
ಮೈಸೂರು (ಫ.21): ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣದ ಬಳಿಕ ಮೈಸೂರಿಗೆ ಅಬ್ದುಲ್ ರಜಾಕ್ ಖಾನ್ ವಕೀಲರೊಂದಿಗೆ ಭೇಟಿ ನೀಡಿದ್ದಾರೆ. ಆರೋಪಿಗಳಿಗೆ ಬೇಲ್ ಕೊಡಿಸಲು ಮುಂದಾಗಿರುವುದಾಗಿ ರಜಾಕ್ ತಿಳಿಸಿದ್ದಾರೆ. ಪೋಲೀಸರ ಮೇಲೆ ಮಾತ್ರವಲ್ಲ ಯಾರ ಮೇಲೆ ಹಲ್ಲೆ ಮಾಡಿದರೂ ಅದು ತಪ್ಪೇ. ಇದಕ್ಕೆ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಈ ಪ್ರಕರಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಇದರಲ್ಲಿ ಸಣ್ಣ ಪುಟ್ಟ ಹುಡುಗರು ಅಮಾಯಕರು ಇದ್ದಾರೆ. ಇವರನ್ನ ಬಿಡಿಸಲು ವಕೀಲರ ನೇಮಕ ಮಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಉದಯಗಿರಿಯಲ್ಲಿ ಒಂದು ಶಾಂತಿ ಸಭೆ ಮಾಡೋಣ. ಇಂತಹ ಘಟನೆಗಳು ನಡೆಯದ ರೀತಿಯಲ್ಲಿ ನೋಡಿಕೊಳ್ಳೋಣ. ಪ್ರವಾದಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಯಾರಿಗೆ ಆದರೂ ಕೋಪ ಬಂದೇ ಬರುತ್ತದೆ. ಪ್ರತಾಪ್ ಸಿಂಹ ನಮ್ಮನ್ನ ಭಾರತ ಬಿಟ್ಟುಹೋಗಿ ಎಂದು ಹೇಳುತ್ತಾರೆ. ನಮ್ಮನ್ನ ಭಾರತ ಬಿಟ್ಟೋಗಿ ಅಂತ ಹೇಳಲಿಕ್ಕೆ ಇವನ್ಯಾರು. ಪ್ರತಾಪ್ ಸಿಂಹ ಇಂತಹ ಹೇಳಿಕೆ ನೀಡೋದನ್ನ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹರನ್ನು ಪಕ್ಷದಿಂದ ಆಚೆ ಹಾಕುತ್ತಾರೆ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ. ಸಿದ್ದರಾಮಯ್ಯ ಅಂದರೆ ಒಂದು ರೀತಿ ಪ್ರೀತಿ ಜಾಸ್ತಿ ಅಷ್ಟೇ. ಹಾಗಂತ ನಾನಿಲ್ಲಿ ಯಾವುದೇ ಪಕ್ಷದ ಪರವಾಗಿ ಬಂದಿಲ್ಲ. ಘಟನೆಯಲ್ಲಿ ಕೆಲ ಅಮಾಯಕರು, ಹುಡುಗರು ಇದ್ದಾರೆ. ಅಂತಹವರ ಪರವಾಗಿ ನಾನು ಬಂದಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ನೂಪುರ್ ಶರ್ಮ ಪ್ರವಾದಿ ಬಗ್ಗೆ ಮಾತನಾಡಿದ್ದಕ್ಕೆ ಮುಸ್ಲಿಂ ದೇಶಗಳು ಖಂಡಿಸಿದ್ದವು. ಪ್ರವಾದಿಯವರ ವಿಚಾರದಲ್ಲಿ ನಮ್ಮದು ಜೀರೋ ಟಾಲರೆನ್ಸ್. ಮುಸ್ಲಿಮರಲ್ಲಿ ಕುಡಿಯೋದಿಲ್ಲ. ಹಾಗಿದ್ದರೂ ಕುಡಿಯುವವರು ಕೆಲವರಿದ್ದಾರೆ. ಹಾಗಿದ್ದಾಗಲೂ ಅವರ ಎದುರು ಯಾವುದೇ ಅರೇಬಿಕ್ ಬರಹ ಬಿದ್ದಿದ್ದರೂ ಅದನ್ನೂ ತಲೇ ಮೇಲೆ ಇಟ್ಟುಕೊಂಡು ಹೋಗುತ್ತಾರೆ. ಪ್ರವಾದಿ ವಿಚಾರಕ್ಕೆ ಬಂದರೆ ನಾವು ಜೀವ ಕೊಡೋದಕ್ಕೂ ಸಿದ್ದ ಎಂದು ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಉದಯಗಿರಿ ಠಾಣೆ ಮೇಲೆ ದಾಳಿ ಪ್ರಕರಣ: ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಇಂಥ ಕೃತ್ಯ ನಡೆಯುತ್ತವೆ: ಯದುವೀರ್ ಒಡೆಯರ್ ಕಿಡಿ