ಹಿಂದು ಸಮಾಜ ಷಂಡ ಸಮಾಜವಲ್ಲ ಎಂದಿರುವ ಪಂಪ್ ವೇಲ್, ಗುಜರಾತ ದುರಂತವನ್ನು ಹಿಂದುಗಳ ಪರಾಕ್ರಮಕ್ಕೆ ಹೋಲಿಸಿದ್ದಾರೆ. 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ, ಇದು ಹಿಂದುಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆ ಎಂದಿದ್ದಾರೆ.
ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.
ತುಮಕೂರು (ಜ.29) : ಬಿಬಿಸಿ ಗುಜರಾತ್ ಹತ್ಯಾಕಾಂಡದ ಕಿರುಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ ವಿಶ್ವಹಿಂದು ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
undefined
ಹಿಂದು ಸಮಾಜ ಷಂಡ ಸಮಾಜವಲ್ಲ ಎಂದಿರುವ ಪಂಪ್ ವೇಲ್, ಗುಜರಾತ ದುರಂತವನ್ನು ಹಿಂದುಗಳ ಪರಾಕ್ರಮಕ್ಕೆ ಹೋಲಿಸಿದ್ದಾರೆ. 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ, ಇದು ಹಿಂದುಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆ ಎಂದಿದ್ದಾರೆ.
ವಿವಾದದ ನಡುವೆ ಕೇರಳದಲ್ಲಿ ಕಾಂಗ್ರೆಸ್‌ನಿಂದ ಮೋದಿ ವಿರುದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!
ತುಮಕೂರಿನಲ್ಲಿ ನಡೆದ ಬಜರಂಗದಳ(Bajrangadala)ದ ಶೌರ್ಯಯಾತ್ರೆ(Shourya yatre) ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪಂಪ್ ವೇಲ್, ಭಾಷಣದ ಉದ್ದಕ್ಕೂ ಅನ್ಯ ಕೋಮಿನ ವಿರುದ್ಧ ಹರಿಹಾಯ್ದಿದ್ದಾರೆ.
ಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ ಒಂದು ಸಲ ಗುಜರಾತ್ ನೆನೆಪು ಮಾಡಿಕೊಳ್ಳಿ, ಅಯೋಧ್ಯೆ(Ayodhye)ಯ ರಾಮ ಮಂದಿರಕೋಸ್ಕರ 58 ಜನ ಸೈನಿಕರು ಪ್ರಾಣತೆತ್ತರು ನಿಜ, ಘಟನೆ ಬಳಿಕ ಗುಜರಾತ್(Gujarat) ಯಾವ ರೀತಿ ಉತ್ತರ ಕೊಡ್ತು, ಯಾವ ಹಿಂದೂನು ಮನೆಯಲ್ಲಿ ಕುಂತಿಲ್ಲ ರಸ್ತೆಗೆ ಇಳಿದ್ರು, ಮನೆ ಮನೆಗೆ ನುಗ್ಗಿದ್ರು, ಕರಸೇವಕರ ಹತ್ಯೆ ನಡೆದಿದ್ದು 58 ಆದರೆ, ಗುಜರಾತಿನಲ್ಲಿ ನಂತರ ನಡೆದ ಹತ್ಯೆಯ ಸಂಖ್ಯೆ ಎಷ್ಟು ಎಂದು ಲೆಕ್ಕ ಸಿಕ್ಕಿಲ್ಲ, ಸುಮಾರು 2 ಸಾವಿರ ಹತ್ಯೆಯಾಗಿದೆ, ಇದು ಹಿಂದುಗಳ ಪರಾಕ್ರಮ ಎಂದು ಗುಜರಾತ್ ಗಲಭೆಯನ್ನು ಹಾಡಿ ಹೊಗಳಿದರು.
ರಾಜ್ಯ ಹಿಂದುತ್ವದ ಫ್ಯಾಕ್ಟರಿ ಆಗಲಿದೆ:
ಕರಾವಳಿಯನ್ನು ಬಿಜೆಪಿ ಹಿಂದುತ್ವದ ಫ್ಯಾಕ್ಟರಿ ಮಾಡಿಕೊಂಡಿದೆ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದ ಶರಣ್ ಪಂಪ್ ವೇಲ್(Sharan Pampavel), ಅನಿವಾರ್ಯ ಅವಶ್ಯಕತೆ ಬಂದರೆ ಹೊಡೆದಾಟ ಮಾಡ್ತಿವಿ ನುಗ್ಗಿ ಹೊಡೆದೇ ಹೊಡಿತಿವಿ.
16.5 ಕೋಟಿ ಭಾರತೀಯರ ಸಾವಿಗೆ ಕಾರಣವಾಗಿರುವ ಬ್ರಿಟಿಷರಿಂದ ಭಾರತಕ್ಕೆ ಮಾನವ ಹಕ್ಕು ಪಾಠ!
ಕಾಂಗ್ರೆಸ್ ನ ಪ್ರಮುಖ ನಾಯಕ. ಅವರನ್ನು ಕೆಲವರು ಖಾನ್ ಎಂದು ಕರೆಯುತ್ತಾರೆ ಅವರೇ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದ ಪಂಪವೆಲ್, ಸಿದ್ದರಾಮಯ್ಯನವರು, ನಮ್ಮ ನೆಲ ಮಂಗಳೂರಿಗೆ ಬಂದು ಹೇಳುತ್ತಾರೆ, ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಫ್ಯಾಕ್ಟರಿ ಆಗಿದೆ ಎಂದು, ಅರೇ ಸಿದ್ದರಾಮಯ್ಯನವರೇ ನೆನಪಿರಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ.. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಬಜರಂಗದಳ ಶೌರ್ಯ ಯಾತ್ರೆ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳೂ ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದು ಎಚ್ಚರಿಕೆ ನೀಡಿದರು.