ನಂದಿಬೆಟ್ಟದ ಬಳಿ ಅಪಾಯಕಾರಿ ಟ್ರಕ್ಕಿಂಗ್‌: ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕರು

By Sathish Kumar KH  |  First Published Jan 29, 2023, 4:40 PM IST

ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದ ಸಾಲಿನಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಟ್ರಕ್ಕಿಂಗ್ ಮಾಡುವಾಗ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದಿರುವ ಘಟನೆ ನಡೆದಿದೆ. 


ಚಿಕ್ಕಬಳ್ಳಾಪುರ (ಜ.29):  ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದ ಸಾಲಿನಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಟ್ರಕ್ಕಿಂಗ್ ಮಾಡುವಾಗ ಇಬ್ಬರು ಯುವಕರು ಪ್ರಪಾತಕ್ಕೆ ಬಿದ್ದಿರುವ ಘಟನೆ ಇಂದು ನಡೆದಿದೆ. 

ನಂದಿ ಬೆಟ್ಟದ ಸಾಲಿನಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಇಬ್ಬರು ಯುವಕರು ಟ್ರಕ್ಕಿಂಗ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರಪಾತಕ್ಕೆ ಬಿದ್ದಿದ್ದು ಇಬ್ಬರು ಯುವಕರು ಅಪಾಯಕ್ಕೆ ಸಿಲುಕಿಕೊಂಡು ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಘಟನೆ ತಿಳಿದ ನಂತರ ಚಿಕ್ಕಬಳ್ಳಾಪುರದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಪಾಯಕಾರಿ ಪ್ರಪಾತದಲ್ಲಿ ಸಿಲುಕಿರುವವರಿಂದ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. 

Tap to resize

Latest Videos

ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ

ದೊಡ್ಡಬಳ್ಳಾಪುರ ಮೂಲದ ಯುವಕರು:  ಟ್ರಿಕ್ಕಿಂಗ್‌ ಮಾಡಲು ಹೋಗಿ ಪ್ರಪಾತದಲ್ಲಿ ಸಿಲುಕಿಕೊಂಡಿರುವ  ಇಬ್ಬರು ಯುವಕರು ದೊಡ್ಡಬಳ್ಳಾಪುರ ಮೂಲದವರಾಗಿದ್ದಾರೆ. ಇವರನ್ನು ಮನೋಜ್ ಕುಮಾರ್, ಮಂಜುನಾಥ್ ಎಂದು ಗುರುತಿಸಲಾಗಿದ್ದು, ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ಇವರಿಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಕ್ಷಣಾ ಸಾಮಾಗ್ರಿಗಳ ಮೂಲಕ ರಕ್ಷಣೆಗೆ ಧಾವಿಸಿರುವ ಅಗ್ನಿಶಾಮದ ದಳ ಸಿಬ್ಬಂದಿ ಹರಸಾಹಸಪಟ್ಟು ಇಬ್ಬರು ವಿದ್ಯಾರ್ಥಿಗಳು ಇರುವ ಸ್ಥಳಕ್ಕೆ ಹೋಗುತ್ತಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಕರಲಿಂಗನ್ನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. 

ಒಬ್ಬ ವಿದ್ಯಾರ್ಥಿಗೆ ಗಾಯ: ಟ್ರಕ್ಕಿಂಗ್‌ ಮಾಡುವ ವೇಳೆ ಬೆಟ್ಟದಲ್ಲಿ ಬೆಳಗ್ಗೆ ಬಿದ್ದ ಮಂಜು ಕವಿದ ವಾತಾವರಣದಿಂದ ಇಬ್ಬನಿ ಕರಗಿ ಬೆಟ್ಟದ ಕಲ್ಲು ಬಂಡಗಳ ಸಂದುಗಳಲ್ಲಿ ನೀರು ಹರಿಯುತ್ತಿತ್ತು. ಟ್ರಕ್ಕಿಂಗಗ ಹೋಗುವ ಮುಂಚೆ ಇದನ್ನು ಗಮನಿಸದೇ ತೆರಳಿದ್ದರಿಂದ ಬೆಟ್ಟ ಹತ್ತುವಾಗ ಭಾರಿ ಸಮಸ್ಯೆ ಎದುರಾಗಿದೆ. ಬಂಡೆಯ ಮೇಲೆ ಸತತವಾಗಿ ನೀರು ಹರಿಯುತ್ತಿದ್ದರಿಂದ ಟ್ರಕ್ಕಿಂಗ್‌ ವೇಳೆ ಒಬ್ಬ ವಿದ್ಯಾರ್ಥಿ ಜಾರಿ ಬಿದ್ದು ಗಾಯಗೊಂಡಿದ್ದಾನೆ. ಒಬ್ಬರೇ ಸ್ವತಂತ್ರವಾಗಿ ಬೆಟ್ಟ ಹತ್ತುವುದೇ ಸವಾಲಾಗಿರುವಾಗ ಇನ್ನೊಬ್ಬ ಗಾಯಗೊಂಡ ವ್ಯಕ್ತಿಯನ್ನು ಹೊತ್ತುಕೊಂಡು ಬೆಟ್ಟವನ್ನು ಹತ್ತಲು ಸಾಧ್ಯವಾಗದೇ ಬೆಟ್ಟದ ಪ್ರಪಾತದಲ್ಲಿ ಕುಳಿತು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಚಿಕ್ಕಬಳ್ಳಾಪುರದಲ್ಲಿ ನಾಳೆ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಕೋರ್ಟ್‌ ಅಸ್ತು

ಅಪಾಯಕಾರಿ ಟ್ರಕ್ಕಿಂಗ್‌ ನಿಷೇಧ: ಇನ್ನು ಈ ಘಟನೆ  ನಂದಿಗಿರಿಧಾಮ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿಗೆ ಎಷ್ಟು ಪ್ರಮಾಣದಲ್ಲಿ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸಹಾಯಕ್ಕಾಗಿ ಮೊರೆ ಒಟ್ಟ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ. ಅಗ್ನಿಶಾಮಕದಳದ ನಾಲ್ಕೈದು ಪರಿಣಿತರು ಈಗ ರೋಪ್‌ಗಳ ಮೂಲಕ ಕೆಳಗೆ ಇಳಿಯುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡಿ ಮೇಲಕ್ಕೆ ಕರೆತಂದ ನಂತರವೇ ಘಟನೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆಯಲಾಗುತ್ತದೆ. ಅಪಾಯಕಾರಿ ಟ್ರಕ್ಕಿಂಗ್‌ ಮಾಡುವುದನ್ನು ನಂದಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ನಿಷೇಧ ಮಾಡಿದ್ದರೂ ಇವರು ಹೇಗೆ ಬಂದಿದ್ದಾರೋ ಗೊತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

click me!