Mandya : ಜಿಲ್ಲೆಯಲ್ಲಿ ವಾರ್ಷಿಕ 3 ಸಾವಿರ ಮಂದಿಗೆ ಪಾಶ್ರ್ವವಾಯು

By Kannadaprabha NewsFirst Published Mar 18, 2023, 6:12 AM IST
Highlights

ಜಿಲ್ಲೆಯಲ್ಲಿ ವಾರ್ಷಿಕ 2700ರಿಂದ 3000 ಹೊಸ ಪಾಶ್ರ್ವವಾಯು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಂಡ್ಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ತಮ್ಮಣ್ಣ ತಿಳಿಸಿದರು.

 ಮಂಡ್ಯ:  ಜಿಲ್ಲೆಯಲ್ಲಿ ವಾರ್ಷಿಕ 2700ರಿಂದ 3000 ಹೊಸ ಪಾಶ್ರ್ವವಾಯು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಂಡ್ಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ತಮ್ಮಣ್ಣ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಪಾಶ್ರ್ವವಾಯು ತಡೆ ಮತ್ತು ಚಿಕಿತ್ಸೆ ಬಗ್ಗೆ ಸಂವಾದ ಹಾಗೂ ಹಿರಿಯ ನರರೋಗ ತಜ್ಞ ಡಾ.ಸೂರ್ಯನಾರಾಯಣ ಶರ್ಮ ಅವರು ಬರೆದ ಪಾಶ್ರ್ವವಾಯುವಿನಿಂದ ಚೈತನ್ಯದೆಡೆಗೆ ಕೃತಿ ಪರಿಚಯ ಮತ್ತು ವಿಮರ್ಶೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ರ್ವವಾಯು ಜಾಗತಿಕ ಸಮಸ್ಯೆಯಾಗಿದ್ದು, ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದರು.

ಹಿರಿಯ ನರರೋಗ ತಜ್ಞ ಡಾ.ಸೂರ್ಯನಾರಾಯಣ ಶರ್ಮ ಮಾತನಾಡಿ, ಪಾಶ್ರ್ವವಾಯು ವಿಶ್ವದಲ್ಲೇ ಅತಿ ಹೆಚ್ಚು ಮರಣವನ್ನು ಉಂಟುಮಾಡುವ ಕಾಯಿಲೆಗಳ ಪೈಕಿ ಹೃದಯಘಾತದ ನಂತರ ಎರಡನೇ ಸ್ಥಾನದಲ್ಲಿದ್ದು, ಈ ಗಂಭೀರ ಸಮಸ್ಯೆಯ ಬಗ್ಗೆ ಇನ್ನೂ ಹೆಚ್ಚು ಅರಿವು ಮೂಡಬೇಕಿದೆ ಎಂದರು.

2019ರ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೆ 93 ಮಂದಿ ಪಾಶ್ರ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷ ಮಂದಿಗೆ 109 ರೋಗಿಗಳು ಪಾಶ್ರ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಇದನ್ನು ಮಂಡ್ಯ ಜಿಲ್ಲೆಯ ಜನಸಂಖ್ಯೆಯಾದ 25 ಲಕ್ಷಕ್ಕೆ ಸಮೀಕರಿಸಿದರೆ ವಾರ್ಷಿಕವಾಗಿ ಮಂಡ್ಯ ಜಿಲ್ಲೆಯಲ್ಲಿ 2700 ರಿಂದ 3000 ಹೊಸ ಪಾಶ್ರ್ವ ವಾಯುವಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ರೋಗವನ್ನು ನಿಯಂತ್ರಿಸಿ ಚಿಕಿತ್ಸೆ ನೀಡಲು ನಮ್ಮ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸದಾ ಸನ್ನದ್ಧವಾಗಿರುವುದು ಇಂದಿನ ತುರ್ತು ಅಗತ್ಯವಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಪಾಶ್ರ್ವವಾಯುವಿಗೆ ಚಿಕಿತ್ಸೆ ನೀಡುವಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿದ್ದು, ಪಾಶ್ರ್ವವಾಯು ಸಂಭವಿಸಿದ ಸುವರ್ಣ ಸಮಯವಾದ ಮೊದಲ ನಾಲ್ಕೂವರೆ ಗಂಟೆಗಳ ಒಳಗಾಗಿ ರೋಗಿ ಹತ್ತಿರದ ಸ್ಟೊ್ರೕಕ್‌ ರೆಡಿ ಆಸ್ಪತ್ರೆಗೆ ತಲುಪಿದರೆ, ರೋಗಿಗೆ ಸೂಕ್ತ ಚಿಕಿತ್ಸೆ ದೊರಕಿ ಅಮೂಲ್ಯವಾದ ಜೀವ ಉಳಿದು ಅವರು ಶಾಶ್ವತವಾಗಿ ಅಂಗವೈಕಲ್ಯಕ್ಕೀಡಾಗುವುದನ್ನು ತಪ್ಪಿಸಬಹುದು ಎಂದರು.

ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಕೃತಿ ಪರಿಚಯ ಮಾಡಿಕೊಟ್ಟರು. ನಂತರ ಗಾಂಧಿ ಭವನದಿಂದ ಹಿರಿಯ ನರ ರೋಗ ತಜ್ಞ ಹಾಗೂ ಪಾಶ್ರ್ವವಾಯುವಿನಿಂದ ಚೈತನ್ಯದೆಡೆಗೆ ಕೃತಿಯ ಲೇಖಕ ಡಾ. ಸೂರ್ಯನಾರಾಯಣ ಶರ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರದ ಹಿರಿಯ ವೈದ್ಯರಾದ ಡಾ.ಚಂದ್ರಶೇಖರ್‌, ಡಾ.ವಸುಮತಿ ರಾವ್‌, ಡಾ.ಗುರುಚರಣ್‌, ಡಾ.ಎಸ್‌.ವಿ.ಶಿಲ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ ಜಯರಾಮ…, ಟ್ರಸ್ಟ್‌ ಕಾರ್ಯದರ್ಶಿ ಪಿ.ಆರ್‌.ಮಂಜುನಾಥ ಶರ್ಮ ಮತ್ತಿತರರು ಪಾಲ್ಗೊಂಡಿದ್ದರು 

click me!