ದೆಹಲಿ ರೇಪ್ ಕ್ಯಾಪಿಟಲ್: 'ಮೋದಿ ಹೇಳಿದ್ರೆ ಚಕಾರವಿಲ್ಲ..'!

By Suvarna News  |  First Published Dec 17, 2019, 3:11 PM IST

ದೆಹಲಿ ರೇಪ್‌ ಕ್ಯಾಪಿಟಲ್ ಎಂದು ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ತುಮಕೂರು ಕಾಂಗ್ರೆಸ್‌ ಮುಖಂಡ ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಮೋದಿ ಹೇಳಿದರೆ ಅದರಲ್ಲಿ ತಪ್ಪಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.


ತುಮಕೂರು(ಡಿ.17): ದೆಹಲಿ ರೇಪ್‌ ಕ್ಯಾಪಿಟಲ್ ಎಂದು ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ತುಮಕೂರು ಕಾಂಗ್ರೆಸ್‌ ಮುಖಂಡ ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಮೋದಿ ಹೇಳಿದರೆ ಅದರಲ್ಲಿ ತಪ್ಪಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಳಿಧರ ಹಾಲಪ್ಪ ದೆಹಲಿ ರೇಪ್ ಕ್ಯಾಪಿಟಲ್ ಎಂದ ರಾಹುಲ್ ಗಾಂಧಿ ವ್ಯಾಖ್ಯಾನಕ್ಕೆ ತುಮಕೂರು ಕಾಂಗ್ರೆಸ್ ಮುಖಂಡ ಮುದ್ರೆ ಒತ್ತಿದ್ದಾರೆ. ಈಗಾಗಲೇ ದೆಹಲಿ ರೇಪ್ ಕ್ಯಾಪಿಟಲ್ ಎಂದಾಗಿದೆ ಎಂದ ಮುರುಳಿಧರ್ ಹಾಲಪ್ಪ ಇಡೀ ಭಾರತ ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗಿವೆ ಎಂದಿದ್ದಾರೆ.

Tap to resize

Latest Videos

ಮೈಸೂರು: ಹಳ್ಳಿ ಹಕ್ಕಿ ಪರ ಸಾರಾ ಸಾಫ್ಟ್‌ ಕಾರ್ನರ್..!

ನಿನ್ನೆ ತಾನೇ ಬಿಜೆಪಿ ಶಾಸಕ ಅತ್ಯಾಚಾರ ಮಾಡಿರೋದನ್ನ ಕೋರ್ಟ್ ಸಾಬೀತು ಪಡಿಸಿದೆ. ಪ್ರಧಾನಿ ಮೋದಿ ಕೂಡ ದೆಹಲಿ ರೇಪ್ ಕ್ಯಾಪಿಟಲ್ ಅಂದಿದ್ರು. ಅದಕ್ಕೆ ಯಾರೂ ಚಕಾರ ಎತ್ತಿಲ್ಲ. ಉನ್ನಾವ್‌, ಕತುವಾ ಘಟನೆಗಳು ಉತ್ತಮ ಉದಾಹರಣೆ. ಇವೆಲ್ಲಾ ವೈಫಲ್ಯವನ್ನು ಮುಚ್ವಿಕೊಳ್ಳಲು ಕೇಂದ್ರ  ಹೊಸ ಹೊಸ ಇಷ್ಯೂ ಹುಟ್ಟುಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಉನ್ನಾವ್‌ ರೇಪ್‌ ಕೇಸ್‌: ಬಿಜೆಪಿ ಉಚ್ಛಾಟಿತ ಶಾಸಕ ದೋಷಿ!

ದೆಹಲಿ ರೇಪ್ ಕ್ಯಾಪಿಟಲ್ ಎಂದು ರಾಹುಲ್‌ ಗಾಂಧಿ ಹೇಳಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತುಮಕೂರಿನ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

'ಹೆಸರಿನ ಹಿಂದೆ ಸಾರಾ ಇದ್ದವರೆಲ್ಲ ನನ್ನ ಸಹೋದರರಲ್ಲ..'!

click me!