ಡ್ರಗ್ ಮಾಫಿಯಾ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಸಾಗಿವೆ. ಇದೀಗ ಮತ್ತಿಬ್ಬರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಮಂಗಳೂರು (ಸೆ.21): ನಗರದಲ್ಲಿ ಶನಿವಾರ ಡ್ರಗ್ಸ್ ಡ್ರಗ್ಸ್ ಸಾಗಣೆ ವೇಳೆ ಶನಿವಾರ ಬಂಧಿತರಾಗಿದ್ದ ಡ್ಯಾನ್ಸರ್, ಕೊರಿಯೊಗ್ರಾಫರ್ ಕಿಶೋರ್ ಅಮನ್ ಶೆಟ್ಟಿ(30) ಮತ್ತು ಅಕೀಲ್ ನೌಶೀಲ್ (28) ಎಂಬಿಬ್ಬರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ನ್ಯಾಯಾಧೀಶರ ಮನೆಗೆ ಆರೋಪಿಗಳನ್ನು ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಭಾನುವಾರ ಇಬ್ಬರನ್ನೂ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಸೋಮವಾರ ಅದರ ವರದಿ ಬರುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ಆರಂಭಿಸುವಂತಿಲ್ಲ. ನೆಗೆಟಿವ್ ವರದಿ ಬಂದರೆ ವಿಚಾರಣೆ ಮುಂದುವರಿಯಲಿದೆ, ಪಾಸಿಟಿವ್ ಬಂದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಚಿಕಿತ್ಸೆ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಗಡೀಲಿ 300 ಕೋಟಿ ರೂ. ಡ್ರಗ್ಸ್ ಎಸೆದು ಪರಾರಿ! ...
ಕಿಶೋರ್ ಮಾದಕ ದ್ರವ್ಯ ವ್ಯಸನಿಯಾಗಿದ್ದರೂ ದಂಧೆ ಶುರು ಮಾಡಿದ್ದು ತೀರ ಇತ್ತೀಚೆಗೆ ಎನ್ನುವ ಅಂಶ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಕೊಕೇನ್ ಮಾತ್ರ ಸೇವನೆ ಮಾಡುತ್ತಿದ್ದ ಆತ ಅಪಾಯಕಾರಿ ಎಂಡಿಎಂಎ ಸೇವನೆ ಮಾಡುತ್ತಿರಲಿಲ್ಲ. ಲಾಕ್‌ಡೌನ್ ವೇಳೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಡ್ರಗ್ಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.