* ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಡೂರು ಗ್ರಾಮದಲ್ಲಿ ನಡೆದ ಮದುವೆ
* ಮಂತ್ರ ಮಾಂಗಲ್ಯ ಮದುವೆಗೆ ಸಾಕ್ಷಿಯಾದ ಗುಡೂರ ಗ್ರಾಮ
* ಮಾಯಾವತಿ ಅವರನ್ನ ವರಿಸಿದ ತಿರುಪತಿ
ಕಾರಟಗಿ(ಜೂ.25): ಭಾಜಾ ಭಜಂತ್ರಿಗಳಿಲ್ಲ, ಮಂತ್ರವಾಧ್ಯಗಳಿಲ್ಲ, ಯಾವುದೇ ಆಡಂಬರ ಸಂಭ್ರಮವಿಲ್ಲದಂಥ ವೇದಿಕೆಯಲ್ಲಿ ಯುವಕ ಯುವತಿ ಇಬ್ಬರೂ ‘ಮಂತ್ರ ಮಾಂಗಲ್ಯ’ದ ಸರಳ ಮದುವೆ ಸೂತ್ರ ಅನುಸರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ಮಂತ್ರ ಮಾಂಗಲ್ಯ ವಿನೂತನ ಸರಳ ವಿವಾಹ ತಾಲೂಕಿನ ಗುಡೂರು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಮದುವೆಗೆ ಇಡೀ ಗ್ರಾಮವೇ ಸಾಕ್ಷಿಯಾಯಿತು.
ಗುಡೂರು ಗ್ರಾಮದ ಶಿಕ್ಷಕ ತಿರುಪತಿ ಅವರು ತಮ್ಮ ಸಹೋದರ ಶಂಕರ್ ಮತ್ತು ಬಳ್ಳಾರಿ ಜಿಲ್ಲೆ ಸಿರುಗುಪ್ಪಾ ತಾಲೂಕಿನ ಇಬ್ರಾಹಿಂಪುರದ ಯಂಕಪ್ಪ ಅವರ ಪುತ್ರಿ ಮಾಯಾವತಿ ಇವರ ನಡುವೆ ಈ ಮಂತ್ರ ಮಾಂಗಲ್ಯದ ಮದುವೆ ನೆರವೇರಿಸಿದರು.
undefined
ಒಪ್ಪೊತ್ತಿನ ಊಟಕ್ಕೂ ತತ್ವಾರ: ಸೈಕಲ್ ರಿಪೇರಿಯರ್ ಪುತ್ರಿ ಪಿಯುಸಿಯಲ್ಲಿ ಟಾಪರ್..!
ರಾಷ್ಟ್ರಕವಿ ಕುವೆಂಪುರವರ ಕನಸಿನ ಮಂತ್ರ ಮಾಂಗಲ್ಯ ಸರಳ ಮದುವೆ ವಿಧಾನದ ಮೂಲಕ ತಾಲೂಕಿನ ಗುಡೂರು ಗ್ರಾಮದ ಶಿಕ್ಷಕ ಎಚ್. ತಿರುಪತಿ ತಮ್ಮ ಸಹೋದರ ಶಂಕರ್ ಅವರ ವಿವಾಹವನ್ನು ಗ್ರಾಮಸ್ಥರ ಸಮಕ್ಷಮದಲ್ಲಿ ನೆರವೇರಿಸುವ ಮೂಲಕ ಗ್ರಾಮದಲ್ಲಿ ಹೊಸ ವಿನೂತನ ಪದ್ಧತಿಗೆ ನಾಂದಿ ಹಾಡಿದರು. ಜತೆಗೆ ಕೆಲ ಸಂಪ್ರದಾಯಸ್ಥ ಹಿರಿಯ ಕಿರಿಯರನ್ನೂ ಅಚ್ಚರಿಗೊಳಪಡಿಸಿದರು. ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ವಧುವರರಿಗೆ ‘ವಿವಾಹ ಸಂಹಿತೆ’ ಹಾಗೂ ‘ಆಹಾರ ಸಂಹಿತೆ’ಯನ್ನು ಬೋಧಿಸಿದರು.
ಶಿಕ್ಷಕ ದೇವೇಂದ್ರಪ್ಪ ಮಾತನಾಡಿದರು. ಶಿಕ್ಷಕರಾದ ಶರಣಪ್ಪ ಉಪ್ಪಾರ, ಉಪನ್ಯಾಸಕರಾದ ವಿರುಪಾಕ್ಷ ದೇಶಮುಖ್, ಹನುಮಂತಪ್ಪ ಚಂದಲಾಪುರ, ದೇವಪ್ಪ ಗುಡೂರು, ಯಮನೂರಪ್ಪ ಪೊಲೀಸಪಾಟೀಲ್, ಜಡಿಯಪ್ಪಗೌಡ, ಸಿದ್ದಣ್ಣ ಧಾರವಾಡ, ಬಸವರಾಜ ಬ್ಯಾಳಿ, ಹನುಮಂತಪ್ಪ ಜನಕಮನಿ ಸೇರಿ ವಧು- ವರರ ಕುಟುಂಬದ ಹುಲಿಗೆಮ್ಮ ಗುಡೂರು, ಎಚ್. ಶಂಕ್ರಪ್ಪ ಶರಣಪ್ಪ ವೀರಾಪೂರು, ಕೆಂಚಮ್ಮ ಗುಡೂರು, ಯಂಕಪ್ಪ ಇಬ್ರಾಹಿಂಪುರ, ಪ್ರಭಾವತಿ ಇಬ್ರಾಹಿಂಪುರ ಇದ್ದರು.