ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಕಲ್ಯಾಣ ಮಂಟಪದ ಪಕ್ಕದ ಜಾಗ ಒತ್ತುವರಿಯಾಗಿದೆ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಸಮರ ಸಾರಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಎರಡು ಬಾರಿ ರಾಜಿಗೆ ಯತ್ನಿಸಿದ್ದಾರೆ
ಮೈಸೂರು : ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಕಲ್ಯಾಣ ಮಂಟಪದ ಪಕ್ಕದ ಜಾಗ ಒತ್ತುವರಿಯಾಗಿದೆ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಸಮರ ಸಾರಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಎರಡು ಬಾರಿ ರಾಜಿಗೆ ಯತ್ನಿಸಿದ್ದಾರೆ. ಕಳೆದ ವರ್ಷದ ಡಿ.14 ರಂದು ಬೆಳಗಾವಿ ಅಧಿವೇಶನ ಕಾಲಕ್ಕೆ ಭೇಟಿ ಮಾಡಿ ಕ್ಷಮಿಸಿ ಎಂದು ಕೇಳಿದ್ದರು. ಮತ್ತೆ ಈಗ ಬೆಂಗಳೂರು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಿರುವುದರಿಂದ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾರೆ.
’ನನಗೆ ದೊರೆತ ಮಾಹಿತಿ ಹಾಗೂ ದೀಶಾಂಕ್ ಆ್ಯಪ್‌ನಲ್ಲಿ ದ್ದ ಪ್ರಾಥಮಿಕ ಸಾಕ್ಷ್ಯಾಧಾರಗಳ ಮೇಲೆ ಸರ್ವೇಗೆ ಆದೇಶಿಸಿದ್ದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಇದು ಸಂಪೂರ್ಣ ಅಧಿಕೃತ ಕಾರ್ಯ. ಇದರಲ್ಲಿ ವೈಯಕ್ತಿಕವಾಗಿ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದೇಶ ಬಂದಿರುವುದನ್ನು ಸ್ವತಃ ಸಾ.ರಾ. ಮಹೇಶ್ ಖಚಿತಪಡಿಸಿದ್ದಾರೆ.
ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಈಗ ಮತ್ತೊಂದು ಆರೋಪ
ಮೈಸೂರು : ಶಾಸಕ ಸಾ.ರಾ ಮಹೇಶ್ ವಿರುದ್ಧ ಸಿಡಿದು ಬಾರಿ ಸದ್ದು ಮಾಡಿದ್ದ ಅಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕರೋನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಬಾರಿ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನ ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.
ಒಂದು ಮಂಚ, ಒಂದು ಹಾಸಿಗೆ, ಎರೆಡು ಯೋಗ ಮ್ಯಾಟ್, ಎರೆಡು ಪ್ಲಾಸ್ಟಿಕ್ ಸ್ಟೂಲ್, ಒಂದು ಮೈಕ್ರೋ ಓವನ್ ಹೀಗೆ ಒಟ್ಟು 23 ಬಗ್ಗೆಯ ಗೃಹ ಬಳಕೆ ವಸ್ತುಗಳನ್ನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಆಡಳಿತ ತರಭೇತಿ ಸಂಸ್ಥೆಯಿಂದ ಹೊತ್ತೊಯ್ದ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್‌ನಲ್ಲಿ ಮೈಸೂರಿಗೆ ಆಗಮಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಭೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. 40 ದಿನಗಳ ವಾಸ್ತವ್ಯದ ನಂತರ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ತೆರಳಿದ ರೋಹಿಣಿ ಸಿಂಧೂರಿ ಹೋಗುವಾಗ ತಾವು ಬಳಸುತ್ತಿದ್ದ ಗೃಹ ಬಳಕೆ ವಸ್ತುಗಳ ಜೊತೆ ಆಡಳಿತ ತರಭೇತಿ ಸಂಸ್ಥೆಗೆ ಸೇರಿದ ಈ ಕಳಗೆ ನಮೂದಿಸಲಾದ ವಸ್ತುಗಳನ್ನ ತೆರದುಕೊಂಡು ಹೋಗಿದ್ದಾರೆ ಎಂಬ ಕೇಳಿ ಬಂದಿದೆ.
ಆಡಿಯೋ ವೈರಲ್: ಕಾನೂನು ಕುಣಿಕೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
ಸಂಸ್ಥೆಯಿಂದ ನಾಲ್ಕನೇ ಬಾರಿ ಪತ್ರ: ಐಎಎಸ್ ರೋಹಿಣಿ ಸಿಂಧೂರಿ ಕಾಲದಲ್ಲಿ ಸಂಸ್ಥೆಯಿಂದ ತೆಗೆದುಕೊಂಡು ಹೋಗಲಾದ ವಸ್ತುಗಳನ್ನ ಮರಳಿಸುಂತೆ ಸತತವಾಗಿ ನಾಲ್ಕು ಬಾರಿ ಪತ್ರ ಬರೆಯಲಾಗಿದೆ. ಮೂರಿ ಭಾರಿ ಪತ್ರ ಬರೆದ ನಂತರ ಪಟ್ಟಿಯಲ್ಲಿರುವ ಹಲವು ವಸ್ತುಗಳನ್ನ ವಾಪಸ್ ಮಾಡಿರುವ ಜಿಲ್ಲಾಧಿಕಾರಿ ನಿವಾಸದ ಸಿಬ್ಬಂದಿ ಇನ್ನೂ 12 ಬಗೆಯ ವಸ್ತುಗಳನ್ನ ವಾಪಸ್ ಮಾಡದೆ ಸಾತಯಿಸುತ್ತಿದ್ದಾರೆ. ಹೀಗಾಗಿ 2022 ನವೆಂಬರ್ 30 ರಂದು ನಾಲ್ಲನೇ ಬಾರಿ ಪತ್ರ ಬರೆದಿರುವ ಆಡಳಿತ ತರಭೇತಿ ಸಂಸ್ಥೆಯ ಜಂಟಿ ನಿರ್ದೇಶಕರು ರೋಹಿಣಿ ಸಿಂಧೂರಿ ವಾಸ್ತವ್ಯದ ಸಂಧರ್ಭದಲ್ಲಿ ತೆಗೆದುಕೊಂಡು ಹೋಗಲಾಗಿರುವ ಮರಳಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಇರುವಂತೆ ಮಂಚ, ಹಾಸಿಗೆ, ಯೋಗ ಮ್ಯಾಟ್, ಸ್ಟೀಲ್ ವಾಟರ್ ಜೆಗ್ ಸೇರಿ ಇನ್ನೂ ಹಲವು ವಸ್ತುಗಳನ್ನ ಮರಳಿಸಬೇಕಿದೆ.
ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ಎಲ್ಲಾ ದಾಖಲೆ ಸಲ್ಲಿಕೆ
ವಸ್ತು ಮರಳಿಸದಿದ್ದರೆ ಮತ್ತೆ ವಿವಾದ: ಹೀಗೆ 23 ಗೃಹ ಉಪಯೋಗಿ ವಸ್ತುಗಳು ಆಡಳಿತ ಸಂಸ್ಥೆ ಅತಿಥಿ ಗೃಹದಿಂದ ಜಿಲ್ಲಾಧಿಕಾರಿ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗಿದೆ. ಅವುಗಳನ್ನ ಹಿಂದುಗಿರಿಸುವಂತೆ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ಧೇಶಕರು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗೃಹ ಉಪಯೋಗಿ ವಸ್ತುಗಳ ಬಳಕೆ ವಿಚಾರದಲ್ಲೂ ವಿವಾದ ಸೃಷ್ಟಿಕೊಂಡಿರುವುದು ವಿಪರ್ಯಾಸವೆ ಸರಿ.
ತೆಗೆದುಕೊಂಡ ಹೋದ ವಸ್ತುಗಳ ಪಟ್ಟಿ: