ಟಿ ಮಾರಿ ಬೆಳೆಸಿದ್ಲು : ಆತ್ಮಹತ್ಯೆಗೆ ಯತ್ನಿಸಿದವನಿಗೆ DC ಬುದ್ಧಿವಾದ

By Suvarna News  |  First Published Dec 17, 2019, 3:29 PM IST

ತನ್ನ ಕೆಲಸ ಹೋಯ್ತೆಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ರಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬುದ್ಧಿಮಾತು ಹೇಳಿದ್ದಾರೆ.


ದಾವಣಗೆರೆ [ಡಿ.17]: ಕೆಲಸ ಹೋಯ್ತೆಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವ್ಯಕ್ತಿಗೆ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿಷ ಸೇವಿಸಲು ಯತ್ನಿಸಿದ್ದ ವ್ಯಕ್ತಿಗ ಬುದ್ಧಿವಾದ ಹೇಳಿದ್ದಾರೆ. 

Tap to resize

Latest Videos

ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದ ನಿಂಗರಾಜ್ ಎನ್ನುವ ವ್ಯಕ್ತಿ ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಲು ಮುಂದಾಗಿದ್ದರು. 

ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ತಮ್ಮ ಜೀವನದ ಬಗ್ಗೆ ಹೇಳುತ್ತಾ ಆತನ ಮನ ಪರಿವರ್ತಿಸಿದ್ದಾರೆ. ನಾನು 5 ವರ್ಷದವನಿದ್ದಾಗ ತಂದೆ ಕಳೆದುಕೊಂಡಿದ್ದು, ರೊಟ್ಟಿ ಮಾರಿ ನನ್ನ ತಾಯಿ ಜೀವನ ನಡೆಸುತ್ತಾ ನನ್ನನ್ನು ಜಿಲ್ಲಾಧಿಕಾರಿಯನ್ನಾಗಿ ಮಾಡಿದ್ದಾರೆ ಎಂದರು. 

ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'!..

ಅಲ್ಲದೇ ನನ್ನೂರು ಬೆಳಗಾವಿ ಜಿಲ್ಲೆಯ ರಾಮದುರ್ಗಾ ಗ್ರಾಮದಲ್ಲಿ ಹೋಗಿ ಕೇಳಿ. ನಮ್ಮ ಕಷ್ಟ ಏನು ಎಂದು ತಿಳಿಯುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವ ನೀನೆಂತಹ ಗಂಡಸು ಎಂದು ಖಡಕ್ ಮಾತುಗಳನ್ನಾಡಿದರು. ಅಲ್ಲದೇ ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ. 

click me!