ಅದಿರು ಅಗೆದಿದ್ದಾಯ್ತು, ಇದೀಗ ಸಂಡೂರು ಬೆಟ್ಟಗಳಲ್ಲಿನ ಗುಹೆಯೊಳಗೆ ನಿಧಿ ಶೋಧ: ಹೊಸ ಟೆಕ್ನಾಲಜಿ ಬಳಸಿ ಖದೀಮರಿಂದ ಶೋಧನೆ

Published : Aug 08, 2024, 06:49 PM IST
ಅದಿರು ಅಗೆದಿದ್ದಾಯ್ತು, ಇದೀಗ ಸಂಡೂರು ಬೆಟ್ಟಗಳಲ್ಲಿನ ಗುಹೆಯೊಳಗೆ ನಿಧಿ ಶೋಧ: ಹೊಸ ಟೆಕ್ನಾಲಜಿ ಬಳಸಿ ಖದೀಮರಿಂದ ಶೋಧನೆ

ಸಾರಾಂಶ

ಸಂಡೂರು ಬೆಟ್ಟ ಗುಡ್ಡಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ದಶಕಗಳಿಂದಲೂ ನೈಸರ್ಗಿಕ ಸಂಪತ್ತಾದ ಅದಿರನ್ನು ತೆಗೆದು ಮಾರಾಟ ಮಾಡಿದ್ದಾಯ್ತು. ಬಳ್ಳಾರಿ ಸಂಡೂರಿನ ಅದಿರು ಕೇವಲ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಕುಖ್ಯಾತಿ ಪಡೆದಿದೆ. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.08): ಸಂಡೂರು ಬೆಟ್ಟ ಗುಡ್ಡಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ದಶಕಗಳಿಂದಲೂ ನೈಸರ್ಗಿಕ ಸಂಪತ್ತಾದ ಅದಿರನ್ನು ತೆಗೆದು ಮಾರಾಟ ಮಾಡಿದ್ದಾಯ್ತು. ಬಳ್ಳಾರಿ ಸಂಡೂರಿನ ಅದಿರು ಕೇವಲ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮತ್ತು ಕುಖ್ಯಾತಿ ಪಡೆದಿದೆ. ಇಷ್ಟು ದಿನ  ಅದಿರಿಗಾಗಿ ಸಂಡೂರಿನ ಗಣಿ ಗುಡ್ಡಗಳು ಅಗೆದಿದ್ದಾಯ್ತು. ಇದೀಗ ನಿಧಿಗಾಗಿ ಗಣಿ ಗುಡ್ಡಗಳಲ್ಲಿನ ಗುಹೆಯೊಳಗೆ ಅಗೆಯುವ ಕೆಲಸ ಮಾಡಲಾಗ್ತಿದೆ. ವಿಶೇಷವೆಂದರೆ ಹೊಸ ಟೆಕ್ನಾಲಜಿ ಬಳಸಿ ನಿಧಿ ಶೋಧನೆ ಮುಂದಾದ ಖದೀಮರು ಕೈಚಳಕ ನೋಡಿದ್ರೇ ಒಂದು ಕ್ಷಣ ಬೆಚ್ಚಿ ಬೀಳುವು ಖಚಿತ.

ಗುಹೆಯೊಳಗೆ ಆಕ್ಸಿಜನ್ ಪೈಪ್ ಬಿಟ್ಟಿದ್ರು: ಐತಿಹಾಸಿಕ ಕುಮಾರಸ್ವಾಮಿ ಬೆಟ್ಟದ ಸುತ್ತಲಿನ ಗುಡ್ಡಗಳಲ್ಲಿ ಹೆಚ್ಚು ಹೆಚ್ಚು ಗುಹೆ ಇದ್ದು ಇಲ್ಲಿ ನಿಧಿ ಇರಬಹುದು ಎಂದು ಶೋಧ ಮಾಡಲು ಆಂಧ್ರ ಮೂಲದ ಖದೀಮರು ಕತರ್ನಾಕ್ ಪ್ಲಾನ್ ಮಾಡಿದ್ದಾರೆ. ಸಂಡೂರು ಗಣಿಗುಡ್ಡಗಳಲ್ಲಿ ದೊಡ್ಡ ದೊಡ್ಡ ಗುಹೆಗಳಿವೆ. ಇವು ಅತ್ಯಂತ ಅಪಾಯಕಾರಿ ಗುಹೆಗಳಾಗಿರುವುದು ಒಂದಾದ್ರೇ, ಇಲ್ಲಿ ಚಿರತೆ, ಕಾಡು ಹಂದಿ ಸೇರಿದಂತೆ ಹೆಚ್ಚು ಹೆಚ್ಚು ಪ್ರಾಣಿಗಳು ಓಡಾಟ ಕೂಡ ಹೆಚ್ಚಾಗಿದೆ. 

ಮಲೆನಾಡಿನಲ್ಲಿ ಧರೆ ಕುಸಿತದ ಆತಂಕದಲ್ಲಿರುವ 17 ಕುಟುಂಬಗಳು: ಬದಲಿ ಜಾಗದ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?

ಇಂತಹ ಅಪಾಯಕಾರಿ ಗುಹೆಯಲ್ಲಿ ಇಳಿದು ಆರೋಪಿಗಳು ನಿಧಿ ಶೋಧ ಮಾಡ್ತಿದ್ದರು. ಗುಹೆಯೊಳಗೆ ಹೋದಾಗ ಉಸಿರಾಟದ ತೊಂದರೆಯಾಗದಿರಲಿ ಎಂದು ಗುಹೆಯೊಳಗೆ ಆಕ್ಸಿಜನ್ ಪೈಪ್ ಬಿಟ್ಟುಕೊಂಡಿದ್ರು. ಜನರೇಟರ್ ಬಳಸಿ ಪೈಪ್ ಮೂಲಕ ಆಕ್ಸಿಜನ್ ಸಪ್ಲೈ ಮಾಡಿಕೊಂಡು ಆಳದ ಗುಹೆಯೊಳಗಿಳಿದು ನಿಧಿ ಶೋಧ ಮಾಡ್ತಿದ್ರು. ತಾರ ನಗರ ಹಿಂಭಾಗದ ದೋಣಿಮಲೈ ರಿಸರ್ವ್ ಫಾರೆಸ್ಟ್ ಏರಿಯಾದಲ್ಲಿ ಇಂತಾಹದ್ದೊಂದು ಕುಕೃತ್ಯ ಮಾಡಿರುವುದು ಬಯಲಿಗೆ ಬಂದಿದೆ.

ನಿಧಿ ಶೋಧನೆಗಾಗಿ ಬಂದವರನ್ನು ಹಿಡಿದಿದ್ದೇ ರೋಚಕ: ನಿರಂತರವಾಗಿ ವಾರಗಳ ಕಾಲ ನಿಧಿ ಶೋಧನೆಗಾಗಿ ಗುಹೆಯೊಳಗೆ ಇಳಿದ ಆರೋಪಿಗಳು ಬಾಯಾರಿಕೆಯಿಂದ ಬಳಲಿದ್ದರು. ಈ ವೇಳೆ ಕ್ಯಾನ್ ಮೂಲಕ  ನಾರಿ ಹಳ್ಳದಲ್ಲಿ ನೀರು ತೆಗೆದುಕೊಂಡು ಹೋಗಲು ಮೂವರು ಆರೋಪಿಗಳು ಬಂದಿದ್ದರು.  ಅನುಮಾನ ಬಂದು ಅರಣ್ಯಾಧಿಕಾರಿಗಳು ವಿಚಾರಣೆ ಮಾಡಿದಾಗ ಒಬ್ಬೊಬ್ಬರು ಒಂದೊಂದು ಸುಳ್ಳಿನ ಕತೆ ಹೇಳಿದ್ದಾರೆ. ಆರಂಭದಲ್ಲಿ ಆರೋಪಿಗಳು ಪ್ರಾಣಿ ಭೇಟೆಗೆ ಬಂದಿದ್ರು ಎಂದುಕೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅರೋಪಿಗಳ ಬೆನ್ನು ಹತ್ತಿ ಗುಡ್ಡಗಳ ಮಧ್ಯೆ ಇರೋ ಗುಹೆಯೊಳಗೆ ಹೋಗಿ ನೋಡಿದಾಗ ಶಾಕ್ ಆಗಿದೆ. 

ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ, ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ: ಸಿ.ಟಿ.ರವಿ ಆಗ್ರಹ

ಆಳವಾದ ಗುಹೆಯೊಳಗೆ ಆಕ್ಸಿಜನ್ ಪೈಪ್ ಲೈನ್ ಇಟ್ಟುಕೊಂಡು ನಿಧಿಗಾಗಿ ಶೋಧ ಮಾಡ್ತಿರೋದು ಬಯಲಿಗೆ ಬಂದಿದೆ. ಆಂಧ್ರ ಮೂಲದ 11 ಆರೋಪಿಗಳ ತಂಡ ಬಂದು ಈ ಕುಕೃತ್ಯ ಮಾಡಲು ಮುಂದಾಗಿದ್ದಾರೆ. ಆಂಧ್ರ ಮೂಲದ ಶ್ರೀನಿವಾಸ್, ಆಕಾಶ್, ವೆಂಕಟ್ ರಾವ್ ಗದಗ ಮೂಲದ ಭಗತ್ , ಬಂಧನ ಮಾಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ ವಿಚಾರಣೆ ಮುಂದುವರೆಸಿದ್ದಾರೆ ಎಂದು ಸಂಡೂರು RFO ಸಯ್ಯದ್,  ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ