ಟಮೆಟೋ, ಬೆಂಡೆ, ಶುಂಠಿ ಬೆಳೆಯಲ್ಲಿ ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ

By Kannadaprabha News  |  First Published Feb 18, 2023, 5:44 AM IST

ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಫೆ.18 ರಿಂದ 22 ರವರೆಗೆ ಸ್ಪಷ್ಟವಾತಾವರಣವಿದ್ದು, ಮಳೆ ಬರುವ ಸಂಭವವಿಲ್ಲ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.


  ಮೈಸೂರು :  ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಫೆ.18 ರಿಂದ 22 ರವರೆಗೆ ಸ್ಪಷ್ಟವಾತಾವರಣವಿದ್ದು, ಮಳೆ ಬರುವ ಸಂಭವವಿಲ್ಲ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಲಹೆಗಳು- ಮಾವು ಹೂ ಬಿಡುವ ಹಂತದಲ್ಲಿ ಪೊಟ್ಯಾಸ್ಸಿಯಂ ನೈಟ್ರೇಟ್‌ (13-0-45): 20 ಗ್ರಾಂ/ಲೀ ಸಿಂಪಡಿಸುವುದರಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

Tap to resize

Latest Videos

ಟೊಮೆಟೋ ಬೆಳೆಯಲ್ಲಿ ಹಣ್ಣು ಕೊಳೆಯುವ ರೋಗ ಕಂಡು ಬಂದಲ್ಲಿ, ಈ ರೋಗದ ಬಾಧೆಗೆ ಶೇ.0.3 ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ ಮ್ಯಾಂಕೊಜೆಬ್‌ ಶಿಲಿಂದ್ರನಾಶಕವನ್ನು ಸಿಂಪಡಿಸಬೇಕು.

ಟೊಮೆಟೋ ಬೆಳೆಯಲ್ಲಿ ಮೊದಲ ಅಂಗಮಾರಿ ಕಂಡು ಬಂದರೇ, ಇದರ ಹತೋಟಿಗಾಗಿ ಮ್ಯಾಂಕೋಜೆಬ್‌ 75 ಡಬೂ ್ಲ ್ಯಪಿ- 2.0 ಗ್ರಾಂ ಅಥವಾ ಮ್ಯಾನೆಬ್‌ 75 ಡಬ್ಲೂ ್ಯಪಿ- 2.0 ಗ್ರಾಂ/ ನೀರಿಗೆ ಸೇರಿಸಿ ಸಿಂಪಡಿಸುವುದು.

ಬೆಂಡೆ ಬೆಳೆಯಲ್ಲಿ ಜಿಗಿ ಹುಳು, ಸಸ್ಯ ಹೇನು ಕಂಡು ಬಂದಲ್ಲಿ ಅಕ್ಸಿಡೆಮೆಟಾನ್‌ ಮಿಥೈಲ್‌ 25 ಇಸಿ 1.3 ಮಿ.ಲೀ./ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಶುಂಠಿ ಬಿತ್ತುವ ಮುನ್ನ ಬಿತ್ತನೆ ಗೆಡ್ಡೆಗಳನ್ನು ಲೀ. ನೀರಿಗೆ 4 ಗ್ರಾಂ ಮ್ಯಾಂಕೋಜೆಬ್‌ ಸೇರಿಸಿ ತಯಾರಿಸಿದ ದ್ರಾವಣದಲ್ಲಿ ಉಪಚರಿಸುವುದು. ಇದರಿಂದ ಗೆಡ್ಡೆ ಕೊಳೆಯುವ ರೋಗ ರಕ್ಷಿಸಿಕೊಳ್ಳಬಹುದು ಎಂದು ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಡಾ.ಜಿ.ವಿ. ಸುಮಂತ್‌ಕುಮಾರ್‌ ಸಲಹೆ ನೀಡಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 94498 69914, 95353 45814 ಸಂಪರ್ಕಿಸಬಹುದು.

ಒಣಗಿದ ಟೊಮೇಟೋ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು. 

ಟೊಮೇಟೋ (Tomato) ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಳಸಲ್ಪಡುವ ಸಾಮಾನ್ಯ ತರಕಾರಿಯಾಗಿದೆ. ಇದರಿಂದ ಸಾರು, ಸಾಂಬಾರು ಸಲಾಡ್, ಚಟ್ನಿ, ಜ್ಯೂಸ್ ಮೊದಲಾದವುಗಳನ್ನು ತಯಾರಿಸಲಾಗುತ್ತದೆ. ಮಾತ್ರವಲ್ಲ, ತ್ವಚೆಯನ್ನು ಹೆಚ್ಚಿಸಲು ಫೇಸ್ ಪ್ಯಾಕ್ ಆಗಿಯೂ ಇದನ್ನು ಬಳಸುತ್ತಾರೆ. ತರಕಾರಿ (Vegetabke)ಯಾಗಿ ಇದನ್ನು ಬಳಸುವುದಲ್ಲದೆ ಹಸಿ ರೂಪದಲ್ಲಿಯೂ ತರಕಾರಿಯನ್ನು ಹೆಚ್ಚಿನವರು ಬಳಸುತ್ತಾರೆ. ಸ್ಯಾಂಡ್‌ವಿಚ್‌, ಬರ್ಗರ್ ತಿನ್ನುವಾಗ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಆದರೆ, ಇದಲ್ಲದೆಯೂ ಒಣಗಿದ ಟೊಮೇಟೋ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು. 

ಬಿಸಿಲಿನಲ್ಲಿ ಒಣಗಿದ ಟೊಮೆಟೊಗಳನ್ನು ತಿನ್ನುವುದರಿಂದ ನೀವು ಅನೇಕ ಮಾರಕ ರೋಗಗಳನ್ನು ತಪ್ಪಿಸಬಹುದು ಎಂದು ನಿಮಗೆ ತಿಳಿದಿದೆಯೇ. ಆದರೆ, ಈ ಟೊಮೆಟೊಗಳನ್ನು ಬಿಸಿಲಿನಲ್ಲಿ ಮಾತ್ರ ಒಣಗಿಸಬೇಕು. ಅಂತಹ ಟೊಮೆಟೊಗಳು ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತವೆ. ಇದನ್ನು ತರಕಾರಿ (Vegetable), ಪಿಜ್ಜಾ, ಸ್ಯಾಂಡ್‌ವಿಚ್ ಇತ್ಯಾದಿಗಳಲ್ಲಿ ಬಳಸಬಹುದು. ಹಾಗಿದ್ರೆ ಒಣ ಟೊಮೇಟೋಗಳನ್ನು ಆಹಾರದಲ್ಲಿ ಬಳಸೋದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ತಿಳಿಯೋಣ

Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ

ಪೋಷಕಾಂಶಗಳ ಉಗ್ರಾಣ: ನ್ಯೂಟ್ರಿಷನ್ ವ್ಯಾಲ್ಯೂ ಆರ್ಗನೈಸೇಶನ್ ನ ವರದಿಯ ಪ್ರಕಾರ ಒಣಗಿದ ಟೊಮೇಟೋದಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಇದು ಮುಖ್ಯವಾಗಿ ವಿಟಮಿನ್ ಸಿ, ವಿಟಮಿನ್ ಕೆ, ನಿಯಾಸಿನ್, ಮ್ಯಾಂಗನೀಸ್, ಪೊಟ್ಯಾಸಿಯಮ್, ತಾಮ್ರ, ಪ್ರೋಟೀನ್, ಫೈಬರ್ ಅನ್ನು ಹೊಂದಿರುತ್ತದೆ. ಹೀಗಾಗಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಬಿಸಿಲಿನಲ್ಲಿ ಒಣಗಿಸಿದ ಟೊಮೇಟೊಗಳು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿವೆ. ಶೀತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ (Health problem)ಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಸಿ ಸಹಾಯ ಮಾಡುತ್ತದೆ. ಇದರಲ್ಲಿ ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕುಗಳೂ ಸೇರಿವೆ. ಇದರೊಂದಿಗೆ ವಿಟಮಿನ್ ಸಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಉತ್ತಮವಾಗಿದೆ ಎಂದು ಸಾಬೀತಾಗಿದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ, ಒಣಗಿದ ಟೊಮೇಟೊಗಳು ಅಧಿಕ ರಕ್ತದೊತ್ತಡವನ್ನು (Blood pressure) ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ, ದೇಹವು ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಕಡಿಮೆ ಸೋಡಿಯಂ ಅನ್ನು ಪಡೆಯುತ್ತದೆ, ಇದು ಅಧಿಕ ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಾಗಿದೆ. 

Health Tips: ಚಳಿಗಾಲದಲ್ಲಿ ಪಾಲಕ್-ಟೊಮೆಟೊ ಜ್ಯೂಸ್ ಕುಡಿದು ಹೆಲ್ತಿಯಾಗಿರಿ

click me!