Haveri: ಗ್ರಾಮಸ್ಥರು, ಪಂಚ ಕಮಿಟಿಯ ಕಿತ್ತಾಟ: ಆರು ತಿಂಗಳಿನಿಂದ ದೇಗುಲದಲ್ಲೇ ಬಂಧಿಯಾದ ಆಂಜನೇಯ

By Govindaraj S  |  First Published Jun 12, 2022, 2:00 AM IST

ಲೋಕ ನೋಡಲೆಂದು ನಿಂತನೋ ಓ ಕಪೀಶ. ಕುಂತರೆ ನಿಂತರೆ ಕಾಯಿದೆ ಎಂಬೋ  ಮೂಢರ ಊರಿನಲಿ. ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲಿ ಎಂಬ  ಕಿಂದರಿ‌ ಜೋಗಿ ಸಿನಿಮಾ ಹಾಡಿನ ಲಿರಿಕ್ಸ್ ನೀವು ಕೇಳೇ ಇರ್ತೀರಿ.


ಹಾವೇರಿ (ಜೂ.12): ಲೋಕ ನೋಡಲೆಂದು ನಿಂತನೋ ಓ ಕಪೀಶ. ಕುಂತರೆ ನಿಂತರೆ ಕಾಯಿದೆ ಎಂಬೋ  ಮೂಢರ ಊರಿನಲಿ. ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲಿ ಎಂಬ  ಕಿಂದರಿ‌ ಜೋಗಿ ಸಿನಿಮಾ ಹಾಡಿನ ಲಿರಿಕ್ಸ್ ನೀವು ಕೇಳೇ ಇರ್ತೀರಿ. ನಿಮಗೆ ಕ್ರೇಜಿ ಸ್ಟಾರ್ ಅಭಿನಯದ ಕಿಂದರಿ ಜೋಗಿ ಸಿನಿಮಾ ನೆನಪಿರಬಹುದು. ಊರಿನವರ ನಡುವೆ ನಡೆದ ಜಗಳದಲ್ಲಿ ಆಂಜನೇಯನ ಮೆರವಣಿಗೆಯನ್ನೇ ನಿಲ್ಲಿಸಿ, ಉತ್ಸವ ಮೂರ್ತಿಯನ್ನು ಬೀದಿಯಲ್ಲಿ ಬಿಟ್ಟು ಹೋಗ್ತಾರೆ ಜನ. 

ಇದೇ ರೀತಿಯ ಘಟನೆ ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಹೇಳಿ ಕೇಳಿ ಶನಿವಾರದ ದಿನವೇ ಆಂಜನೇಯನನ್ನೇ ಲಾಕ್ ಮಾಡಿದ್ದಾರೆ ಈ ಊರಿನ ಗ್ರಾಮಸ್ಥರು. ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಕಡೂರು ಗ್ರಾಮದಲ್ಲಿ ಆಂಜನೇಯನ ದೇಗುಲಕ್ಕೆ ಭೀಗ ಜಡಿದಿದ್ದಾರೆ ಗ್ರಾಮಸ್ಥರು. ದೇಗುಲದಲ್ಲಿ ಘಂಟೆಯ ನಿನಾದ, ಮಂತ್ರಘೋಷ ಬಂದಾಗಿದೆ. ಕಳೆದ ಆರು ತಿಂಗಳಿಂದ ದೇಗುಲಕ್ಕೆ ಬೀಗ ಹಾಕಲಾಗಿದೆ. ಗ್ರಾಮಸ್ಥರು ಹಾಗೂ ಪಂಚಕಮಿಟಿವರ ನಡುವೆ ತಿಕ್ಕಾಟದಿಂದ ಆಂಜನೇಯ ಆರು ತಿಂಗಳಿಂದ ದೇವಸ್ಥಾನದಲ್ಲಿಯೇ ಲಾಕ್ ಆಗಿದ್ದಾನೆ. 

Tap to resize

Latest Videos

undefined

ಸ್ವಚ್ಚತೆಗಾಗಿ ಮೋದಿಗೆ ನಟ ಅನಿರುದ್ಧ ಪತ್ರ, ಶೌಚಾಲಯಕ್ಕಾಗಿ ವಿದ್ಯಾರ್ಥಿನಿ ಪತ್ರ!

ನೂತನ‌ ಸಮಿತಿ ರಚಿಸುವಂತೆ ನ್ಯಾಯಸಲಯದಿಂದ ಆದೇಶ ಆಗಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಇದಾಗಿದ್ದು,ದೇವಾಲಯವನ್ನ ಪಂಚ ಕಮಿಟಿ ಸದಸ್ಯರು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದಾರೆ. ತಲೆ ತಲಾಂತರಗಳಿಂದ ಪೂಜೆ ಮಾಡುತ್ತಿದ್ದ ಶಿವಪ್ಪ ಪೂಜಾರ ಕುಟುಂಬಕ್ಕೆ ಪೂಜೆ ಮಾಡುವುದನ್ನ ಬಿಡಿಸಲಾಗಿದೆ. ದೇಗುಲಕ್ಕೆ 49 ಎಕರೆ ಲಕ್ಷಾಂತರ ಬೆಲೆಬಾಳುವ ಆಸ್ತಿ ಇದೆ. ಹೊಸ ಕಮಿಟಿ ಮಾಡುವ ವಿಚಾರದಲ್ಲಿ ಈ ಎರಡೂ ಬಣಗಳ ನಡುವೆ ಗುದ್ದಾಟ ಶುರುವಾಗಿದೆ. ಇದೇ ವಿಚಾರವಾಗಿ ಆಂಜನೇಯನ ದೇವಸ್ಥಾನಕ್ಕೆ ಬೀಗ‌ ಜಡಿಯಲಾಗಿದೆ.

ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ: ಮಗಳ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾತ್ರೋರಾತ್ರಿ ಬೆಂಕಿ ಬಿದ್ದು, ಇಡೀ ಮನೆಯೇ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ 4 ಕುರಿಗಳು ಅಸುನೀಗಿವೆ. ಮಗಳ ಮದುವೆಗಾಗಿ ಜೋಡಿಸಿಟ್ಟಿದ್ದ ಬಂಗಾರದ ಆಭರಣ, ವಸ್ತ್ರ, ಹಣ ಎಲ್ಲವೂ ಬೆಂಕಿ ಪಾಲಾಗಿವೆ.  ಮನೆಯ ಮಾಲೀಕ ಮೈನುದ್ದೀನ್‌ ಸಾಬ್‌ ಜಾಫರ್ ಮುಲ್ಲಾನವರ ಮತ್ತು ಅವರ ಮಗ ಮಾತ್ರ ಮನೆಯಲ್ಲಿ ಮಲಗಿದ್ದರು. ಅವರ ಪತ್ನಿ, ಮಗಳು, ಇನ್ನೊಬ್ಬ ಮಗ ಸೇರಿದಂತೆ ಎಲ್ಲರೂ ಪಕ್ಕದ ಸಹೋದರನ ಮನೆಯಲ್ಲಿ ಮಲಗಿದ್ದರು. 

'ಮೋದಿ ಪ್ರಧಾನಿಯಾದ ಮೇಲೆ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಪರ್ವ'

ರಾತ್ರಿ 12.30 ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿಯಿಂದ ಇಡೀ ಮನೆ ಸುಟ್ಟು ಕರಕಲಾಗಿದೆ. ‘ಎರಡು ತಿಂಗಳ ನಂತರ ಮಗಳ ಮದುವೆ ಇರುವ ಕಾರಣ ಸುಮಾರು ₹1 ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಬಟ್ಟೆ, ₹1.5 ಲಕ್ಷ ನಗದು, ಬಂಗಾರದ ಆಭರಣಗಳನ್ನು ಸಂಗ್ರಹಿಸಿದ್ದೆ. ಎಲ್ಲವೂ ಸುಟ್ಟು ಹೋಗಿವೆ. ಮಗಳ ಮದುವೆ ಹೇಗೆ ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ. ಮನೆಯಲ್ಲಿದ್ದ ಆಹಾರ ಧಾನ್ಯ, ಪಾತ್ರೆ ಎಲ್ಲವೂ ಸುಟ್ಟು ಬೂದಿಯಾಗಿವೆ. ನಮಗೆ ಉಳಿದಿರುವುದು ಕಣ್ಣೀರು ಮಾತ್ರ’ ಎಂದು ಮೈನುದ್ದೀನ್‌ಸಾಬ್‌ ಎದೆಬಡಿದುಕೊಂಡು ರೋದಿಸಿದರು.

click me!