ಚಿತ್ರದುರ್ಗದಲ್ಲಿರುವ ಸಿಂಥೆಟಿಕ್ ಟ್ರಾಕ್ ಇರುವ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಸರ್ಕಾರ ಇತ್ತೀಚೆಗೆ ಪೇ ಅಂಡ್ ಪ್ಲೇ ಎನ್ನುವ ಹೊಸ ಆದೇಶವನ್ನು ಜಾರಿಗೆ ತಂದಿದೆ. ಇದಕ್ಕೆ ಕ್ರೀಡಾಪುಟುಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.17) : ಇತ್ತೀಚಿನ ದಿನಮಾನದಲ್ಲಿ ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸುವರ ಸಂಖ್ಯೆ ತುಂಬಾ ವಿರಳವಾಗಿದೆ. ಎಲ್ಲಾ ಮಕ್ಕಳು ಆನ್ ಲೈನ್ ಗೇಮ್ಸ್ ಗಳತ್ತ ಒಲವು ತೋರಿಸ್ತಿರೋದಕ್ಕೆ ಕ್ರೀಡಾಂಗಣಕ್ಕೆ ತೆರಳಿ ಕ್ರೀಡೆಯಲ್ಲಿ ಆಡುವವರ ಸಂಖ್ಯೆ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಪ್ರೋತ್ಸಾಹಿಸಿ ಕ್ರೀಡೆಯತ್ತ ಮುಖ ಮಾಡಲು ಜಾಗೃತಿ ಮೂಡಿಸಬೇಕಾದ ಸರ್ಕಾರ, ಶುಲ್ಕ ವಿಧಿಸಿ ಆಟ ಆಡಿ ಎನ್ನುವ ಮೂಲಕ ಕ್ರೀಡಾಪಟುಗಳಲ್ಲಿ ಗೊಂದಲ ಉಂಟು ಮಾಡಿದೆ. ಇದ್ರಿಂದಾಗಿ ಸರ್ಕಾರದ ಹೊಸ ಆದೇಶದ ವಿರುದ್ದ ಕ್ರೀಡಾಪಟುಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಚಿತ್ರದುರ್ಗದಲ್ಲಿರುವ ಸಿಂಥೆಟಿಕ್ ಟ್ರಾಕ್ ಇರುವ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣ. ಸರ್ಕಾರ ಇತ್ತೀಚೆಗೆ ಪೇ ಅಂಡ್ ಪ್ಲೇ ಎನ್ನುವ ಹೊಸ ಆದೇಶವನ್ನು ಜಾರಿಗೆ ತಂದಿದೆ. ಕ್ರೀಡಾಂಗಣಕ್ಕೆ ಬರುವ ಆಟಗಾರರು ಇಂತಿಷ್ಟು ಆಟಕ್ಕೆ ಇಷ್ಟು ಹಣವನ್ನು ಶುಲ್ಕದ ರೀತಿಯಲ್ಲಿ ಪಾವತಿ ಮಾಡಿ ಆಟವಾಡಬೇಕು ಎಂದು ಆದೇಶಿಸಿದೆ. ಇದ್ರಿಂದ ಆಕ್ರೋಶಗೊಂಡ ಗ್ರಾಮೀಣ ಪ್ರತಿಭೆಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಗ್ರಾಮೀಣ ಭಾಗದ ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಲಿದೆ. ಆದ್ರೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಂಗಣಕ್ಕೆ ಬರುವ ಆಟಗಾರರು ಶುಲ್ಕ ಪಾವತಿಸಿ ಎಂದು ಹೇಳುವುದು ಎಷ್ಟು ಸರಿ.
undefined
ಮೊದಲೇ ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳು ಕಷ್ಟಪಟ್ಟು ಸ್ಪೋರ್ಟ್ಸ್ ನಲ್ಲಿ ಭಾಗವಹಿಸುತ್ತಾರೆ. ಆದ್ರೆ ಸರ್ಕಾರ ಇತ್ತೀಚೆಗೆ ಈ ರೀತಿಯ ಕಾನೂನು ಜಾರಿಗೆ ತಂದಿರೋದು ಖಂಡನೀಯ. ಆದ್ದರಿಂದ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಬಡ ಕುಟುಂಬದಿಂದ ಬರ್ತಿರೋ ಗ್ರಾಮೀಣ ಭಾಗದ ಕ್ರೀಡಾಪಟುಗಳು ಉಚಿತವಾಗಿ ಭಾಗವಹಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
8 ವರ್ಷವಾದ್ರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!
ಇನ್ನೂ ಆಟ ಆಡಲಿಕ್ಕೂ ಶುಲ್ಕ ವಿಧಿಸಿ ಆಡುವ ಪರಿಸ್ಥಿತಿ ಬಂತಲ್ಲಪ ಎಂದು ಅನೇಕ ಕ್ರೀಡಾಪಟುಗಳು ಬೇಸರಗೊಂಡಿದ್ದಾರೆ. ಇದಕ್ಕೂ ಮೊದಲು ಕ್ರೀಡಾ ಇಲಾಖೆಯವರು ಕ್ರೀಡಾಂಗಣಗಳ ಸ್ವಚ್ಚತೆ ಹಾಗು ಸೂಕ್ತ ನಿರ್ವಹಣೆ ಮಾಡುವುದು ಬಿಟ್ಟು, ಕ್ರೀಡಾಪಟುಗಳ ಬಳಿ ಶುಲ್ಕ ಪಾವತಿ ಮಾಡಿಸಿಕೊಳ್ತಿರೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಇನ್ನೂ ಶುಲ್ಕದ ವಿವರ ನೋಡೋದಾದ್ರೆ, ದೈನಂದಿನ ಶುಲ್ಕದ ವಿವರ (ಒಂದು ಗಂಟೆಗೆ)ಹೀಗಿರಲಿದೆ. ಈಜು(100 ರೂ), ಟೆನ್ನಿಸ್ (40 ರೂ), ಸ್ಟ್ರಾಪ್ (30 ರೂ), ಜಿಮ್ (30 ರೂ), ಮಹಿಳೆಯರಿಗೆ (20 ರೂ), ಬ್ಯಾಡ್ಮಿಂಟನ್ (50 ರೂ), ಟೇಬಲ್ ಟೆನ್ನಿಸ್ (25 ರೂ), ಅಥ್ಲೆಟಿಕ್ಸ್ (30 ರೂ), ಹಾಕಿ (10 ರೂ), ಬ್ಯಾಸ್ಕೆಟ್‌ಬಾಲ್ (15 ರೂ), ಫುಟ್‌ಬಾಲ್ (10 ರೂ) ಈ ರೀತಿ ನಿಗದಿಪಡಿಸಲಾಗಿದೆ. ಇನ್ನೂ ಈ ಕುರಿತು ಸಿಇಓ ಅವರನ್ನೇ ಕೇಳಿದ್ರೆ, ಸರ್ಕಾರ ಆದೇಶ ಹೊರಡಿಸಿರೋ ಶುಲ್ಕದ ಕುರಿತು ರಾಷ್ಟ್ರೀಯ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿರೋದು ನನ್ನ ಗಮನಕ್ಕೂ ಬಂದಿದೆ. ಜಿಲ್ಲಾ ಮಟ್ಟದಲ್ಲಿ ಫೀಸ್ ಕಡಿಮೆ ಮಾಡುವ ಅಥವಾ ಕ್ರೀಡಾಪಟುಗಳಿಗೆ ರಿಯಾಯಿತಿ ನೀಡುವ ಅವಕಾಶ ಜಿಲ್ಲಾಧಿಕಾರಿಗಳಿಗಿದೆ. ಅವರ ಗಮನಕ್ಕ ಈಗಾಗಲೇ ತರಲಾಗಿದೆ ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
BIG 3: ಕೆಸರುಗದ್ದೆಯಾಗಿರುವ ಸ್ಟೇಡಿಯಂ, ಅಧಿಕಾರಿಗಳಿಂದ ಶೀಘ್ರ ಕ್ರಮದ ಭರವಸೆ
ಮೊದಲೇ ಕ್ರೀಡಾಂಗಣಕ್ಕೆ ತೆರಳಿ ಕ್ರೀಡೆಯಲ್ಲಿ ಪಾಲ್ಗೊಳ್ಳುವವರೇ ಕಡಿಮೆ. ಅಂತದ್ರಲ್ಲಿ ಸರ್ಕಾರ ಪೇ ಅಂಡ್ ಪ್ಲೇ ಎನ್ನುವ ಆದೇಶವನ್ನು ಹೊರಗೆ ತಂದಿರೋದು ನಿಜಕ್ಕೂ ಖಂಡನೀಯ. ಈ ರೀತಿ ಮಾಡೋದ್ರಿಂದ ಅಲ್ಪ ಸ್ವಲ್ಪ ಇರುವ ಕ್ರೀಡಾಸಕ್ತಿಯು ಅವರಲ್ಲಿ ಕಡಿಮೆ ಆಗಬಹುದು. ಆದ್ದರಿಂದ ಕೂಡಲೇ ಸರ್ಕಾರ ಈ ರೀತಿಯ ಆದೇಶ ಹಿಂಪಡೆದು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕಿದೆ.