ವಾಸದ ಮನೆಗಾಗಿ ಅರಣ್ಯ ಇಲಾಖೆ ಕಚೇರಿ ಏರಿದ ಭೂಪ : ವಿಶಿಷ್ಟ ಪ್ರತಿಭಟನೆ

By Suvarna News  |  First Published Dec 4, 2019, 12:03 PM IST

ವಾಸನ ಮನೆಗಾಗಿ ಸರ್ಕಾರಿ ಕಚೇರಿ ಮೇಲೆ ಏರಿ ವ್ಯಕ್ತಿಯೋರ್ವ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಶಿವಮೊಗ್ಗದಲ್ಲಾಗಿದೆ.


ಶಿವಮೊಗ್ಗ [ಡಿ.04]: ವಾಸದ ಮನೆ ಹಕ್ಕು ಪತ್ರಕ್ಕಾಗಿ ಅರಣ್ಯ ಇಲಾಖೆ ಕಚೇರಿ ಮೇಲೆ ಏರಿಕ ವ್ಯಕ್ತಿಯೋರ್ವರು ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಅರಣ್ಯ ಇಲಾಖೆ ಕಚೇರಿ ಮೇಲೆ ಏರಿ ಪ್ರತಿಭಟನೆ ನಡೆಸಿದ್ದಾರೆ. 

Tap to resize

Latest Videos

ಸಾರ್ವಜನಿಕರಿಗೆ  ಗ್ರಾಮಸ್ಥರಿಗೆ ಹಕ್ಕು ಪತ್ರ ನೀಡಲು ನಗರ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಹಲವು ವರ್ಗಳಿಂದಲೂ ಕೂಡ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

220 ಕುಟುಂನಗಳಿಗೆ ಹಕ್ಕು ಪತ್ರ ನೀಡದ ಹಿನ್ನೆಲೆ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದ್ದು, ಯಾವುದೇ ರೀತಿ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ NOC ನೀಡುವವರೆಗೂ ಕಚೇರಿಯ ಮೇಲಿಂದ ತಾವು ಕೆಳಕ್ಕೆ ಇಳಿಯುವುದಿಲ್ಲ ಹಟ ಹಿಡಿದಿದ್ದಾರೆ. 

click me!