ಡಿ.ಕೆ. ಸೋದರರ ಆಪ್ತ ಇಕ್ಬಾಲ್‌ ಹುಸೇನ್‌ಗೆ ಇ.ಡಿ. ನೋಟಿಸ್‌

By Kannadaprabha News  |  First Published Jun 25, 2022, 2:17 PM IST

*  ಜೂ. 27ರಂದು ವಿಚಾರಣೆಗೆ ಹಾಜರಾಗಲು ಸೂಚನೆ
*  ನೋಟಿಸ್‌ ಪಡೆದ ಕೂಡಲೇ ದೆಹಲಿಗೆ ತೆರಳಿದ ಇಕ್ಬಾಲ್‌ ಹುಸೇನ್‌ 
*  ನನ್ನ ವ್ಯವಹಾರ ಪಾರದರ್ಶಕ: ಇಕ್ಬಾಲ್‌
 


ರಾಮನಗರ(ಜೂ.25):  ಡಿ.ಕೆ.ಸಹೋದರರ ಆಪ್ತರಾಗಿರುವ ರಾಮನಗರದ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ಗೆ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್‌ ಜಾರಿ ಮಾಡಿದ್ದು, ಜೂನ್‌ 27ರಂದು ದೆಹಲಿಯಲ್ಲಿ ವಿಚಾರಣೆಗೆ

ಹಾಜರಾಗುವಂತೆ ಸೂಚಿಸಿದೆ. ಇಡಿ ಇಕ್ಬಾಲ್‌ ಅವರಿಗೆ ಗುರುವಾರ ಸಂಜೆ ಇ-ಮೇಲ್‌ ಮೂಲಕ ನೋಟಿಸ್‌ ನೀಡಿದ್ದು, ಖುದ್ದು ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ. ನೋಟಿಸ್‌ ಪಡೆದ ಕೂಡಲೇ ಇಕ್ಬಾಲ್‌ ಹುಸೇನ್‌ ದೆಹಲಿಗೆ ತೆರಳಿದ್ದಾರೆ.
ಡಿ.ಕೆ.ಶಿವಕುಮಾರ್‌ ಆಪ್ತರಾದ ಇಕ್ಬಾಲ್‌ 2020ರ ಸೆ.17 ಹಾಗೂ ಅ.1 ರಂದು ಎರಡು ಬಾರಿ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಮೊದಲ ವಿಚಾರಣೆ ಸಂದರ್ಭ ಇ.ಡಿ. ಅಧಿಕಾರಿಗಳು ಕಳೆದ 10 ವರ್ಷದಲ್ಲಿನ ಆದಾಯದ ಮೂಲ ಹಾಗೂ ಬ್ಯಾಂಕ್‌ ವಿವರ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಎರಡನೇ ವಿಚಾರಣೆ ಸಂದರ್ಭ ಅಗತ್ಯ ದಾಖಲೆಗಳನ್ನು ಅವರು ಅಧಿಕಾರಿಗಳ ಮುಂದೆ ಇಟ್ಟಿದ್ದರು. ಅದರಲ್ಲಿ ಕೆಲವು ಸ್ಪಷ್ಟನೆ ಬಯಸಿ ಮೂರನೇ ವಿಚಾರಣೆಗೆ ಸಮನ್ಸ್‌ ನೀಡಿದ್ದರು. ಈಗ ಅಕ್ರಮ ಹಣ ವಹಿವಾಟು ಸಂಬಂಧ ಇಕ್ಬಾಲ್‌ಗೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.

Tap to resize

Latest Videos

ಬಚ್ಚೇಗೌಡರಿಗೆ ಗಾಳ ಹಾಕಿದ್ರೆ ಮರಿ ಮೀನು ಶರತ್‌ ಗಾಳಕ್ಕೆ ಸಿಕ್ರು: ಡಿಕೆಶಿ

ನನ್ನ ವ್ಯವಹಾರ ಪಾರದರ್ಶಕ: ಇಕ್ಬಾಲ್‌

ನಾನು ಪ್ರಾಮಾಣಿಕ ಹಾಗೂ ಪಾರದರ್ಶಕ ವಾಗಿ ವ್ಯವಹಾರ ಮಾಡುತ್ತಿದ್ದೇನೆ. ಯಾವುದೇ ಅಕ್ರಮ ಮಾಡಿಲ್ಲ. ದಾಖಲೆಗಳನ್ನು ಸಂಗ್ರಹಿಸಲು ಕಾಲವಕಾಶ ನೀಡಿ ಎಂದರು ನೀಡಿಲ್ಲ. ಅದೇನು ಆಗೊತ್ತೊ ನೋಡೊಣ. ನಾನು ಪ್ರಮಾಣಿಕವಾಗಿದ್ದೇನೆ. ವಿಚಾರಣೆಗೆ ಹಾಜರಾಗುತ್ತೇನೆ ಅಂತ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ತಿಳಿಸಿದ್ದಾರೆ.  
 

click me!