ಇನ್ಸ್ಟಾಗ್ರಾಮ್‌ನಲ್ಲಿ ಯಶ್ಪಾಲ್‌ ಸುವರ್ಣ, ಮುತಾಲಿಕ್‌ ಹತ್ಯೆಗೆ ಪ್ರಚೋದನೆ: 20 ಲಕ್ಷ ಬಹುಮಾನ

By Kannadaprabha News  |  First Published Jun 7, 2022, 4:34 PM IST

*  ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ
*  ಹಿಂದೆಯೂ ಇಂತಹ ಬೆದರಿಕೆಗಳು ಬಂದಿವೆ: ಯಶ್ಪಾಲ್‌ ಸುವರ್ಣ 
*  ಹಿಂದುತ್ವಕ್ಕಾಗಿ ಹೋರಾಟದಲ್ಲಿ ಇದು ಸಹಜ, ಇದಕ್ಕೆಲ್ಲಾ ಮಣಿಯುವ ಪ್ರಶ್ನೆಯೇ ಇಲ್ಲ


ಉಡುಪಿ(ಜೂ.07):  ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ ಪಾಲ್‌ ಸುವರ್ಣ ಮತ್ತು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರ ಹತ್ಯೆಯ ಬೆದರಿಕೆ ಒಡ್ಡಲಾಗಿದೆ.

ಮಾರಿ ಗುಡಿ 6 ಎಂಬ ಹೆಸರಿನಿಂದ ಇವರಿಬ್ಬರ ಹತ್ಯೆಗೆ ಪ್ರಚೋದನೆ ನೀಡುವ ಸಂದೇಶವು ಪ್ರಸಾರವಾಗುತ್ತಿದ್ದು, ಇದೀಗ ಅದು ವೈರಲ್‌ ಆಗುತ್ತಿದೆ. ಈ ಎರಡು ಹಂದಿಗಳ ತಲೆ ಕಡಿದರೆ 20 ಲಕ್ಷ ರು. ಒಂದು ತಲೆಗೆ 10 ಲಕ್ಷ ರು. ಘೋಷಣೆ. ನಿಮ್ಮ ಖಾತೆಗೆ ಜಮಾವಣೆ ಆಗುತ್ತೆ ಎಂದು ಸಂದೇಶ ಹರಿಯಬಿಡಲಾಗಿದೆ.

Tap to resize

Latest Videos

ತಂದೆ ತಾಯಿ ಮೇಲಿನ ಪ್ರೀತಿಗಾಗಿ ಜನರಿಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಕೊಟ್ಟ ಮಕ್ಕಳು

ಈ ಬಗ್ಗೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಕಾಪು ಪೊಲೀಸರಿಗೆ ಸೋಮವಾರ ದೂರು ನೀಡಿದ್ದು, ಈ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಶ್ಪಾಲ್‌ ಸುವರ್ಣ ಅವರು, ಹಿಂದೆಯೂ ಇಂತಹ ಬೆದರಿಕೆಗಳು ಬಂದಿವೆ. ಹಿಂದುತ್ವಕ್ಕಾಗಿ ಹೋರಾಟದಲ್ಲಿ ಇದು ಸಹಜ, ಇದಕ್ಕೆಲ್ಲಾ ಮಣಿಯುವ ಪ್ರಶ್ನೆಯೇ ಇಲ್ಲ. ಈ ಕಾರಣಕ್ಕಾಗಿ ಪಕ್ಷ, ಸಿದ್ದಾಂತ, ರಾಷ್ಟ್ರೀಯತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.

click me!