* ಕೆರೆಯ ಆವರಣದಲ್ಲಿ ವಿವಿಧ ಸರ್ಕಾರಿ ಕಚೇರಿಗಳ ಸ್ಥಾಪನೆಗೆ ಅವಕಾಶ
* ಕೆರೆಯಲ್ಲಿಯೇ ಪ್ರಮುಖ ರಸ್ತೆ ನಿರ್ಮಾಣ
* ಉಳಿಸುವವರೇ ನುಂಗಿದ್ದಾರೆ
ಶಿವಕುಮಾರ ಕುಷ್ಟಗಿ
ಗದಗ(ಜೂ.25): ಗದಗ-ಬೆಟಗೇರಿ ಅವಳಿ ನಗರದ ಅಮೂಲ್ಯ ಆಸ್ತಿಯಾಗಿರುವ ಭೀಷ್ಮಕೆರೆ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲಿಯೇ ಇದೇ ವಿಷಯವಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಒತ್ತುವರಿಯಾಗಿರುವ ಒಟ್ಟು ಕಟ್ಟಡಗಳಲ್ಲಿ ಸರ್ಕಾರಿ ಕಟ್ಟಡಗಳೇ ಹೆಚ್ಚಾಗಿದ್ದು, ಅವುಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಮುಂದಾಗಬೇಕಿದೆ.
undefined
ಲೋಕೋಪಯೋಗಿ ಇಲಾಖೆಯೇ ಹೆಚ್ಚು
ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯ ಪಕ್ಕದಲ್ಲಿಯೇ ಗದಗನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾಯ್ದು ಹೋಗಿದ್ದು, ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದ ವೇಳೆಯಲ್ಲಿ 2014ರಲ್ಲಿ ಈ ರಸ್ತೆಯನ್ನು ಅಗಲೀಕರಣ ಮಾಡಿ ದ್ವಿಪಥ ರಸ್ತೆಯನ್ನಾಗಿ ಮಾಡಲು ತೀರ್ಮಾನಿಸಿ ಕ್ರಮ ಕೈಗೊಳ್ಳಲಾಯಿತು. ಆದರೆ ದ್ವಿಪಥ ರಸ್ತೆ ನಿರ್ಮಿಸಲು ಭೀಷ್ಮಕೆರೆಯ ಒಂದು ಭಾಗವನ್ನೇ ಪೂರ್ಣ ಪ್ರಮಾಣದಲ್ಲಿ ಮುಚ್ಚಿ ರಸ್ತೆ ನಿರ್ಮಿಸಲಾಗಿದ್ದು, ಸದ್ಯ ಸರ್ವೇ ಇಲಾಖೆ ನಡೆಸಿರುವ ಕೆರೆಯ 20 ಗುಂಟೆಗೂ ಅಧಿಕ ಸ್ಥಳವನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸಿದ್ದು ಲೋಕೋಪಯೋಗಿ ಇಲಾಖೆಯ ದೊಡ್ಡ ಪ್ರಮಾದವಾಗಿದೆ.
ಗದಗ: ಭೀಷ್ಮ ಕೆರೆ ಆವರಣದ 101 ಅಕ್ರಮ ಕಟ್ಟಡ ಮಾಲೀಕರಿಗೆ ನೊಟೀಸ್..!
ಸರ್ಕಾರಿ ಇಲಾಖೆಗಳೂ ಇವೆ
ಸದ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮದಂತೆ ಗುರುತಿಸಲಾಗಿರುವ ಒಟ್ಟು ಕಟ್ಟಡಗಳಲ್ಲಿ ಸರ್ಕಾರಿ ಇಲಾಖೆಗಳೂ ಇದ್ದು, ಲೋಕೋಪಯೋಗಿ, ಅರಣ್ಯ ಇಲಾಖೆ, ಕೃಷಿ ವಿಸ್ತರಣಾ ಇಲಾಖೆ, ತೋಟಗಾರಿಕಾ ಇಲಾಖೆ ಹೀಗೆ ಸರ್ಕಾರದಿಂದ ಕೆರೆ ಒತ್ತುವರಿಯಾಗಿದ್ದು, ಹಲವು ಸಂಶಯಕ್ಕೆ ಕಾರಣವಾಗುತ್ತಿದೆ. ಇನ್ನು 80 ಕ್ಕೂ ಹೆಚ್ಚು ಖಾಸಗಿ ಕಟ್ಟಡಗಳಿದ್ದು ಅವರೆಲ್ಲರಿಗೂ ಈಗ ಆತಂಕ ಶುರುವಾಗಿದೆ, ಆಸ್ತಿ ಖರೀದಿಸುವ ಪೂರ್ವದಲ್ಲಿಯೇ ಈ ವಿಚಾರಗಳನ್ನು ಅವರು ಗಮನಿಸದೇ ಖರೀದಿಸಿ ಸದ್ಯ ನಗರಸಭೆಯಿಂದ ನೋಟಿಸ್ ಪಡೆದು ಪೇಚಾಡುವಂತಾಗಿದೆ.
ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್: ಸಚಿವ ಶ್ರೀರಾಮುಲು
ಉಳಿಸುವವರೇ ನುಂಗಿದ್ದಾರೆ
ಕೆರೆಗಳು ದೇಶದ ಆಸ್ತಿ, ಅವುಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಡುಗೆ ನೀಡಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ, ಈ ವಿಷಯದಲ್ಲಿ ಸಾರ್ವಜನಿಕರು ಎಡವಿದ ವೇಳೆಯಲ್ಲಿ ಅದನ್ನು ರಕ್ಷಿಸಿ ಉಳಿಸುವ ಜವಾಬ್ದಾರಿ ಆಳುವ ಸರ್ಕಾರಗಳದ್ದಾಗಿರುತ್ತದೆ, ಆದರೆ ವಿಚಿತ್ರವೆನ್ನುವಂತೆ ಯಾರು ಅದನ್ನು ಕಾವಲು ಕಾಯಬೇಕಿತ್ತೋ, ಅವರೇ ಯಥೇಚ್ಛವಾಗಿ ಒತ್ತುವರಿ ಮಾಡಿ ಸರ್ಕಾರದ ಕಟ್ಟಡಗಳನ್ನು ಕಟ್ಟಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ, ನೋಟಿಸ್
ಗದಗ ಹುಬ್ಬಳ್ಳಿ ರಸ್ತೆ ವಿಸ್ತಾರದ ಸಂದರ್ಭದಲ್ಲಿ ಕೆರೆಯನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸುವಂತೆ ಸರ್ಕಾರ ಸೂಚಿಸಿರಲಿಲ್ಲ, ಆ ರೀತಿಯಲ್ಲಿ ಹೆದ್ದಾರಿಗಳನ್ನು ನಿರ್ಮಿಸುವಂತಿಲ್ಲ, ರಸ್ತೆ ಪಕ್ಕದಲ್ಲಿ ಕೆರೆಗಳಿದ್ದರೆ, ಅದರ ಪಕ್ಕದಲ್ಲಿಯೇ ಇರುವ ಸಾರ್ವಜನಿಕರ ಆಸ್ತಿಯನ್ನು ಸೂಕ್ತ ಪರಿಹಾರ ನೀಡಿ ಖರೀದಿಸಿ ಅಲ್ಲಿ ರಸ್ತೆ ನಿರ್ಮಿಸಬೇಕು, ಆದರೆ ಗದಗ ನಗರದ ಭೀಷ್ಮಕೆರೆಯ ವಿಷಯದಲ್ಲಿ ಹಾಗಾಗದೇ ಕೆರೆಯನ್ನು ವ್ಯಾಪಕವಾಗಿ ಒತ್ತುವರಿ ಮಾಡಿ ಈ ಹಿಂದೆ ಲೋಕೋಪಯೋಗಿ ಅಧಿಕಾರಿಗಳು ರಸ್ತೆ ನಿರ್ಮಿಸಿದ್ದು, ಈಗಿರುವ ಅಧಿಕಾರಿಗಳು ನೋಟಿಸ್ ತೆಗೆದುಕೊಂಡಿದ್ದಾರೆ.