* ಪೂಜ್ಯರಿಗೆ ಭಾರತ ರತ್ನ ಕೊಡುವ ಬಗ್ಗೆ ಯಾರೂ ಕೂಡ ಮಾತು ಆಡಬಾರದು
* ಪ್ರಶಸ್ತಿಯನ್ನ ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಯಾರೂ ಈ ಬಗ್ಗೆ ಕೇಳಲೇಬಾರದು
* ಪೂಜ್ಯರು ಅದನ್ನು ಮೀರಿರುವಂತವರು
ತುಮಕೂರು(ಮಾ.29): ಲಿಂಗೈಕ್ಯರಾಗಿರುವ ಪೂಜ್ಯ ಶಿವಕುಮಾರ ಶ್ರೀಗಳು(Shivakumara Swamiji) ಪ್ರಶಸ್ತಿಗಳನ್ನು ಮೀರಿದವರು. ಹೀಗಾಗಿ ಭಾರತ ರತ್ನ(Bharat Ratna) ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರೂ ಚರ್ಚೆ ಮಾಡಲೇಬಾರದು ಎಂದು ಸಿದ್ಧಗಂಗಾ ಮಠಾಧೀಶರಾಗಿರುವ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಅದಾಗಿ ಬಂದದ್ದು ಅಮೃತಕ್ಕೆ ಸಮಾನ. ಕೇಳಿ ಬಂದಿದ್ದು ವಿಷಕ್ಕೆ ಸಮಾನ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೂಜ್ಯರಿಗೆ ಭಾರತ ರತ್ನ ಕೊಡುವ ಬಗ್ಗೆ ಯಾರೂ ಕೂಡ ಮಾತು ಆಡಬಾರದು. ಅದನ್ನು ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಯಾರೂ ಈ ಬಗ್ಗೆ ಕೇಳಲೇಬಾರದು, ಚರ್ಚೆ ಕೂಡ ಮಾಡಲೇಬಾರದು ಎಂದರು. ಪೂಜ್ಯರು ಅದನ್ನು ಮೀರಿರುವಂತವರು. ಅದು ಬಂದ ತಕ್ಷಣ ಅವರ ಗೌರವ ಹೆಚ್ಚುವಂತಹದ್ದಲ್ಲ . ಹಾಗಾಗಿ ಅದನ್ನು ನಾವು ಯಾರೂ ನಿರೀಕ್ಷೆ ಮಾಡಬಾರದು, ಮಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
Death Anniversary: ವಿಶ್ವಕ್ಕೇ ದಾಸೋಹ ಪರಂಪರೆ ಸಾರಿದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ
ಶಿವಕುಮಾರ ಶ್ರೀಗೆ ಭಾರತರತ್ನ ಬಗ್ಗೆ ಅಮಿತ್ ಶಾ ಜತೆ ಚರ್ಚೆ: ಬಿಎಸ್‌ವೈ
ಸಿದ್ಧಗಂಗಾ ಮಠದ(Siddaganga Matha) ಲಿಂಗೈಕ್ಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Sha) ಅವರೊಂದಿಗೆ ಚರ್ಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಏ.1ರಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮಿಸುತ್ತಿದ್ದು ಅಂದು ಅವರೊಂದಿಗೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಮಾತುಕತೆ ನಡೆಸುತ್ತೇನೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡೋಣ ಎಂದು ತಿಳಿಸಿದರು. ಅಮಿತ್ ಶಾ ಅವರು ಮೊದಲು ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು ಅಂದು ಸುಮಾರು 2-3 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಅಮಿತ್ ಶಾ ಸಾರ್ವಜನಿಕ ಸಭೆಗೆ 2ರಿಂದ 2 ಲಕ್ಷ ಜನ
ಸಿದ್ಧಗಂಗಾ ಮಠಕ್ಕೆ ಬರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲು ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು ಅಂದು ಸುಮಾರು 2-3 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ಪ್ರಯತ್ನವನ್ನು ನಮ್ಮೆಲ್ಲಾ ಶಾಸಕರು, ಸಚಿವರು ಮಾಡುತ್ತಿದ್ದಾರೆ. ಗೃಹ ಸಚಿವರಾಗಿ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವುದು ಬಹಳ ಮುಖ್ಯ ಎಂದಿದ್ದಾರೆ.
ಏ.1ಕ್ಕೆ 114 ಮಕ್ಕಳಿಗೆ ಶಿವಕುಮಾರ ಶ್ರೀ ಹೆಸರು
ಶಿವಕುಮಾರ ಶ್ರೀಗಳಿಗೆ ಭಾರತರತ್ನಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ
ಡಾ. ಶಿವಕುಮಾರ್ ಸ್ವಾಮೀಜಿಯವರಿಗೆ(Dr Shivakumara Swamiji) ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’(Bharat Ratna) ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು.
ಅವರು ಜ.22 ರಂದು ದಾಸೋಹ ದಿನಾಚರಣೆಯ(Dashoha Day) ಅಂಗವಾಗಿ ಸಿದ್ಧಗಂಗಾ ಕ್ಷೇತ್ರಕ್ಕೆ(Siddaganga Matha ) ಭೇಟಿ ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಚಾರ ಹೇಳಿದರು. ದಾಸೋಹ ಪರಂಪರೆಗೆ ನಾಂದಿ ಹಾಡಿದ ಶ್ರೀಗಳ ಹೆಜ್ಜೆ ಗುರುತಿನಲ್ಲಿ ನಡೆಯುವ ಸಂಕಲ್ಪದಿಂದ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ತಿವಿಧ ದಾಸೋಹವಾದ ಅನ್ನ, ಅಕ್ಷರ, ಸೂರು ಒದಗಿಸುವ ಧ್ಯೇಯ ಸರ್ಕಾರ ಹೊಂದಿದೆ. ದಾಸೋಹ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ತಿಳಿಸಿದ್ದರು.