ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ನಟ ಕಿಚ್ಚ ಸುದೀಪ್ ಅಭಿಮಾನಿ ಆಚರಿಸಿಕೊಂಡಿದ್ದಾನೆ. ತನ್ನ ಹುಟ್ಟುಹಬ್ಬದಂದು ನೆಚ್ಚಿನ ನಟ ಹಾಗೂ ಹೆತ್ತ ತಂದೆ ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಶಿವಮೊಗ್ಗದ ಈ ಯುವಕನ ಪ್ರೀತಿ ಅಭಿಮಾನ ನೋಡಿದವರು ಫುಲ್ .. ಫಿದಾ...!
ಶಿವಮೊಗ್ಗ (ಆ.16): ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ನಟ ಕಿಚ್ಚ ಸುದೀಪ್ ಅಭಿಮಾನಿ ಆಚರಿಸಿಕೊಂಡಿದ್ದಾನೆ. ತನ್ನ ಹುಟ್ಟುಹಬ್ಬದಂದು ನೆಚ್ಚಿನ ನಟ ಹಾಗೂ ಹೆತ್ತ ತಂದೆ ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಶಿವಮೊಗ್ಗದ ಈ ಯುವಕನ ಪ್ರೀತಿ ಅಭಿಮಾನ ನೋಡಿದವರು ಫುಲ್ .. ಫಿದಾ...!! ಇನ್ನೂ ಮಗನ ಪ್ರೀತಿ ಕಂಡು ಹೆತ್ತವರು ಕೂಡ ಮೂಕ ವಿಸ್ಮಿತರಾಗಿದ್ದಾರೆ.
ಇಷ್ಟಕ್ಕೂ ಯುವಕ ನೀಡಿದ ವಿಶಿಷ್ಟ ಉಡುಗೊರೆಯಾದರೂ ಏನು ಗೊತ್ತಾ! ತನ್ನ ಹುಟ್ಟುಹಬ್ಬದಂತೆ ಪ್ರೀತಿ ಪಾತ್ರರಿಗೆ ತಾನೇ ಉಡುಗೊರೆ ನೀಡಿದ ಯುವಕನಾದರೂ ಯಾರು...?! ಆತನ ಪ್ರೀತಿಯ ಹುಡುಗರೇ ನೋಡಿದವರು ಭಲೆ...! ಭೇಷ್....! ಎನ್ನುತ್ತಿರುವುದಾದರೂ ಏಕೆ..?! ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಅಕ್ರಮ ಕ್ವಾರಿಯಲ್ಲಿ ಮುಳುಗಿ ಬಾಲಕರಿಬ್ಬರ ಸಾವು: ಕುಟುಂಬಸ್ಥರ ಆಕ್ರಂದನ
ಶಿವಮೊಗ್ಗ ತಾಲೂಕಿನ ಕುಸುಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಯುವಕ ಸಮರ್ಥ್ ಗೌಡ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೌದು! ವಿಭಿನ್ನವಾದ ವಿಶಿಷ್ಟವಾದ ನಿರ್ಮಲ ಪ್ರೀತಿ ಅಭಿಮಾನವನ್ನು ಕಂಡು ಯಾರಾದರೂ ಜೈ ಎನ್ನದೇ ಇರಲಾರರು. ತನ್ನ ಹೃದಯದಲ್ಲಿ ಕಿಚ್ಚ ಸುದೀಪ್ ಹಾಗೂ ಹೆತ್ತವರು ಯಾವಾಗಲೂ ಚಿರಸ್ಥಾಯಿ ಆಗಿರುವಂತೆ ಮಾಡಿದ್ದಾರೆ.
ತನ್ನ ಎದೆಯ ಎಡ ಭಾಗದಲ್ಲಿ ನಟ ಕಿಚ್ಚ ಸುದೀಪ್ ಭಾವಚಿತ್ರ ಹಾಗೂ ಬಲ ಭಾಗದಲ್ಲಿ ತಂದೆ ಕುಮಾರ್ ತಾಯಿ ಮಂಗಳಮ್ಮ, ತಂಗಿ ಮಗು ಗ್ರಿತಿಕ್ ಭಾವಚಿತ್ರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಹಾಗೂ ಹೆತ್ತವರ ಮೇಲಿನ ತನ್ನ ಪ್ರೀತಿ ಶಾಶ್ವತವಾಗಿರುವಂತೆ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಇಂದು ಸಮರ್ಥ್ ಗೌಡ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್ ಜಾರಕಿಹೊಳಿ
ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಸಮರ್ಥ್ ವಿವಿಧ ಸಂಘಟನೆಗಳಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಎಷ್ಟನೇ ವರ್ಷದ ಹುಟ್ಟುಹಬ್ಬ ಎಂದು ಬಾಯಿ ಬಿಡದ ಸಮರ್ಥ್ ತನ್ನ ಈ ಹುಟ್ಟುಹಬ್ಬವು ಯಾವಾಗಲೂ ಶಾಶ್ವತವಾಗಿ ನೆನಪಿರಬೇಕೆಂದು ಈ ರೀತಿ ಹಚ್ಚೆ ಹಾಕಿಸಿಕೊಂಡಿರುವುದು ಹೇಳಿದ್ದಾರೆ. ಸಮರ್ಥ್‌ನ ನೆಚ್ಚಿನ ನಟನ ಮೇಲಿನ ಅಭಿಮಾನ , ಹೆತ್ತವರ ಮೇಲಿನ ಅಗಾಧ ಪ್ರೀತಿ ಕಂಡು ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.