ಹುಣಸೂರು ಬೈ ಎಲೆಕ್ಷನ್: ಪ್ರಚಾರದಲ್ಲಿ ಯುವನಾಯಕರದ್ದೇ ಹವಾ!

By Divya Perla  |  First Published Dec 4, 2019, 12:10 PM IST

ಹುಣಸೂರು ಉಪಚುನಾವಣೆ ಅಖಾಡದಲ್ಲಿ ಯುವಕರ ಹವಾ ಹೆಚ್ಚಾಗಿದೆ. ಮಂಗಳವಾರವಷ್ಟೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗಮನಾರ್ಹ ವಿಷಯ ಎಂದರೆ ಈ ಬಾರಿ ಯುವಜನರು ಪ್ರಚಾರ ಕಾರ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ್ದಾರೆ.


ಮೈಸೂರು(ಡಿ.04): ಹುಣಸೂರು ಉಪಚುನಾವಣೆ ಅಖಾಡದಲ್ಲಿ ಯುವಕರ ಹವಾ ಹೆಚ್ಚಾಗಿದೆ. ಮಂಗಳವಾರವಷ್ಟೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗಮನಾರ್ಹ ವಿಷಯ ಎಂದರೆ ಈ ಬಾರಿ ಯುವಜನರು ಪ್ರಚಾರ ಕಾರ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಕಾಂಗ್ರೆಸ್‌ ಪಾಳೆಯದಲ್ಲಿ ಒಕ್ಕಲಿಗ, ಕುರುಬ, ನಾಯಕ, ಪರಿಶಿಷ್ಟಜಾತಿ, ಲಿಂಗಾಯತ ಕಾಂಬಿನೇಷನ್‌ ಎಂಬಂತೆ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ವರುಣ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಎಸ್‌. ಯತೀಂದ್ರ, ಎಚ್‌.ಡಿ. ಕೋಟೆ ಶಾಸಕರೂ, ಅವಿಭಜಿತ ಮೈಸೂರು ಪ್ರಭಾವಿ ನಾಯಕರೂ ಆಗಿದ್ದ ಮಾಜಿ ಶಾಸಕ ದಿವಂಗತ ಎಸ್‌. ಚಿಕ್ಕಮಾದು ಅವರ ಪುತ್ರ ಅನಿಲ್‌ ಚಿಕ್ಕಮಾದು, ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌, ಮಾಜಿ ಸಚಿವಾದ ದಿವಂಗತ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪುತ್ರ ಎಚ್‌.ಎಂ. ಗಣೇಶಪ್ರಸಾದ್‌ ತೀವ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Latest Videos

undefined

ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಈಗ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ವಿಜಯಕುಮಾರ್‌ ಮುಂದೊಂದು ದಿನ ಶಾಸಕರಾಗುವ ಬಯಕೆ ಹೊಂದಿರುವವರು. ಅವರು ಮೂಲತಃ ಪಿರಿಯಾಪಟ್ಟಣ ತಾಲೂಕಿನವರು. ಯತೀಂದ್ರ ಹಾಗೂ ಅನಿಲ್‌ 2018 ರಲ್ಲಿಯೇ ಶಾಸಕರಾಗಿ ಸಮರ್ಥ ಉತ್ತರಾಧಿಕಾರಿಗಳು ಎಂದು ಸಾಬೀತು ಮಾಡಿದ್ದಾರೆ. ಸುನಿಲ್‌ ಕೂಡ ಟಿ. ನರಸೀಪುರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರ ತಂದೆ ಡಾ.ಎಚ್‌.ಸಿ. ಮಹದೇವಪ್ಪ ನಂಜನಗೂಡಿನಿಂದ ಸ್ಪರ್ಧಿಸಲು ಬಯಸಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಡಾ.ಮಹದೇವಪ್ಪ ಟಿ. ನರಸೀಪುರದಿಂದಲೇ ಕಣಕ್ಕಿಳಿದಿದ್ದರಿಂದ ಸುನಿಲ್‌ ಬೋಸ್‌ ಸ್ಪರ್ಧಿಸಲಾಗಲಿಲ್ಲ.

ಸಾವಿನಂಚಿನಿಂದ ವ್ಯಕ್ತಿಯನ್ನು ಕಾಪಾಡಿದ ಅಪೋಲೊ ಆಸ್ಪತ್ರೆ

ಎರಡನೇ ಬಾರಿ ಜಿಪಂ ಸದಸ್ಯರಾಗಿರುವ ಡಿ. ರವಿಶಂಕರ್‌ 2018 ರಲ್ಲಿ ಕೆ.ಆರ್‌.ನಗರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜೆಡಿಎಸ್‌ನ ಸಾ.ರಾ. ಮಹೇಶ್‌ ಅವರೆದುರು ಕಡಿಮೆ ಅಂತರದಲ್ಲಿ ಸೋತವರು. ಮತ್ತೊಂದು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಅವರ ತಂದೆ ದೊಡ್ಡಸ್ವಾಮೇಗೌಡ 2013 ರಲ್ಲಿ ಕೆ.ಆರ್‌. ನಗರದಲ್ಲಿ ಸಾ.ರಾ. ಮಹೇಶ್‌ ಎದುರು ಸೋತಿದ್ದರು.

ಎಚ್‌.ಎಂ. ಗಣೇಶಪ್ರಸಾದ್‌ ಅವರ ತಂದೆ ಮಹದೇವಪ್ರಸಾದ್‌ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎರಡು ಬಾರಿ ಸೋತು ನಂತರ ಸತತ ಐದು ಬಾರಿ ಆಯ್ಕೆಯಾಗಿ, ಮೂರು ಬಾರಿ ಸಚಿವರಾಗಿದ್ದರು. ಅವರ ನಿಧನದಿಂದ 2017 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಡಾ.ಗೀತಾ ಮಹದೇವಪ್ರಸಾದ್‌ ಆಯ್ಕೆಯಾಗಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಬಿಜೆಪಿಯ ಸಿ.ಎಸ್‌. ನಿರಂಜನಕುಮಾರ್‌ ಎದುರು ಸೋತರು. ಮುಂದಿನ ಚುನಾವಣೆಯಲ್ಲಿ ಎಚ್‌.ಎಂ. ಗಣೇಶ್‌ಪ್ರಸಾದ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಮಹಿಳೆಯರ ಬಳಿ ಅಸಭ್ಯ ವರ್ತನೆ : 9 ಯುವಕರು ಅರೆಸ್ಟ್.

ಬಿಜೆಪಿಯಲ್ಲಿ ಹಾಲಿ ಕೆ.ಆರ್‌. ನಗರ ತಾಲೂಕು ಹೊಸ ಅಗ್ರಹಾರ ಜಿಪಂ ಸದಸ್ಯರೂ ಆದ ಅಮಿತ್‌ ವಿ. ದೇವರಹಟ್ಟಿಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವನಾಥ್‌ ಬದಲು ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾತಿತ್ತು. ನಂತರ ಸಿ.ಪಿ. ಯೋಗೇಶ್ವರ್‌ ಹೆಸರು ಬಂದಿತು. ಕೊನೆಗೆ ವಿಶ್ವನಾಥ್‌ ಸ್ಪರ್ಧಿಸಿದ್ದಾರೆ.

ಇನ್ನೂ ಜೆಡಿಎಸ್‌ ಪರವಾಗಿ ಸ್ಥಳೀಯವಾಗಿ ಹಲವಾರು ಯುವಕರು ಪ್ರಚಾರದಲ್ಲಿ ನಿರತರಾಗಿದ್ದರೂ ಹೆಚ್ಚು ಮಿಂಚುತ್ತಿರುವುದು ಹಾಸನದ ಯುವ ಸಂಸದರಾದ ಪ್ರಜ್ವಲ್‌ ರೇವಣ್ಣ. ಇವರು ತಾತ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಚಿಕ್ಕಪ್ಪ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಅಪ್ಪ ಹಾಗೂ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಪ್ರಚಾರದಲ್ಲಿ ಸಾಥ್‌ ನೀಡಿ, ಗಮನ ಸೆಳೆದಿದ್ದಾರೆ.

ಹುಣಸೂರು: ಇತರರ ಸ್ಪರ್ಧೆಯಿಂದ ಯಾರಿಗೆ ಅನುಕೂಲ..?

click me!