ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆಯಿಂದ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಆ.17): ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆಯಿಂದ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಬೆಳೆ ಬೆಳೆದ ರೈತರಿಗೆ ಕೃಷಿ ಪ್ರಶಸ್ತಿ ನೀಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಐ ಬಿಜಾಪೂರ ತಿಳಿಸಿದ್ದಾರೆ. ರೈತರು ಕಷ್ಟ ಪಟ್ಟುಬೆಳೆದ ಬೆಳೆಗೆ ಎನಾದರೂ ಗೌರವನ್ನ ಕೊಡಬೇಕಲ್ವಾ..ಅದಕ್ಕೆಹೆಚ್ಚು ಇಳುವರಿ ಹಾಗೂ ಉತ್ತಮ ಬೆಳೆ ಬೆಳೆದ ರೈತರಿಗೆ ಧಾರವಾಡ ಕೃಷಿ ಇಲಾಖೆಯೊಂದು ವಿನೂತನ ಕಾರ್ಯಕ್ರಮವನ್ನ ಮಾಡುತ್ತಿದೆ.ಅನ್ನದಾತರೂ ಮಾಡಬೇಕಿದ್ದು ಇಷ್ಟೆ, ನೀವು ಬೆಳೆದ ಬೆಳೆಗೆ ಬಹುಮಾನವನ್ನ ಪಡೆಯಬೇಕಾದರೆ ನೀವು ಕೇವಲ ಅರ್ಜಿ ಹಾಕಿದರೆ ಸಾಕು ನಿಮಗೆ ನಿಮ್ಮ ಬೆಳೆ ಎಷ್ಡರ ಮಟ್ಟಿಗೆ ಇದೆ, ಎಷ್ಟು ಇಳುವರಿಯನ್ನ ಪಡೆದಿದ್ದಿರಿ, ಅನ್ನೋದರ ಬಗ್ಗೆ ಕೃಷಿ ಇಲಾಖೆ ಪರಿಶಿಲನೆ ಮಾಡಿ ಜಿಲ್ಲಾ ಮಟ್ಟದಲ್ಲಿ, ತಾಲೂಕಾ ಮಟ್ಟದಲ್ಲಿ, ಹೂಬಳಿ ಮಟ್ಟದಲ್ಲಿ ಪ್ರತಿಭಾವಂತ ರೈತರನ್ನ ಗುರುತಿಸಿ ಬಹುಮಾನವನ್ನ ಕೊಡಲು ಮುಂದಾಗಿದೆ.ಮತ್ತು ಅವರು ಸ್ಪರ್ಧಾತ್ಮಕ ಮನೋಭಾವನ್ನ ಹೆಚ್ಚಿಸಲು ಅನೂಕೂಲವಾಗಿವಂತೆ ಒಂದು ಕೆಲಸಕ್ಕೆ ಮುಂದಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಸಕ್ತಿಯುಳ್ಳ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಪ್ರವೇಶ ಶುಲ್ಕ ಭರಣಾ ಮಾಡುವುದು. ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕಾಡಾನೆ ದಾಳಿಗೆ ಗ್ರಾಮಸ್ಥರು ತತ್ತರ: ಅಪಾರ ಕೃಷಿ ಹಾನಿ
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರಿಗೆ ರೂ.25/- ಮತ್ತು ಸಾಮಾನ್ಯ ರೈತರಿಗೆ ರೂ.100/- ಅರ್ಜಿ ಶುಲ್ಕ ಇರುತ್ತದೆ. ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರು ಹಂಗಾಮಿಗೆ ಭತ್ತ (ನೀರಾವರಿ), ಭತ್ತ (ಮಳೆಯಾಶ್ರಿತ), ರಾಗಿ (ಮಳೆಯಾಶ್ರಿತ), ಶೇಂಗಾ (ಮಳೆಯಾಶ್ರಿತ), ತೊಗರಿ (ಮಳೆಯಾಶ್ರಿತ), ಸೋಯಾ ಅವರೆ (ಮಳೆಯಾಶ್ರಿತ), ಗೋವಿನಜೋಳ (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ಸಜ್ಜೆ (ಮಳೆಯಾಶ್ರಿತ), ಜಿಲ್ಲಾ ಮಟ್ಟಕ್ಕೆ ಮುಂಗಾರು ಹಂಗಾಮಿಗೆ ಸೋಯಾ ಅವರೆ (ಮಳೆಯಾಶ್ರಿತ) ಬೆಳೆ ನಿಗದಿಪಡಿಸಲಾಗಿದೆ.
ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ
ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಸಂಬಂಧಿಸಿದಂತೆ, ಧಾರವಾಡ ತಾಲ್ಲೂಕಿಗೆ ಸೋಯಾ ಅವರೆ (ಮಳೆಯಾಶ್ರಿತ), ಹುಬ್ಬಳ್ಳಿ ತಾಲ್ಲೂಕಿಗೆ ಸೋಯಾ ಅವರೆ (ಮಳೆಯಾಶ್ರಿತ), ಕುಂದಗೋಳ ತಾಲ್ಲೂಕಿಗೆ ಶೇಂಗಾ (ಮಳೆಯಾಶ್ರಿತ), ಕಲಘಟಗಿ ತಾಲ್ಲೂಕಿಗೆ ಗೋವಿನಜೋಳ (ಮಳೆಯಾಶ್ರಿತ) ಹಾಗೂ ನವಲಗುಂದ ತಾಲ್ಲೂಕಿಗೆ ಗೋವಿನಜೋಳ (ಮಳೆಯಾಶ್ರಿತ) ಬೆಳೆಗಳನ್ನು ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರು ಪ್ರಕಟಣೆಯಲ್ಲಿ ತಿಉಳಿಸಿದ್ದಾರೆ.