ಮಾಸ್ಕ್‌ ಧರಿಸಿ ಪೊಲೀಸ್‌ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಯ ಬಂಧನ

By Kannadaprabha News  |  First Published Sep 21, 2020, 8:13 AM IST

ಮಾಸ್ಕ್‌ ಧರಿಸಿ ಪೊಲೀಸ್‌ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿ| ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಘಟನೆ| ಕೊರೋನಾ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದನ್ನು ದುರುಪಯೋಗ ಪಡಿಸಿಕೊಂಡ ವ್ಯಕ್ತಿ| 


ನೆಲಮಂಗಲ(ಸೆ.21): ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಲಿಖಿತ ಪರೀಕ್ಷೆಗೆ ಅಭ್ಯರ್ಥಿಯ ಬದಲಾಗಿ ಮಾಸ್ಕ್‌ ಧರಿಸಿ ಪೊಲೀಸ್‌ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿಯೊಬ್ಬ ಸಿಕ್ಕಿಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವರದಿಯಾಗಿದೆ.

ನೆಲಮಂಗಲ ತಾಲೂಕಿನ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ನಡೆದ ನಾಗರಿಕ ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆಗೆ ಅಭ್ಯರ್ಥಿ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ನಿವಾಸಿ ಮಂಜುನಾಥ್‌(21) ಬದಲು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತೇರನಹಳ್ಳಿ ನಿವಾಸಿ ಶಿವಪ್ರಸಾದ್‌ (28) ಪರೀಕ್ಷೆ ಬರೆಯುತ್ತಿದ್ದ. 

Latest Videos

undefined

ಅಪಾಯ ತಪ್ಪಿದ್ದಲ್ಲ: ಕೊರೋನಾ ಗೆದ್ದವರಿಗೆ ಕೇಂದ್ರದ ಹೆಲ್ತ್‌ ಟಿಪ್ಸ್!

ಕೊರೋನಾ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದನ್ನು ದುರುಪಯೋಗ ಪಡಿಸಿಕೊಂಡ ವ್ಯಕ್ತಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿರುವಾಗ ಪರೀಕ್ಷಾ ಕೊಠಡಿಗೆ ಹೆಚ್ಚುವರಿ ಎಸ್ಪಿ ಲಕ್ಷ್ಮೀ ಗಣೇಶ್‌ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಣ್ಣ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ. ನೆಲಮಂಗಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.
 

click me!