Bengaluru – Mysuru Expressway: ರಾಷ್ಟ್ರೀಯ ಪ್ರಾಧಿಕಾರದ ಲೆಟ್‌ ಹರಿದು ಹಾಕಿದ ಮಂಡ್ಯ ಜನರು: ಪೊಲೀಸರಿಂದ ಲಾಠಿ ಚಾರ್ಜ್‌

Published : Feb 20, 2023, 12:10 PM IST
Bengaluru – Mysuru Expressway: ರಾಷ್ಟ್ರೀಯ ಪ್ರಾಧಿಕಾರದ ಲೆಟ್‌ ಹರಿದು ಹಾಕಿದ ಮಂಡ್ಯ ಜನರು: ಪೊಲೀಸರಿಂದ ಲಾಠಿ ಚಾರ್ಜ್‌

ಸಾರಾಂಶ

ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡುತ್ತಿದ್ದ ಗ್ರಾಮಸ್ಥರು ಮತ್ತು ರೈತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮಂಡ್ಯ (ಫೆ.20): ಬೆಂಗಳೂರು - ಮೈಸೂರು ದಶಪಥದಲ್ಲಿ (ರಾಷ್ಟ್ರೀಯ ಹೆದ್ದಾರಿ) ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡುತ್ತಿದ್ದ ಗ್ರಾಮಸ್ಥರು ಮತ್ತು ರೈತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮಂಡ್ಯದ ಬಳಿಯ ಹನಕೆರೆ ಗ್ರಾಮದಲ್ಲಿ ಹಾದು ಹೋಗಿರುವ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ಗ್ರಾಮಸ್ಥರು ನಡೆಸುತ್ತಿದ್ದರು. ಪ್ರತಿಭಟನೆ ಹಿನ್ನಲೆ ಎರಡುಗಂಟೆಗು ಹೆಚ್ಚು‌ ಕಾಲ ದಶಪಥ ಹೆದ್ದಾರಿ ಬಂದ್ ಆಗಿತ್ತು. ಪೊಲೀಸರ ಮನವಿಗೂ ಬಗ್ಗದೇ ಗ್ರಾಮಸ್ಥರು ನಿರಂತರವಾಗಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದರು. ಕೊನೆಗೆ, ಬಲವಂತವಾಗಿ ಪ್ರತಿಭಟನಕಾರರನ್ನು ಪೊಲೀಸರು ರಸ್ತೆಯಿಂದ ಎಬ್ಬಿಸಿ ಹೊರಗೆ ಕಳುಹಿಸಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಉದ್ವಿಗ್ನ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ರೈತರು ಮತ್ತು ಗ್ರಾಮಸ್ಥರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ತೆರವು ಮಾಡಲಾಗಿದೆ.

ಈಗ ನನ್ನ ತಂದೆ ಮೌಲ್ಯ ಅರ್ಥವಾಗುತ್ತಿವೆ

ಮಂಡ್ಯದ ಹನಕೆರೆಯಲ್ಲಿ ಉದ್ವಿಗ್ನ ವಾತಾವರಣ: ಹನಕೆರೆ ಗ್ರಾಮಸ್ಥರಿಂ‌ದ ಹೆದ್ದಾರಿ ತಡೆದು ಅಂಡರ್ ಪಾಸ್ ನಿರ್ಮಿಸುವಂತೆ ಪ್ರತಿಭಟನೆ ಮಾಡುತ್ತಿದ್ದವರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ವೇಳೆ ಗ್ರಾಮಸ್ಥರನ್ನು ಪಕ್ಕಕ್ಕೆ ಕಳುಹಿಸಿ ರಸ್ತೆಯಲ್ಲಿದ್ದ ಶಾಮಿಯಾನ, ಎತ್ತಿನಗಾಡಿ ತೆರವು ಮಾಡಲು ಮುಂದಾಗಿದ್ದರು. ತೆರವು ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ಮಾಡಿದ್ದಾರೆ. ಈ ವೇಳೆ ಖುದ್ದು ಫೀಲ್ಡ್ ಗಿಳಿದ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಮುಂದಾಗಿದ್ದಾರೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ಪತ್ರ  ಕೊಡಿಸುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಕೊನೆಗೆ, ಗ್ರಾಮಸ್ಥರ ಮನವಿಯನ್ನ ಅಧಿಕಾರಿಗಳ ಗಮನಕ್ಕೆ ತರುವ ಭರವಸೆ ಕೊಟ್ಟರು. 

ಪೊಲೀಸರ ನಡುವೆ ನೂಕಾಟ ತಳ್ಳಾಟ: ಈ ವೇಳೆ ರೈತ ಸಂಘದ ಮುಖಂಡ ಮಧುಚಂದನ್ ಅವರನ್ನ ಬಲವಂತವಾಗಿ ಪೊಲೀಸರು ಹೊತ್ತೊಯ್ದಿದ್ದಾರೆ. ಪೊಲೀಸರು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ಶುರುವಾಗಿದೆ. ಬೆಳಗ್ಗೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟು ಪರ್ಯಾ ಮಾರ್ಗಗಳ ಮೂಲಕ (ಬೆಂಗಳೂರಿನಿಂದ ಬರುವವರಿಗೆ ಮದ್ದೂರು, ಕೆ.ಎಂ.ದೊಡ್ಡಿ, ಮಂಡ್ಯ ಮಾರ್ಗವಾಗಿ ಮೈಸೂರು ಹಾಗೂಮೈಸೂರಿನಿಂದ ಬರುವವರು ಮಂಡ್ಯ, ಕೆ.ಎಂ.ದೊಡ್ಡಿ, ಮದ್ದೂರು ಮೂಲಕ ಬೆಂಗಳೂರಿಗೆ ತೆರಳಬೇಕು) ಹಾದು ಹೋಗಲು ಪೊಲೀಸರು ವ್ಯವಸ್ಥೆ ಮಾಡಿದ್ದರು. ಆದರೆ, ಸುಮಾರು ೨ ಗಂಟೆಗೂ ಅಧಿಕ ಕಾಲ ರಸ್ತೆ ತಡೆ ಮಾಡಿದ್ದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದ್ದನ್ನು ಕಂಡು ರಸ್ತೆ ತೆರವಿಗೆ ಮುಂದಾಗಿದ್ದಾರೆ. 

ಹೆದ್ದಾರಿ ಪ್ರಾಧಿಕಾರದ ಲೆಟರ್‌ ಹರಿದುಹಾಕಿದ ಗ್ರಾಮಸ್ಥರು: ಅಂಡರ್ ಪಾಸ್ ನಿರ್ಮಾಣಕ್ಕಾಗಿ ಹನಕೆರೆ ಗ್ರಾಮಸ್ಥರ ಪ್ರತಿಭಟನೆಯ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಆಗಮಿಸಿದ್ದಾರೆ. ಅಂಡರ್ ಪಾಸ್ ನಿರ್ಮಾಣಕ್ಕೆ ಕಳೆದ ಡಿಸೆಂಬರ್‌ನಲ್ಲೇ ಮನವಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭಿಸಲಾಗುವುದು. ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರಿವ ಪತ್ರ ತೋರಿಸಿದ ಎಂಜಿನಿಯರ್. ಎಂಜಿನಿಯರ್ ತಂದಿದ್ದ ಪತ್ರ ಹರಿದ ಪ್ರತಿಭಟನಾಕಾರರು. ಹಲವು ತಿಂಗಳಿನಿಂದಲೂ ಇದೇ ಕಾರಣ‌ ಕೊಡುತ್ತಾ ಬಂದಿದ್ದೀರಿ. ಈಗಲೂ ಹಳೆ ಲೆಟರ್ ಹಿಡಿದು ಬಂದಿದ್ದೀರಿ, ಈ ಪತ್ರಕ್ಕೆ ಯಾವುದೇ ಮಹತ್ವ ಇಲ್ಲ. ತತಕ್ಷಣ ಅಂಡರ್ ಪಾಸ್ ನಿರ್ಮಾಣ ಆರಂಭಿಸಿ ಎಂದು ತಾಕೀತು. ನಿಮಗೆ ಯಾವುದೇ ಕಿರೀಟ ಹಾಕಿಲ್ಲ, ನೀವು ಜನಸೇವಕರು. ಅಹಂಕಾರ ಬಿಟ್ಟು ಕೆಲಸ ಮಾಡಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಲಘು ಲಾಠಿ ಪ್ರಹಾರ ಮಾಡಲಾಯಿತು. 

ದಾಸ್ಯ ಜೀವನ ಬಿಟ್ಟು ಮಾತೃಭಾಷೆ ಯೋಚಿಸಿ

ಪ್ರತಿಭಟನೆ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅಸಮಾಧಾನ: ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಹನಕೆರೆ ಗ್ರಾಮಸ್ಥರ ಪ್ರತಿಭಟನೆಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಹೆದ್ದಾರಿ ತಡೆದು ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ರಸ್ತೆ ತೆರವುಮಾಡಲಾಗುವುದು. ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಭರವಸೆ ನೀಡಿದ್ದರು. ಆ‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಪೋಸ್ಟ್‌‌ ಮಾಡಿದ ಬೆನ್ನಲ್ಲೇ ಲಾಠಿ ಚಾರ್ಜ್‌ ಮಾಡಲಾಗಿದೆ.

PREV
Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!