ಸುಮಲತಾಗೆ ಸಿಕ್ತು ಮತ್ತೋರ್ವ ಮುಖಂಡನ ಬೆಂಬಲ : ಸಂಸದೆ ಕಾರ್ಯಕ್ಕೆ ಶ್ಲಾಘನೆ

By Kannadaprabha NewsFirst Published Jul 13, 2021, 12:00 PM IST
Highlights
  • ಕೃಷ್ಣರಾಜ ಜಲಾಶಯ ಉಳಿಸಲು ಯಾರೇ ಹೋರಾಟ ಮಾಡಿದರು ಅವರಿಗೆ ನಮ್ಮ ಬೆಂಬಲ
  • ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

 ಮೈಸೂರು (ಜು.13):  ಕೃಷ್ಣರಾಜ ಜಲಾಶಯ ಉಳಿಸಲು ಯಾರೇ ಹೋರಾಟ ಮಾಡಿದರು ಅವರಿಗೆ ನಮ್ಮ ಬೆಂಬಲವಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಸುಮಲತಾ ಅಂಬರೀಷ್‌ ಅವರ ಕಾಳಜಿ ಮೆಚ್ಚುತ್ತೇವೆ. 2008ರ ವರದಿ ಅನ್ವಯ ಕೆಆರ್‌ಎಸ್‌ ಭಾಗದಲ್ಲಿ ಮೆಗಾ ಬ್ಲಾಸ್ಟ್‌ ಮಾಡಿರುವುದರಿಂದ ಡ್ಯಾಂ ಕಂಪನ ಆಗಿದೆ. ಕೆಆರ್‌ಎಸ್‌ ಉಳಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ಶಾಸಕರು ಗಂಭೀರವಾಗಿ ಚಿಂತಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನನ್ನ ಹೋರಾಟಕ್ಕೆ ಯಾರೆಲ್ಲಾ ಸೇರ್ತಾರೆ ಕಾದು ನೋಡಿ: ಸುಮಲತಾ!

ಕೆಆರ್‌ಎಸ್‌ ಅಣೆಕಟ್ಟೆಯನ್ನು ಲಕ್ಷಾಂಂತರ ಮಂದಿ ರೈತರು ಅವಲಂಬಿಸಿದ್ದಾರೆ. ಅಣೆಕಟ್ಟೆಗೆ ಅಪಾಯ ಉಂಟಾದರೆ ಆಗಬಹುದಾದ ಅನಾಹುತ ನೆನಪಿಸಿಕೊಂಡರೆ ಭಯವಾಗುತ್ತದೆ. ಅಣೆಕಟ್ಟೆಉಳಿಸುವ ಸಂಬಂಧ 20 ವರ್ಷದ ಹಿಂದೆಯೇ ರೈತ ಸಂಘದ ಅಧ್ಯಕ್ಷ ಕೆ.ಎಸ್‌. ಪುಟ್ಟಣ್ಣಯ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ಕನ್ನಂಬಾಡಿ ಉಳಿಸಿ, ಗಣಿ ನಿಷೇಧಿಸಿ ಎಂಬ ಘೋಷವಾಕ್ಯದಡಿ ದೊಡ್ಡ ಹೋರಾಟ ನಡೆಸಲಾಗಿತ್ತು. ಮುಂದೆಯೂ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಪ್ರಸ್ತುತ ಅಣೆಕಟ್ಟೆಬಿರುಕು ಬಿಟ್ಟಿಲ್ಲದಿದ್ದರೂ ಮುಂದೆ ಅಪಾಯವಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ ಎಂದರು.

ಮಂಡ್ಯಕ್ಕೆ ಸುಮಲತಾ ಅಂಬರೀಶ್ ಆಹ್ವಾನ: ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಿದ್ದು

ಗಣಿಗಾರಿಕೆ ಮತ್ತು ಸಕ್ಕರೆ ಕಾರ್ಖಾನೆಗಳ ವಿಷಯಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ನಡುವೆ ಒಳ ಒಪ್ಪಂದ ಆಗಿರುವ ಅನುಮಾನವಿದೆ. ಗಣಿ ತಂಟೆಗೆ ನೀವೂ ಬರಬೇಡಿ, ಸಕ್ಕರೆ ಕಾರ್ಖಾನೆ ವಿಷಯಕ್ಕೆ ನಾವೂ ಬರುವುದಿಲ್ಲ ಎಂದು ಒಪ್ಪಂದವಾದಂತಿದೆ. ನಿರಾಣಿ ಅವರು ಪಾಂಡುವಪುರ ಕಾರ್ಖಾನೆ ಬಳಿಕ ಮೈಶುಗರ್‌ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಅಶ್ವತ್‌್ಥ ನಾರಾಯಣರಾಜೇ ಅರಸ್‌, ಪ್ರಸನ್ನ ಎನ್‌.ಗೌಡ, ಪಿ. ಪರಂಕಯ್ಯ, ಮಹೇಶ್‌ ಇದ್ದರು.

click me!