Koppal; ಭಾರೀ ವಿವಾದದಲ್ಲಿ ಐತಿಹಾಸಿಕ ದೇಗುಲ, ಶಾಸ್ತ್ರೋಕ್ತವಾಗಿ ವಿಗ್ರಹ ಪುನರ್ ಸ್ಥಾಪನೆ

By Suvarna News  |  First Published Jun 7, 2022, 8:24 PM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾಸರೋವರದ ಮೇಲ್ಭಾಗದಲ್ಲಿ ಇರುವ ಜಯಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ವಿವಾದ   ಹಿನ್ನಲೆಯಲ್ಲಿ ಇದೀಗ ಜಯಲಕ್ಷ್ಮೀ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ(ಜೂ.7) : ಇತ್ತಿಚಿಗಷ್ಟೇ ಆ ದೇವಾಲಯದಲ್ಲಿ ಜಿರ್ಣೋದ್ಧಾರದ ಹೆಸರಿನಲ್ಲಿ ಮೂಲ ದೇವರ ಮೂರ್ತಿಗೆ ಧಕ್ಕೆ ಆಗಿತ್ತು. ಇದರಿಂದಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿ, ಇದರಲ್ಲಿ ರಾಜಕೀಯ ಸಹ ಆರಂಭವಾಗಿತ್ತು.‌ ಇದೀಗ ಎಚ್ಚೇತ್ತ ಜಿರ್ಣೋದ್ಧಾರ ಕಾರ್ಯ ಮಾಡುವವರು ಶಾಸ್ತ್ರೋಕ್ತವಾಗಿ ಪುನಃ ವಿಗ್ರಹ ಸ್ಥಾಪನೆಗೆ ಮುಂದಾಗಿದ್ದಾರೆ.  

Tap to resize

Latest Videos

ಎಲ್ಲಿ ಪುನರ್ ವಿಗ್ರಹ ಸ್ಥಾಪನೆ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ಕಿಷ್ಕಿಂಧೆ ಪ್ರದೇಶ ಐತಿಹಾಸಿಕ, ಪೌರಾಣಿಕವಾಗಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದ ಪ್ರದೇಶವಾಗಿದೆ. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಪಂಪಾಸರೋವರ ತನ್ನದೇ ಆದ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಪ್ರದೇಶವನ್ನು ಇತ್ತೀಚಿನ ದಿನಗಳಲ್ಲಿ ಸಚಿವ ಬಿ ಶ್ರೀರಾಮುಲು ಜಿರ್ಣೋದ್ಧಾರದ ಕಾರ್ಯ ಮಾಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಪಂಪಾಸರೋವರದ ಮೇಲ್ಭಾಗದಲ್ಲಿ ಇರುವ ಜಯಲಕ್ಷ್ಮೀ ದೇವಸ್ಥಾನವನ್ನು ಸಹ ಜಿರ್ಣೋದ್ಧಾರದ ಮಾಡಿವ ವೇಳೆ ಅಲ್ಲಿನ ಮೂರ್ತಿಗೆ ಧಕ್ಕೆಯಾಗಿತ್ತು. ಇದಕ್ಕೆ ಸ್ಥಳೀಯರು ಸಾಕಷ್ಟು ವಿರೋಧ ಮಾಡಿದ್ದರು.‌ ಈ ಹಿನ್ನಲೆಯಲ್ಲಿ ಇದೀಗ ಜಯಲಕ್ಷ್ಮೀ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಅಮೂಲ್ಯ, ಬೇಕಿದೆ ನಿಮ್ಮ ನೆರವಿನ ಹಸ್ತ

ಜೂ.8.9ರಂದು ಶಾಸ್ರೋಕ್ತವಾಗಿ ವಿಗ್ರಹ ಪುನರ್ ಸ್ಥಾಪನೆ: ಇನ್ನು ಸಚಿವ ಬಿ ಶ್ರೀರಾಮುಲು ಸೂಚನೆಯ ಮೇರೆಗೆ ಗರ್ಭ ಗುಡಿಯನ್ನು ಜೀರ್ಣೋದ್ದಾರ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಮೂಲ ಸ್ವರೂಪಕ್ಕೆ ಧಕ್ಕೆಯಾಗ ದಂತೆ ಎಚ್ಚರ ವಹಿಸಲಾಗಿತ್ತು. ಎಲ್ಲಿಯೂ ಲೋಪ ಎಸಗಿಲ್ಲ. ಆದರೆ, ಅಭಿವೃದ್ಧಿ ಬಯಸದ ಇಲ್ಲಿ ಧಾರ್ಮಿಕ ನಂಬಿಕೆಗಳಿಗೆ ಕೆಲವರು ವಿನಾಕಾರಣ  ಗೊಂದಲ ಸೃಷ್ಟಿಸಿದ್ದಾರೆ ಎನ್ನುವುದು ಜಿರ್ಣೋದ್ಧಾರದ ಕೈಗೊಳ್ಳುವವರ ಮಾತಾಗಿತ್ತು. 

ಇದೀಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜೂನ್ 08 ಮತ್ತು 09ರಂದು ಜಯಲಕ್ಷ್ಮಿ ಮೂರ್ತಿ ಶ್ರೀಚಕ್ರ ಸಮೇತ ಪುನರ್ ಪ್ರತಿಷ್ಠಾಪನಾ ಕಾರ್ಯ ಹಂಪಿ ಸಂಸ್ಥಾನದ ಅರ್ಚಕರ ವಿಜಯನಗರ ಕಾಲದಲ್ಲಿ ತಂಡ ಮತ್ತು ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿ೦ದ ಪಂಡಿತರು ಆಗಮಿಸಲಿದ್ದು, 3 ದಿನಗಳ ಕಾಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಜಿರ್ಣೋದ್ಧಾರದ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುವುದರ ಜೊತೆಗೆ ಕಾಂಗ್ರೆಸ್ ನಾಯಕರು ಸಹ ಪಂಪಾ ಸರೋವರಕ್ಕೆ ಭೇಟಿ‌ ನೀಡಿದ್ದರು. ಈ ವೇಳೆ ಅವರು ನಿಧಿ ಆಸೆಗಾಗಿ ಜಿರ್ಣೋದ್ಧಾರದ ಕಾರ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ‌ ಮಾಡಿದ್ದರು. ಇದರಿಂದಾಗಿ ಜಿರ್ಣೋದ್ಧಾರದ ಕಾರ್ಯ ಸ್ಥಗಿತ ಮಾಡಿದ್ದರು. ಇದೀಗ ಎಚ್ಚೇತ್ತ ಸಚಿವ ಬಿ ಶ್ರೀರಾಮುಲು ಮೂಲಸ್ವರೂಪಕ್ಕೆ ಧಕ್ಕೆಯಾಗಿದ್ದ ಮೂರ್ತಿಗಳನ್ನು ಪುನರ್ ಸ್ಥಾಪಿಸಲು ಮುಂದಾಗಿರುವುದು ಯಾವ ಪರಿಣಾಮ‌ ಬಿರುತ್ತದೆಯೋ ಕಾದು ‌ನೋಡಬೇಕಿದೆ.

ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!

ರಾಜಗುರು ವ್ಯಾಸರಾಜರು: ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯರ ಗುರುಗಳಾಗಿದ್ದ ವ್ಯಾಸರಾಜರು ಆಗೊಂದಿಯ ತುಂಗಭದ್ರಾ ನಡುಗಡ್ಡೆಯಲ್ಲಿ ಇರುವ ನವ ವೃಂದಾವನಗಡ್ಡೆಯಲ್ಲಿ ವೃಂದಾವನಸ್ಥರಾಗಿದ್ದಾರೆ. 9 ಯತಿವರೇಣ್ಯರ ವೃಂದಾವನಗಳಿದ್ದು, ಇದರಲ್ಲಿ ವ್ಯಾಸರಾಜರ ವೃಂದಾವನ ಒಂದು.

ವ್ಯಾಸರಾಜರು ಗುರುಗಳಷ್ಟೇ ಅಲ್ಲ, ಶ್ರೀಕೃಷ್ಣದೇವರಾಯರ ತನಗೆ ಕುಜ ರೋಗ ಬಂದಾಗ ಕೆಲ ವರ್ಷ ಇವರನ್ನು ಪಟ್ಟಕ್ಕೆ ಕುಳ್ಳಿರಿಸಿದ್ದ. ಹಾಗಾಗಿ ವ್ಯಾಸರಾಜರ ಬಳಿ ಅಪಾರವಾದ ವಜ್ರ, ವೈಢೂರ್ಯ ಸೇರಿದಂತೆ ಚಿನ್ನ, ಬೆಳ್ಳಿ ವಸ್ತುಗಳು ಇದ್ದವು. ಅವೆಲ್ಲವನ್ನು ಈ ವೃಂದಾವನದಲ್ಲಿ ಇರಿಸಲಾಗಿದೆ ಎನ್ನುವ ನಂಬಿಕೆಯಿಂದ ನಿಧಿಗಳ್ಳರು ವೃಂದಾವನವನ್ನು ಧ್ವಂಸ ಮಾಡಿದರು.

ಆಂಧ್ರಪ್ರದೇಶದ ತಾಡಪತ್ರಿಯ ಬುಗ್ಗಾ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರೊಬ್ಬರ ಮಾರ್ಗದರ್ಶನ ಪಡೆದು ಈ ಕೃತ್ಯ ನಡೆಸಿದ್ದರು. ತಾಡಪತ್ರಿಯ 8 ಜನ ನಿಧಿಗಳ್ಳರು 2019ರ ಜು. 19ರ ರಾತ್ರಿ ವ್ಯಾಸರಾಜರ ವೃಂದಾವನದ ಕೆಳ ಮಟ್ಟದಿಂದ ಮೂರು ಅಡಿ ಅಗೆದರು. ಬೆಳಗ್ಗೆಯವವರೆಗೂ ಅಗೆದರು. ಮೂಲ ಕೆಳಮಟ್ಟಸಿಗದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದರು. ಬಂಧನ ಸಂದರ್ಭದಲ್ಲಿ ಅವರು ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಈ ಸತ್ಯ ಉಲ್ಲೇಖವಾಗಿದೆ.

click me!