ಎರಡು ತಿಂಗಳ ಕಾಲ ಸತಾಯಿಸಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ 5.41 ಕೋಟಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಈ ವರ್ಷದಲ್ಲಿ ವಾಡಿಕೆಯಷ್ಟುಮಳೆ ಬಂದಿಲ್ಲ. ಅಂದರೆ, ಈವರೆಗೆ ಶೇ.78.66 ರಷ್ಟುಮಾತ್ರ ಮಳೆ ಬಿದ್ದಿದೆ. ಆ 1ರಿಂದ 7 ರವರೆಗೆ ಈ ಅವಧಿಯ ವಾಡಿಕೆಗಿಂತ ಶೇ.200 ಮಳೆಯಾಗಿದೆ.
ಚಿಕ್ಕಮಗಳೂರು(ಆ.09): ಎರಡು ತಿಂಗಳ ಕಾಲ ಸತಾಯಿಸಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಈವರೆಗೆ 5.41 ಕೋಟಿ ನಷ್ಟವಾಗಿದೆ.
ಕಡೂರು, ತರೀಕೆರೆ ಮತ್ತು ಅಜ್ಜಂಪುರ ಹೊರತುಪಡಿಸಿ ಇನ್ನುಳಿದ 5 ಮಲೆನಾಡಿನ ತಾಲೂಕುಗಳಲ್ಲಿ ಮಳೆಯಿಂದ 96.82 ಕಿ.ಮೀ. ರಸ್ತೆ ಹಾಳಾಗಿದೆ. ಇದರಿಂದ 3.48 ಕೋಟಿ, 12 ಸೇತುವೆ ಹಾನಿಯಿಂದ 1,71 ಕೋಟಿ, ಸಾರ್ವಜನಿಕ ಕಟ್ಟಡಗಳ ಹಾನಿಯಿಂದ 13 ಲಕ್ಷ ಹಾಗೂ 101 ವಿದ್ಯುತ್ ಕಂಬಗಳಿಗೆ ಹಾನಿಯಿಂದ 9.38 ಲಕ್ಷ ಈವರೆಗೆ ನಷ್ಟವಾಗಿದೆ.
ಮಂಗಳೂರು: ಮರಳುಗಾರಿಕೆಗೆ ನದಿಗೆ ಇಳಿದ ಯುವಕ ಸಾವು
ಜಿಲ್ಲೆಯಲ್ಲಿ ಈ ವರ್ಷದಲ್ಲಿ ವಾಡಿಕೆಯಷ್ಟುಮಳೆ ಬಂದಿಲ್ಲ. ಅಂದರೆ, ಈವರೆಗೆ ಶೇ 78.66 ರಷ್ಟುಮಾತ್ರ ಮಳೆ ಬಿದ್ದಿದೆ. ಆ.1ರಿಂದ 7 ರವರೆಗೆ ಈ ಅವಧಿಯ ವಾಡಿಕೆಗಿಂತ ಶೇ.200 ಮಳೆಯಾಗಿದೆ.
undefined
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
71 ತಗ್ಗು ಪ್ರದೇಶಗಳು:
ಅತಿವೃಷ್ಟಿಬಂದರೆ ಜಿಲ್ಲೆಯಲ್ಲಿ ತೊಂದರೆ ಆಗಲಿರುವ ತಗ್ಗುಪ್ರದೇಶವನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಅವುಗಳಲ್ಲಿ ಚಿಕ್ಕಮಗಳೂರು-9, ಕೊಪ್ಪ- 11, ಮೂಡಿಗೆರೆ-18, ಎನ್.ಆರ್.ಪುರ-22, ಶೃಂಗೇರಿ-10 ಹಾಗೂ ತರೀಕೆರೆಯಲ್ಲಿ 1 ಪ್ರದೇಶವನ್ನು ಗುರುತಿಸಲಾಗಿದೆ. ತುರ್ತು ನಿರ್ವಹಣಾ ಸಾಮಗ್ರಿಗಳನ್ನು ಜಿಲ್ಲಾಡಳಿತ ಮುಂಜಾಗ್ರತೆಯಾಗಿ ಖರೀದಿ ಮಾಡಿದೆ. 4 ಬೋಟ್, 50 ಜಾಕೆಟ್, 10 ತುರ್ತು ಚಿಕಿತ್ಸಾ ಕಿಟ್, 10 ಛತ್ರಿಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ವಿಪತ್ತು ನಿರ್ವಹಣಾ ಘಟಕಗಳಿಗೆ ನೀಡಲಾಗಿದೆ. ಪ್ರತಿಯೊಂದು ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 20 ಪಕ್ಕಾ ಮನೆಗಳಿಗೆ ಭಾಗಶಃ, 41 ಕಚ್ಚಾ ಮನೆಗಳಿಗೆ ಹಾನಿಯಾಗಿದೆ.
ಹಣದ ಕೊರತೆ ಇಲ್ಲ:
ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ. ಜಿಲ್ಲೆಯ 8 ತಾಲೂಕುಗಳಲ್ಲಿ ತಹಸೀಲ್ದಾರ್‌ಗಳ ಖಾತೆಯಲ್ಲಿ ಒಟ್ಟು 419.43 ಲಕ್ಷ ಇದ್ದು, ಇದರಲ್ಲಿ ಈವರೆಗೆ 10.16 ಲಕ್ಷ ಬಳಸಿಕೊಳ್ಳಲಾಗಿದೆ. ಇನ್ನು 409.27 ಲಕ್ಷ ಖಾತೆಯಲ್ಲಿದೆ. ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಚಿಕ್ಕಮಗಳೂರು: ಪ್ರವಾಸಿಗರಿಗೆ ಕೆಲವು ದಿನ ಜಿಲ್ಲೆಗೆ ಪ್ರವೇಶವಿಲ್ಲ