Ballari: ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಆ್ಯಂಬುಲೈನ್ಸ್‌ ಚಾಲಕ..!

Published : Mar 29, 2022, 11:41 AM IST
Ballari: ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಆ್ಯಂಬುಲೈನ್ಸ್‌ ಚಾಲಕ..!

ಸಾರಾಂಶ

*   ನಿತ್ಯ ಸಾವು ನೋವು ನೋಡೋ ಆ್ಯಂಬುಲೈನ್ಸ್ ಚಾಲಕರು *   ಕೊರೋನಾ ವೇಳೆ ದೇಹದ ಮೇಲಿನ ವ್ಯಾಮೋಹ ಕಡಿಮೆ *  ಕೂಡಲ ಸಂಗಮದಲ್ಲಿ ಚಾಲಕರೆಲ್ಲ ದೇಹದಾನದ ಬಗ್ಗೆ ನಿರ್ಧಾರ

ನರಸಿಂಹ ಮೂರ್ತಿ ಕುಲಕರ್ಣಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳ್ಳಾರಿ

ಬಳ್ಳಾರಿ(ಮಾ.29): ನಿತ್ಯ ಸಾವು ನೋವನ್ನು ‌ಕಂಡ ಆ್ಯಂಬುಲೈನ್ಸ್ ಚಾಲಕನ ಮಹತ್ವದ ಕಾರ್ಯವೊಂದನ್ನು ಮಾಡುವ ಮೂಲಕ ‌ಮಾದರಿಯಾಗಿದ್ದಾರೆ. ತಾವು ಮೃತಪಟ್ಟ ನಂತರ ತಮ್ಮ ಕಣ್ಣು ಮತ್ತು ದೇಹದಾನ ಮಾಡೋ ಮೂಲಕ ಇಬ್ಬರು ಕಣ್ಣಿಲ್ಲದವರಿಗೆ ಸಹಾಯ ಮಾಡೋದ್ರ ಜೊತೆಗೆ ದೇಹ ದಾನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದ್ದಾರೆ. ಹೌದು, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ 108  ಆ್ಯಂಬುಲೈನ್ಸ್  ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿರಗುಪ್ಪ ಪಟ್ಟಣದ ಡಿ.ವಡಿವೇಲು (42) ನೇತ್ರದಾನದ ಜೊತೆಗೆ ದೇಹದಾನ ಮಾಡಿರೋ ಚಾಲಕ.  ವಡಿವೇಲು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕುಟುಂಬ ಸದಸ್ಯರ ಅನುಮತಿ ಮೇರೆಗೆ ಮತ್ತು ವಡಿವೇಲು ಅವರ ಇಚ್ಛೆಯಂತೆ ನೇತ್ರ ಮತ್ತು ದೇಹವನ್ನು ದಾನ ಮಾಡಲಾಗಿದೆ. 

Russia-Ukraine War: ದಾವಣಗೆರೆ SS ಕಾಲೇಜಿಗೆ ನವೀನ್ ದೇಹದಾನ ಮಾಡಲು ಕುಟುಂಬಸ್ಥರ ನಿರ್ಧಾರ

ಕೊರೋನಾ ವೇಳೆ ಹೆಚ್ಚು ಸಾವು ನೋವನ್ನು ಕಂಡಿದ್ದ ವಡಿವೇಲು

ಕೊರೋನಾ ವೇಳೆ ಅತಿ ಹೆಚ್ಚು ಸಾವನ್ನು ಕಂಡಿದ್ದರು. ಹೀಗಾಗಿ ಜೀವನ ನಶ್ವರ ಪ್ರೀತಿ, ಪ್ರೇಮ, ಸ್ನೇಹವೇ ಶಾಶ್ವತ.  ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕೆ ಹೊರತು ಮಣ್ಣಿಗೆ ಹೋಗೋನಮ್ಮ ದೇಹವಲ್ಲ ಎನ್ನುತ್ತಿದ್ರು. ಅಲ್ಲದೇ ಕೊರೋನಾ ವೇಳೆ ಸಾವು ನೋವನ್ನು ಕಂಡ ಅವರಿಗೆ ದೇಹದ ಮೇಲಿನ ವ್ಯಾಮೋಹ ಕಡಿಮೆಯಾಗಿತ್ತಂತೆ. ನಾವು ಮೃತಪಟ್ಟ ಬಳಿಕವೂ ನಾಲ್ವರಿಗೆ ಸಹಕಾರಿಯಾಗಬೇಕೆಂದು ನಿರ್ಧಾರ ಮಾಡಿ ದೇಹ ಮತ್ತು ನೇತ್ರದಾನ ಪತ್ರಕ್ಕೆ ಸಹಿ‌ ಮಾಡಿದ್ದರು. 

ಖ್ಯಾತ ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ, ದೇಹದಾನ

ಯಾಕೆಂದರೆ ಅವರಿಗೆ ದೇಹದ ಅಂಗಾಂಗಾದ ಬೆಲೆ ಗೊತ್ತಿತ್ತು ಎನ್ನುತ್ತಾರೆ ಅವರ ಸ್ನೇಹಿತರು. ಅದರಲ್ಲಿಯೂ ಕಣ್ಣಿಲ್ಲದವರ ಸ್ಥಿತಿಗೆ ಮರುಕ ಪಡುತ್ತಿದ್ದ ವಡಿವೇಲು ದೇಹದಾನಕ್ಕೂ ಮೊದಲೇ ನೇತ್ರದಾನ ಮಾಡೋ ಪತ್ರಕ್ಕೆ ಸಹಿ ಹಾಕಿದ್ದರು. 

ಕೂಡಲ ಸಂಗಮದಲ್ಲಿ ಚಾಲಕರೆಲ್ಲ ನಿರ್ಧಾರ ಮಾಡಿದ್ರು

ಇನ್ನೂ ಈ ದೇಹದಾನದ ಯೋಚನೆ ಬಂದಿದ್ದೇ ವಿಶೇಷವಾಗಿದೆ. ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮದಲ್ಲಿ ನಡೆದ ಆ್ಯಂಬುಲೈನ್ಸ್ ಚಾಲಕರ ಸಮಾವೇಶದಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ದೇಹದಾನದ ವಿಚಾರ ಚರ್ಚೆಯಾಗಿತ್ತಂತೆ. ನಿತ್ಯ ಸಾವುಗಳನ್ನು ನೋಡೋ ನಾವುಗಳು ಮತ್ತೊಬ್ಬರಿಗೆ ಮಾದಿಯಾದ್ರೇ ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಬಂದಿದ್ರು. ಹೀಗಾಗಿ ಸಮಾವೇಶದ ಬಳಿಕ ಬಂದವರೇ ದೇಹದಾನದ ಪತ್ರಕ್ಕೆ ಸಹಿ ಮಾಡಿದ್ರು. ಹೀಗಾಗಿ ವಡಿವೇಲು ಇಚ್ಛೆಯಂತೆ ಯುವಬ್ರಿಗೇಡ್ ನೇತೃತ್ವದಲ್ಲಿ  ಬಳ್ಳಾರಿಯ ನಿತ್ಯಜ್ಯೋತಿ ನೇತ್ರ ಬಂಡಾಯಕ್ಕೆ ಕಣ್ಣು ಮತ್ತು ವಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ. 

ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ನೀಡಲು ಕುಟುಂಬಸ್ಥರ ನಿರ್ಧಾರ!

ಹಾವೇರಿ: ಕರ್ನಾಟಕದ ರಾಣೆಬೆನ್ನೂರಿನ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಕರಪ್ಪ ರಷ್ಯಾ ಶೆಲ್ ದಾಳಿಗೆ ಉಕ್ರೇನ್‌ನಲ್ಲಿ ಬಲಿಯಾಗಿದ್ದರು. ಪುತ್ರನ ಕಳೆದುಕೊಂಡ ಶೋಕದ ನಡುವೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು. ನವೀನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಲು ನಿರ್ಧರಿಸಿದ್ದರು.

ಸೋಮವಾರ ಮುಂಜಾನೆ 3 ಗಂಟೆಗೆ ನವೀನ್ ಮೃತದೇಹ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅಲ್ಲಿಂದ ನೇರವಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮಕ್ಕೆ ಪಾರ್ಥೀವ ಶರೀರವನ್ನು ರವಾನಿಸಲಾಗಿತ್ತು.. ಮಗನ ಪಾರ್ಥೀವ ಶರೀರಕ್ಕೆ ಅಂತಿಮ ಪೂಜೆ ಹಾಗು ವಿಧಿವಿಧಾನಗಳನ್ನು ಕುಟುಂಬಸ್ಥರು ನೇರವೇರಿಸಿದ ಬಳಿಕ ದಾವಣಗೆರೆಯ ಎಸ್ ಎಸ್ ಮೆಡಿಕಲ್ ಕಾಲೇಜಿಗೆ ನೀಡಲು ನವೀನ್ ತಂದೆ ಶೇಕರಪ್ಪ ನಿರ್ಧರಿಸಿದ್ದರು. 
 

PREV
Read more Articles on
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!