ನದಿಗೆ ಮರಳು ತೆಗೆಯಲು ಇಳಿದ ಯುವಕ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನದಿಯಲ್ಲಿ ಪ್ರವಾಹ ಹೆಚ್ಚಿದ್ದು, ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ನದಿಪಾತ್ರದಲ್ಲಿ ವಾಹನ ನಿಲ್ಲಿಸಿ ಯುವಕರು ನದಿಗಿಳಿದು ಮರಳು ತೆಗೆಯುತ್ತಿದ್ದರು.
ಮಂಗಳೂರು(ಆ.09): ಬೆಳ್ತಂಗಡಿ ತಾಲೂಕು ಕೊಕ್ಕಡದ ಸಮೀಪದ ಸುದೆಗಂಡಿ ಎಂಬಲ್ಲಿ ಕಪಿಲಾ ನದಿಯಲ್ಲಿ ಮರಳು ತೆಗೆಯಲೆಂದು ಇಳಿದ ಯುವಕ ಪ್ರವಾಹದ ನೀರಿನ ಸೆಳೆತಕ್ಕೊಳಗಾಗಿ ನೀರಲ್ಲಿ ಮುಳುಗಿ ಮೃತಪಟ್ಟಘಟನೆ ಗುರುವಾರ ಸಂಜೆ ವೇಳೆ ನಡೆದಿದೆ.
ಕೊಕ್ಕಡದ ನಿವಾಸಿ ವಿಶ್ವನಾಥ ಎಂಬವರ ಮಗ ಭವಿತ್ (23) ಮೃತ ವ್ಯಕ್ತಿ. ನದಿಯಲ್ಲಿ ನೆರೆ ನೀರು ಪ್ರವಾಹ ಅಧಿಕವಾಗಿದ್ದರೂ ಸ್ಥಳೀಯ ಮರಳುಗಾರಿಕೆ ತಂಡವೊಂದು ಮಳೆಯನ್ನೂ ಲೆಕ್ಕಿಸದೆ ನದಿಪಾತ್ರದಲ್ಲಿ ಪಿಕಪ್ ನಿಲ್ಲಿಸಿ ನದಿನೀರಲ್ಲಿ ಮುಳುಗಿ ಮರಳು ತೆಗೆಯುತ್ತಿರುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ಡ್ಯೂಟಿ ಮುಗೀತು ಅಂತ ಅರ್ಧದಲ್ಲೇ ವಿಮಾನ ಬಿಟ್ಟೋದ ಪೈಲಟ್..!
ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳಲ್ಲಿ ಪ್ರವಾಹ ಹೆಚ್ಚಾಗಿದೆ. ಜನರು ನೆರೆ ಭೀತಿಯಲ್ಲಿದ್ದು ಹೆಚ್ಚಿನ ಜಾಗೃತೆ ವಹಿಸಬೇಕಾದ ಅಗತ್ಯವಿದೆ.
ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ: ಡೇಟ್ ಫಿಕ್ಸ್..!