Mysuru: ಪರಿವಾರ ಜಾತಿಯ ಸಮಸ್ಯೆ ಪರಿಹರಿಸಲು ಸಿಎಂ ಬೊಮ್ಮಾಯಿಗೆ ಮನವಿ

By Govindaraj S  |  First Published Nov 28, 2022, 11:20 PM IST

ನಾಯಕ ಜಾತಿಯ ಪರ್ಯಾಯ ಪದವಾದ ಪರಿವಾರ ಪ್ರಕರಣವನ್ನು ಕೈಬಿಡುವಂತೆ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವಂತೆ ಮೈಸೂರು ನಾಯಕರ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. 


ಮೈಸೂರು (ನ.28): ನಾಯಕ ಜಾತಿಯ ಪರ್ಯಾಯ ಪದವಾದ ಪರಿವಾರ ಪ್ರಕರಣವನ್ನು ಕೈಬಿಡುವಂತೆ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡುವಂತೆ ಮೈಸೂರು ನಾಯಕರ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಮೈಸೂರಿಗೆ ಸೋಮವಾರ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಮೇಯರ್‌ ಶಿವಕುಮಾರ್‌ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಹಳೇ ಮೈಸೂರು ಪ್ರಾಂತ್ಯದಲ್ಲಿ ಪರಿವಾರ ಎಂಬುದು ನಾಯಕ ಸಮಾಜದ ಪರ್ಯಾಯ ಪದ. ಕೆಲವು ಕುಟುಂಬಗಳಲ್ಲಿ ಕೆಲವರದು ನಾಯಕ ಎಂತಲೂ ಮತ್ತೆ ಕೆಲವರದು ಪರಿವಾರ ಎಂತಲೂ ಸಹ ಕರೆಯುವುದು ಮೈಸೂರು ಮಹಾರಾಜರ ಕಾಲದಿಂದಲೂ ವಾಡಿಕೆ. ಪರಿವಾರ ಪದವು ನಾಯಕ ಸಮಾಜದ ಪರ್ಯಾಯ ಪದ ಎಂದು ಈಗಾಗಲೇ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದರು.

Latest Videos

undefined

ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ?: ಸಿಎಂ ಬೊಮ್ಮಾಯಿ

ಆದರೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೆಲವು ದಾಖಲೆಯಲ್ಲಿ ಕೆಲವು ಕಡೆ ನಾಯಕ ಎಂತಲೂ ಮತ್ತೆ ಕೆಲವು ಕಡೆ ಪರಿವಾರ ಎಂತಲೂ ಇರುವುದು ಸಾಮಾನ್ಯ. ಈ ರೀತಿಯ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ಸಲ್ಲಿಸಲಾದ ವರದಿ ಅನ್ವಯ ತಮ್ಮ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ವಿಚಾರಣೆಗೆ ಬಾಕಿ ಇವೆ ಎಂದು ತಿಳಿಸಿದರು.

ಪರಿವಾರ ಹಾಗೂ ನಾಯಕ ಎಂಬುದು ಸಮಾನಾರ್ಥಕ ಪದಗಳೆಂದು ಈಗಾಗಲೇ ಸಂವಿಧಾನಕ್ಕೆ ತಿದ್ದುಪಡಿ ಆಗಿರುವುದರಿಂದ ಅಭ್ಯರ್ಥಿಗಳ ದಾಖಲೆಗಳಲ್ಲಿ ನಾಯಕ ಅಥವಾ ಪರಿವಾರ ಎಂದು ಎರಡು ಪದಗಳು ಕಂಡು ಬಂದಿದ್ದಲ್ಲಿ ಇವೆರಡು ನಾಯಕ ಪದಗಳ ಪರ್ಯಾಯ ಪದಗಳೆಂದು ಪರಿಗಣಿಸಿ ಪ್ರಕರಣಗಳನ್ನು ಕೈಬಿಡಬೇಕು ಹಾಗೂ ಸಿಂಧುತ್ವ ನೀಡಬೇಕು ಎಂದು ಅವರು ಮನವಿ ಮಾಡಿದರು.

ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸ​ಲಿ: ಮಧು ಬಂಗಾರಪ್ಪ

ಈ ವೇಳೆ ಮುಖಂಡರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ದೇವರಾಜ ಟಿ. ಕಾಟೂರು, ರಾಮನಾಯಕ, ಜಗದೀಶ್‌, ಶ್ರೀಧರನಾಯಕ, ಕರಿನಾಯಕ ಮೊದಲಾದವರು ಇದ್ದರು.

click me!