ಸತತವಾಗಿ ಏಳೆಂಟು ವರ್ಷಗಳ ಕಾಲ ದಟ್ಟವಾದ ಕಾಡು ಮತ್ತು ಎತ್ತರದ ಬೆಟ್ಟ ಗುಡ್ಡಗಳ ನಡುವೆ ರಾಜಾರೋಷವಾಗಿ ಓಡಾಡುತ್ತಿದ್ದ ಒಂಟಿ ಸಲಗ ಯಾರ ಕೈಗೂ ಸಿಗದೆ ಗಡಿಪಾರಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.05): ಸತತವಾಗಿ ಏಳೆಂಟು ವರ್ಷಗಳ ಕಾಲ ದಟ್ಟವಾದ ಕಾಡು ಮತ್ತು ಎತ್ತರದ ಬೆಟ್ಟ ಗುಡ್ಡಗಳ ನಡುವೆ ರಾಜಾರೋಷವಾಗಿ ಓಡಾಡುತ್ತಿದ್ದ ಒಂಟಿ ಸಲಗ ಯಾರ ಕೈಗೂ ಸಿಗದೆ ಗಡಿಪಾರಾಗಿದೆ. ಹೌದು! ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರ, ಊರುಬಗೆ, ಹಳೇಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ದೀರ್ಘಾವಧಿ ನೆಲೆವೊರಿದ್ದ ಕಾಡಾನೆಯ ಲೈಫ್ ಹಿಸ್ಟರಿ.
undefined
ಸುಮಾರು 25 ವರ್ಷ ವಯಸ್ಸಿನ ದೈತ್ಯ ಆನೆ. ಈ ಭಾಗದಲ್ಲಿ ಇಬ್ಬರ ಪ್ರಾಣ ತೆಗೆದುಕೊಂಡಿದೆ. ಆನೆ ನಡೆದಿದ್ದೆ ದಾರಿ ಎನ್ನುವಂತೆ ಕಣ್ಣಿಗೆ ಕಂಡಿದ್ದು, ಕಾಲಿಗೆ ಸಿಕ್ಕಿದ್ದೆಲ್ಲಾ ಬೆಳೆ ಹಾಗೂ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿತ್ತು. ಇದರಿಂದಾಗಿಈ ಭಾಗದ ಜನರು ಆತಂಕದಲ್ಲಿ ಜೀವನದಲ್ಲಿ ನಡೆಸುತ್ತಿದ್ದರು. ಈ ಆನೆಯನ್ನು ಹಿಡಿಯಲು ಮೊದಲ ಬಾರಿ ನಡೆದ ಹನಿಟ್ರ್ಯಾಪ್ ಪ್ರಯತ್ನ ವಿಫಲವಾಗಿತ್ತು. ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ನಾಗರಹೊಳೆಯಿಂದ ದಸರಾ ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಗಣೇಶ, ಪ್ರಶಾಂತ್ ಸೇರಿದಂತೆ ಒಟ್ಟು 6 ಆನೆಗಳನ್ನು ಕರೆಸಿಕೊಳ್ಳಲಾಗಿತ್ತು.
ಪ್ರಾಮಾಣಿಕರಾಗಿದ್ರೆ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಸವಾಲು
ಈ ಆನೆಗಳನ್ನು ಕರೆಸಿಕೊಳ್ಳಲು ಕಾರಣ ಇದೆ. ಒಂಟಿ ಸಲಗ ತುಂಬಾ ಬಲಿಷ್ಟವಾಗಿದ್ದು, ಸಾಧಾರಣ ಆನೆಗಳ ಮಾತು ಕೇಳುವಂತ್ತಿರಲಿಲ್ಲ. ಅದ್ದರಿಂದಾಗಿ ದಸರಾ ಹಬ್ಬ ಆಗುವವರೆಗೆ ಕಾಯಬೇಕಾಗಿತ್ತು. 6 ಆನೆಗಳು, 100 ಅರಣ್ಯ ಸಿಬ್ಬಂದಿಗಳು ಮೂರು ತಂಡಗಳಲ್ಲಿ ಸತತವಾಗಿ ನಾಲ್ಕು ದಿನ ಊರುಬಗೆ ಸೇರಿದಂತೆ ಸುತ್ತಮುತ್ತ ಕಾರ್ಯಾಚರಣೆ ನಡೆಸಿದರು. ಆರಂಭದಲ್ಲೇ ಆನೆಯ ಸಂಚಾರ ಕಂಡು ಹಿಡಿಯಲು ಕಷ್ಟವಾಗಿತ್ತು. ನಂತರ ಕಂಡಿತಾದರೂ ಕಾರ್ಯಾಚರಣೆಯ ಆನೆಗಳು ಅವುಗಳ ಬಳಿ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಒಂಟಿ ಸಲಗ ಸಕಲೇಶಪುರದ ಕಾಡಮನೆ ಎಸ್ಟೇಟ್ ಹೋಗಿರುವುದು ದೃಢಪಟ್ಟಿದೆ ಎಂದು ಚಿಕ್ಕಮಗಳೂರು ಡಿಎಫ್‌ಓ ಕ್ರಾಂತಿ ಅವರು ತಿಳಿಸಿದ್ದಾರೆ.
ಅಭಿಮನ್ಯು ಬಳಕೆಗೆ ಆಕ್ಷೇಪ: ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ .ಊರು ಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯುವನ್ನು ಕರೆ ತಂದಿದ್ದು, ಅಭಿಮನ್ಯುವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.
ಒಂಟಿ ಸಲಗ ಕಾರ್ಯಾಚರಣೆ ಸ್ಥಗಿತ: ಮೂಡಿಗೆರೆ ತಾಲ್ಲೂಕಿನ ಊರುಬಗೆ ಅರಣ್ಯ ಪ್ರದೇಶದಲ್ಲಿ ನರಹಂತಕ ಕಾಡಾನೆಯನ್ನು ಹಿಡಿದು ಸಾಗಿಸುವ ಆಪರೇಷನ್ ಬೈರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆ ಬಂದಿದ್ದ 6 ದಸರಾ ಆನೆಗಳು ವಾಪಸ್ ತೆರಳಿದೆ. ಅಭಿಮನ್ಯುವಿಗೆ ಜ್ವರ ಭೇದಿ ಬಾಧಿಸಿದೆ. ಅಜ್ಜಯ್ಯ ಮತ್ತು ಗೋಪಾಲಸ್ವಾಮಿ ಆನೆಗೆ ಮದ ಬಂದಿದೆ. ಬೈರ ಮೂಡಿಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಸಕಲೇಶಪುರ ಅಥವ ಮಂಗಳೂರು ಅರಣ್ಯ ಭಾಗಕ್ಕೆ ತೆರಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಈ ಕಾರಣದಿಂದ ಕಾರ್ಯಚರಣೆ ಮಾಡಲು ಸಾಧ್ಯವಿಲ್ಲವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಡಿಸಿಎಫ್ ಕ್ರಾಂತಿ ತಿಳಿಸಿದ್ದಾರೆ.
Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ
ಮಲೆನಾಡಿನ ಜನರಿಗೆ ನಿರಾಶೆ: ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆ ಈವರೆಗೆ ಹಲವರನ್ನು ಬಲಿ ತೆಗೆದುಕೊಂಡಿದ್ದು ಸಾಕಷ್ಟು ಬೆಳೆಯನ್ನು ಹಾನಿ ಮಾಡಿದೆ. ಆನೆ ಹಿಡಿಯುವಂತೆ ಸ್ಥಳೀಯರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು, ಕಾರ್ಯಾಚರಣೆ ಆರಂಭವಾಗಿ ಸ್ಥಳೀಯರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಕಾರ್ಯಾಚರಣೆ ಸ್ಥಗಿತಕೊಂಡು ನಿರಾಶೆ ತಂದಿದೆ.