ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಜನರು ತಮ್ಮ ಪ್ರವಾಸಗಳನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜಿಲ್ಲೆಯ ಹಲವೆಡೆ ಮಳೆಯಿಂದಾಗಿ ಭೂಕುಸಿತ ಉಂಟಾಗುತ್ತಿದ್ದು, ಮುಂಜಾಗೃತೆ ದೃಷ್ಟಿಯಿಂದ ಈ ಸೂಚನೆ ಹೊರಡಿಸಲಾಗಿದೆ.
ಚಿಕ್ಕಮಗಳೂರು(ಆ.09): ಜಿಲ್ಲೆಯ ಗಿರಿಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಭೂಕುಸಿತ ಉಂಟಾಗುತ್ತಿದೆ. ಇಲ್ಲಿಗೆ ಬರಲು ಇಚ್ಛಿಸಿರುವ ಪ್ರವಾಸಿಗರು ಕೆಲ ದಿನ ಪ್ರವಾಸವನ್ನು ಮುಂದೂಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಮನವಿ ಮಾಡಿದ್ದಾರೆ.
ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಹಾಗೂ ಮಾಣಿಕ್ಯಧಾರದ ಮಾರ್ಗದಲ್ಲಿ ಆಗಾಗ ಭೂ ಕುಸಿತ ಉಂಟಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಮರಳುಗಾರಿಕೆಗೆ ನದಿಗೆ ಇಳಿದ ಯುವಕ ಸಾವು
ಮುಂಜಾಗ್ರತೆ ದೃಷ್ಟಿಯಿಂದ ಪ್ರವಾಸಿಗರು ಗಿರಿಪ್ರದೇಶದಲ್ಲಿ ಕೈಗೊಳ್ಳಲು ಇಚ್ಚಿಸಿರುವ ಪ್ರವಾಸವನ್ನು ಕೈಬಿಡಬೇಕೆಂದು ಹೇಳಿದ್ದಾರೆ.
ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ: ಡೇಟ್ ಫಿಕ್ಸ್..!