ಸಂಸದ ಅನಂತ ಕುಮಾರ್‌ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ

Kannadaprabha News   | Asianet News
Published : Apr 07, 2021, 02:32 PM IST
ಸಂಸದ ಅನಂತ ಕುಮಾರ್‌ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ

ಸಾರಾಂಶ

ಏ.5ರ ತಡರಾತ್ರಿ 2 ಗಂಟೆಯ ವೇಳೆಗೆ ಈ ಕರೆ| ಒಂದನೇ ಬಾರಿ ಫೋನ್‌ ಎತ್ತುವ ಮೊದಲೇ ಸಂಪರ್ಕ ಕಡಿತ| ಅನಂತಕುಮಾರ ಹೆಗಡೆಗೆ ಎಂದು ಬೆದರಿಕೆ ಹಾಕಿದ ಆಗಂತುಕ| ಈ ಮೊದಲು 2019ರ ಫೆ.2 ಮತ್ತು ಏ.20ರಂದು ಇದೇ ಮಾದರಿಯಲ್ಲಿ ಹೆಗಡೆಗೆ ಜೀವ ಬೆದರಿಕೆ ಕರೆ ಬಂದಿತ್ತು| 

ಶಿರಸಿ(ಏ.07): ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಪಟ್ಟಣದ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏ.5ರ ತಡರಾತ್ರಿ 2 ಗಂಟೆಯ ವೇಳೆಗೆ ಈ ಕರೆ ಬಂದಿದೆ. ಒಂದನೇ ಬಾರಿ ಫೋನ್‌ ಎತ್ತುವ ಮೊದಲೇ ಸಂಪರ್ಕ ಕಡಿತವಾಗಿದೆ. ಮತ್ತೊಮ್ಮೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ಅನಂತಕುಮಾರ ಹೆಗಡೆ ನೀನೇ ಅಲ್ವಾ? ಮೊದಲ ಸಲ ಪೋನ್‌ ಮಾಡಿದಾಗ ದೂರು ನೀಡಿದ್ದೀಯ. ಪತ್ರಿಕೆಗಳಲೆಲ್ಲಾ ಸುದ್ದಿಯಾಗಿತ್ತು. ಈ ಬಾರಿ ಏನು ಮಾಡ್ತೀಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆಗಂತುಕ ವ್ಯಕ್ತಿ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.

ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಈ ಮೊದಲು 2019ರ ಫೆ.2 ಮತ್ತು ಏ.20ರಂದು ಇದೇ ಮಾದರಿಯಲ್ಲಿ ಅನಂತ ಕುಮಾರ ಹೆಗಡೆ ಅವರಿಗೆ ಜೀವ ಬೆದರಿಕೆ ಕರೆ ಬಂದಿತ್ತು.
 

PREV
click me!

Recommended Stories

ಶ್ರೀರಾಮ ದಶರಥನ ಮಗನಲ್ಲ ಪುರೋಹಿತರಿಗೆ ಹುಟ್ಟಿದವನು! ಸಾಹಿತಿ ಭಗವಾನ್ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ
ಬಿಡದಿ ಟೌನ್‌ಶಿಪ್: 9ರಲ್ಲಿ 3 ಗ್ರಾಮಗಳ 498 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ