ರಾಯಚೂರು: ಸೂಕ್ತ ಚಿಕಿತ್ಸೆ ಸಿಗದೇ RIMSನಲ್ಲಿ ಕಾರ್ಮಿಕ ಸಾವು?

Suvarna News   | Asianet News
Published : Feb 29, 2020, 11:57 AM IST
ರಾಯಚೂರು: ಸೂಕ್ತ ಚಿಕಿತ್ಸೆ ಸಿಗದೇ RIMSನಲ್ಲಿ ಕಾರ್ಮಿಕ ಸಾವು?

ಸಾರಾಂಶ

ಸೂಕ್ತ ಚಿಕಿತ್ಸೆ ಸಿಗದೇ ಕಾರ್ಮಿಕ ಸಾವು| ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದ ಘಟನೆ| ವೈದ್ಯರ ನಿರ್ಲಕ್ಷ ಖಂಡಿಸಿ ಮೃತನ ಕುಟುಂಬಸ್ಥರ ಪ್ರತಿಭಟನೆ| ಹೊಟ್ಟೆ ನೋವು ಎಂದರೂ ಚಿಕಿತ್ಸೆ ನೀಡದ ವೈದ್ಯರು| 

ರಾಯಚೂರು(ಫೆ.29): ಸೂಕ್ತ ಚಿಕಿತ್ಸೆ ಸಿಗದೇ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಗರದ ರಿಮ್ಸ್‌ ಆಸ್ಪತ್ರೆಯಲ್ಲಿ ಇಂದು(ಶನಿವಾರ) ನಡೆದಿದೆ. ಗುರುಸ್ವಾಮಿ (25) ಎಂಬಾತನೇ ಮೃತಪಟ್ಟ ಕಾರ್ಮಿಕನಾಗಿದ್ದಾನೆ.

ಗುರುಸ್ವಾಮಿ ಶುಕ್ರವಾರ ಕೆಲಸ ಮಾಡುವಾಗ ಮೂರು ಅಂತಸ್ತಿನ ಕಟ್ಟಡದಿಂದ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದ. ತಕ್ಷಣ ಗುರುಸ್ವಾಮಿಯನ್ನ ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎರಡು ಗಂಟೆಗಳ ಬಳಿಕ ಕಾರ್ಮಿಕ ಗುರುಸ್ವಾಮಿನನ್ನ ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ರಾತ್ರಿ ಹೊಟ್ಟೆ ನೋವು ಎಂದರೂ ವೈದ್ಯರು ಚಿಕಿತ್ಸೆ ನೀಡಿರಲಿಲ್ಲ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 
 

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು