Ballari : ದೇವರು ಕೇಳಿದನೆಂದು ನಾಲಿಗೆಯನ್ನೇ ಕೊಯ್ದುಕೊಟ್ಟ ಭೂಪ

By Sathish Kumar KHFirst Published Jan 29, 2023, 5:20 PM IST
Highlights

ಬಳ್ಳಾರಿ ಜಿಲ್ಲೆಯಲ್ಲಿ ಯುವಕನೊಬ್ಬ ಕನಸ್ಸಿನಲ್ಲಿ ದೇವರು ಬಂದು ನನ್ನ ನಾಲಿಗೆಯನ್ನು ಕೇಳಿದ್ದಾನೆಂದು, ತನ್ನ ನಾಲಿಗೆಯನ್ನೇ ಕೊಯ್ದು ದೇವರಿಗೆ ಅರ್ಪಿಸಿದ ಘಟನೆ ನಡೆದಿದೆ.

ಬಳ್ಳಾರಿ (ಜ.29):  ಆಧುನಿಕ ಕಾಲದಲ್ಲಿಯೂ ದೇವರ ಮೇಲೆ ಅತೀವ್ರ ನಂಬಿಕೆಯನ್ನು ಇಟ್ಟುಕೊಂಡು ಪೂಜಿಸುವ ಕೆಲವರಿದ್ದಾರೆ. ಆದರೆ, ಶಿವ ಮೆಚ್ಚಿದ ಕಣ್ಣಪ್ಪ, ಕೋಳೂರ ಕೊಡಗೂಸು ಸೇರಿ ಅನೇಕ ಕಥೆಗಳಲ್ಲಿ ದೇವರಿಗಾಗಿ ಕಣ್ಣು ಕೊಡುವುದು ಪ್ರಾಣ ಕೊಡುವ ಪ್ರಸಂಗಗಳನ್ನು ನಾವು ನೋಡಿದ್ದೇವೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಯುವಕನೊಬ್ಬ ಕನಸ್ಸಿನಲ್ಲಿ ದೇವರು ಬಂದು ನನ್ನ ನಾಲಿಗೆಯನ್ನು ಕೇಳಿದ್ದಾನೆಂದು, ತನ್ನ ನಾಲಿಗೆಯನ್ನೇ ಕೊಯ್ದು ದೇವರಿಗೆ ಅರ್ಪಿಸಿದ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ‌ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಈ ವಿಚಿತ್ರ ದೈವ ಭಕ್ತಿಯ ಘಟನೆ ನಡೆದಿದೆ. ನಾಲಿಗೆಯನ್ನು ಕೊಯ್ದುಕೊಂಡು ದೇವರಿಗೆ ಅರ್ಪಣೆ ಮಾಡುವ ಮೂಲಕ ಅಂಧ ಭಕ್ತಿಯನ್ನು ಪ್ರದರ್ಶಿಸಿದ ಯುವಕನನ್ನು  ವೀರೇಶ್ ಎಂದು ಗುರುತಿಸಲಾಗಿದೆ. ನಾಲಿಗೆ ತುಂಡಾದ ನಂತರ, ತೀವ್ರ ರಕ್ತಸ್ರಾವ ಉಂಟಾಗಿದೆ. ನೋವನ್ನು ತಡೆದುಕೊಳ್ಳಲಾಗದೇ ಮನೆಯ ಹತ್ತಿರ ಬಂದಿದ್ದು, ಗರಾಮಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಯುವಕನಿಗೆ ಚಿಕಿತ್ಸೆ ನೀಡಿದ್ದು, ನಾಲಿಗೆ ಪುನಃ ಶಸ್ತ್ರ ಚಿಕಿತ್ಸೆ ಮೂಲಕ ಜೋಡಣೆ ಮಾಡುವುದು ಅಸಾಧ್ಯವೆಂದು ತಿಳಿಸಿದ್ದಾರೆ.

ಕೋವಿಡ್‌ ಸಂಕಷ್ಟ ಪರಿಹಾರಕ್ಕೆ ದೇವರಲ್ಲಿ ಹರಕೆ ಹೊತ್ತ ಅಜ್ಜಿ: 200 ಕಿಮೀ ನಿರಂತರ ಉರುಳು ಸೇವೆ

ದೇವರು ಒಲಿಸಿಕೊಳ್ಳಲು ನಾಲಿಗೆ ದಾನ: ಇನ್ನು ಉಪ್ಪಾರ ಹೊಸಹಳ್ಳಿಯಲ್ಲಿ ಶಂಕರಪ್ಪ ತಾತ ಎಂಬ ದೇವರಿದೆ. ಶಂಕರಪ್ಪ ತಾತ ಪವಾಡ ಪುರುಷನಾಗಿದ್ದು, ದೇವರ ಒಲಿಸಿಕೊಳ್ಳೋಕೆ ವೀರೇಶ್‌ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯೊಂದಿಗೆ ಎಂದಿನಂತೆ ದೇವಸ್ಥಾನಕ್ಕೆ ತೆರಳುವಾಗ ವೀರೇಶ್ ತನ್ನೊಂದಿಗೆ ಹರೊತವಾಗಿರುವ ಹೊಸದೊಂದು ಚಾಕುವನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಾನೆ. ನಂತರ, ದೇವರ ಮುಂದೆ ಪ್ರಾರ್ಥನೆ ಮಾಡಿ, ಅಲ್ಲಿಯೇ ಚಾಕುವನ್ನು ತೆಗೆದುಕೊಂಡು ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ. ನಂತರ ದೇವರ ಮುಂದೆ ನಾಲಿಗೆಯನ್ನು ಇಟ್ಟಿದ್ದಾರೆ. ನಂತರ ರಕ್ತಸ್ರಾವ ಉಂಟಾಗಿ ಪರದಾಡಿದ ಪ್ರಸಂಗ ನಡೆದಿದೆ. ಗ್ರಾಮಸ್ಥರು ನಾಲಿಗೆ ಸಮೇತವಾಗಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಗ್ಯಕ್ಕೆ ಸಮಸ್ಯೆಯಿಲ್ಲ: ಆಸ್ಪತ್ರೆಗೆ ದಾಖಲಾಗಿರುವ ವೀರೇಶ್‌ ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ನಾಲಿಗೆಯನ್ನು ಕತ್ತರಿಸಿಕೊಂಡ ಜಾಗದಲ್ಲಿ ತೀವ್ರ ರಕ್ತಸ್ರಾವ ಉಂಟಾಗುತ್ತಿದ್ದು, ರಕ್ತಸ್ರಾವ ನಿಲ್ಲಿಸಲು ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲವು ದಿನಗಳವರೆಗೆ ಬಾಯಿಂದ ಊಟ ಮಾಡಲು ಸಾಧ್ಯವಾಗುವುದಿಲ್ಲ. ದ್ರವ ಪದಾರ್ಥದ ಆಹಾರವನ್ನು ಪೈಪ್‌ನ ಮೂಲಕ ನೇರವಾಗಿ ಗಂಟಲು ಸೇರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ಕೆಲವು ದಿನಗಳ ಕಾಲ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

Siddeshwara Swamiji: ಕಣ್ತುಂಬಿ ಬಂದ ಭಾವುಕ ಭಕ್ತಿ: ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಹಾತೊರೆದ ಅಜ್ಜಿ

click me!