ಭ್ರಷ್ಟಾಚಾರ ಆರೋಪ ಹಿನ್ನೆಲೆ; ಬೇಳೂರು ರಾಘವೇಂದ್ರ ಶೆಟ್ಟಿ ಪಾಸ್‌ಪೋರ್ಟ್ ಜಪ್ತಿ

By Kannadaprabha News  |  First Published Nov 16, 2022, 11:08 AM IST
  • ಬೇಳೂರು ರಾಘವೇಂದ್ರ ಶೆಟ್ಟಿ ಪಾಸ್‌ಪೋರ್ಟ್ಜಪ್ತಿ
  •  ಪಾಸ್‌ಪೋರ್ಟ್ ವಶಕ್ಕಾಗಿ ಪತ್ರ ಬರೆದಿದ್ದ ಡಿ.ರೂಪಾ
  • ಹಲವು ಕೇಸು ಇರುವ ಕಾರಣ ವಶಕ್ಕೆ
  • ಪಾಸ್‌ಪೋರ್ಟ್ ಕಚೇರಿಯಿಂದ ಕ್ರಮ

ಬೆಂಗಳೂರು (ನ.16) : ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ(ಕೆಎಸ್‌ಎಚ್‌ಡಿಸಿಎಲ್‌) ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಅವರ ಪಾಸ್‌ಪೋರ್ಟ್ ಅನ್ನು ಪ್ರಾದೇಶಿಕ ಪಾಸ್‌ಪೋರ್ಚ್‌ ಕಚೇರಿ ವಶಕ್ಕೆ ಪಡೆದಿದೆ.

‘ರಾಘವೇಂದ್ರ ಶೆಟ್ಟಿಅವರ ವಿರುದ್ಧ ಹಲವು ಪ್ರಕರಣಗಳಿವೆ. ಹೀಗಾಗಿ ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆಯಬೇಕು’ ಎಂದು ಕೆಎಸ್‌ಎಚ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ.ಮೌದ್ಗಿಲ್‌ ಅವರು ಪ್ರಾದೇಶಿಕ ಪಾಸ್‌ಪೋರ್ಚ್‌ ಕಚೇರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ನ.7ರಂದು ಶೆಟ್ಟಿಅವರ ಪಾಸ್‌ಪೋರ್ಚ್‌ ವಶಕ್ಕೆ ಪಡೆಯಲಾಗಿದೆ.

Tap to resize

Latest Videos

ಕೆಎಸ್‌ಎಚ್‌ಡಿಸಿಎಲ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ರಾಘವೇಂದ್ರ ಶೆಟ್ಟಿಅವರ ಡೈರೆಕ್ಟರ್‌ ಐಡೆಂಟಿಫಿಕೇಶನ್‌ ನಂಬರ್‌(ಡಿಐಎನ್‌) ಅನರ್ಹವಾಗಿದ್ದರೂ ಈ ವಿಚಾರವನ್ನು ಮುಚ್ಚಿಟ್ಟು ಅವರು ನಿಗಮದ ಅಧ್ಯಕ್ಷರಾಗಿ ಮುಂದುವರೆದು ನಿಗಮದಿಂದ ಲಕ್ಷಾಂತರ ರು. ವೇತನ ಭತ್ಯೆ ಪಡೆದ ಆರೋಪವೂ ಕೇಳಿ ಬಂದಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

Shivamogga: ಬಿಜೆಪಿ ನಾಯಕರ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

ಟಿಕೆಟ್‌ ನೀಡುವುದು ಪಕ್ಷದ ತೀರ್ಮಾನ: ಡಾ.ರಾಜನಂದಿನಿ

ಶಿವಮೊಗ್ಗ: ಯಾರಿಗೇ ಟಿಕೆಟ್‌ ಸಿಕ್ಕಿದರೂ ಪಕ್ಷಕ್ಕೆ ಬದ್ಧಳಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಹೇಳಿದರು. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗರ ಕ್ಷೇತ್ರಕ್ಕೆ ಕಳೆದ ಬಾರಿಯೇ ನಾನು ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೆ. ಪಕ್ಷದಲ್ಲಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯಳಾಗಿ ಕೆಲಸ ಮಾಡಿದ್ದೇನೆ. ತಂದೆಯವರು ಅರ್ಜಿ ಹಾಕುವುದಿಲ್ಲ ಎಂದಿದ್ದರು. ಆ ಮೇಲೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅರ್ಜಿ ಹಾಕದೇ ಇದ್ದರೆ ತಪ್ಪಾಗುತ್ತದೆ ಎಂದು ಹೇಳಿ ಅರ್ಜಿ ಹಾಕಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷಕ್ಕೆ ಅವರ ಅವಶ್ಯಕತೆ ತುಂಬಾ ಇದೆ. ನಾನು ಕೂಡ ಮೊದಲಿನಿಂದಲೂ ತಂದೆಯವರೆ ಅಭ್ಯರ್ಥಿ ಎಂದು ಹೇಳಿದ್ದೇನೆ ಎಂದರು.

ಕಾಗೋಡು ತಿಮ್ಮಪ್ಪ ಅನುಭವದ ಮುಂದೆ ನಾನು ತುಂಬ ಚಿಕ್ಕವಳು. ಅವರೇ ಅಭ್ಯರ್ಥಿಯಾದರೆ ಗೆಲುವು ಸುಲಭ, ಬಾಕಿ ಉಳಿದ ಕೆಲಸವನ್ನು ಆರಾಮಾಗಿ ಮಾಡಿಸುತ್ತಾರೆ. ನಮ್ಮಿಬ್ಬರಲ್ಲಿ ಯಾವುದೇ ಸ್ಪರ್ಧೆಯಿಲ್ಲ, ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ನಾವೇ ಆಭ್ಯರ್ಥಿ ಎಂದು ತಿಳಿದು ಕೆಲಸ ಮಾಡುತ್ತೇವೆ ಎಂದರು.

ಮೋದಿ ಶ್ರಮದಿಂದ ಭಾರತ ಆರ್ಥಿಕವಾಗಿ ಸದೃಢ: ಕೆ.ಎಸ್‌.ಈಶ್ವರಪ್ಪ

ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಮಹಿಳೆ ಎಂದು ಬೆದರಿಕೆ ಹಾಕಿರಬಹುದು. ಆದರೆ ನಾನು ಹಿಂಜರಿಯುವುದಿಲ್ಲ. ಯಾವುದೇ ಕ್ಲಿಷ್ಟಪರಿಸ್ಥಿತಿ ಬಂದರೂ ಎದುರಿಸಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದೇ ನನ್ನ ಗುರಿ ಎಂದರು.

click me!