ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫೋಟೋವನ್ನು ದೇವರ ವಿಗ್ರಹದ ಮೇಲಿಟ್ಟು ಪೂಜಿಸುವ ಮೂಲಕ ದೇವಾಲಯದ ಅರ್ಚಕ ವಿಕೃತಿ ಮೆರೆದಿದ್ದಾರೆ.
ವಿಜಯನಗರ (ಆ.08): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಬೀದಿ ಹೆಣವಾಗಿ ಎಸೆದಿರುವ ಆರೋಪದಲ್ಲಿ ನಟ ದರ್ಶನ್ ಜೈಲು ಕಂಬಿ ಎಣಿಸುತ್ತಿದ್ದಾನೆ. ಆದರೆ, ಇಂತಹ ಕೊಲೆ ಆರೋಪಿ ನಟ ದರ್ಶನ್ ಫೋಟೋವನ್ನು ದೇವರ ವಿಗ್ರಹದ ಮೇಲಿಟ್ಟು ಪೂಜೆ ಮಾಡುವ ಮೂಲಕ ಹೂವಿನ ಹಡಗಲಿಯಲ್ಲಿ ಅರ್ಚಕರೊಬ್ಬರು ವಿಕೃತಿ ಮೆರೆದಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್ ಫೋಟೋವನ್ನು ಕುರುವತ್ತಿ ಬಸವೇಶ್ವರ ದೇವರ ಮೇಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕುರುವತ್ತಿ ಬಸವೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದೇವರ ಮೂರ್ತಿ ಮೇಲೆ ಹಾಗೂ ಮುಂಭಾಗದಲ್ಲಿ ಕೊಲೆ ಆರೋಪಿ ದರ್ಶನ್ ಪೋಟೋ ಇಟ್ಟು ಪೂಜೆ ಮಾಡಲಾಗಿದೆ. ಈ ಮೂಲಕ ಐತಿಹಾಸಿಕ ಕುರುವತ್ತಿ ಬಸವೇಶ್ವರ ದೇವಾಲಯದ ಅರ್ಚಕ ವಿಕೃತಿ ಮೆರೆದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ದೇವರ ಗರ್ಭಗುಡಿಯಲ್ಲಿ ಕೊಲೆ ಆರೋಪಿ ದರ್ಶನ್ ಫೋಟೋಗೆ ಪೂಜೆ ಸಲ್ಲಿಕೆ; ಪೂಜಾರಿಯನ್ನೇ ಅಮಾನತು ಮಾಡಿದ ಸರ್ಕಾರ!
ಇನ್ನು ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಕುಡಿಗೋಡು ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಕೊಲೆ ಆರೋಪಿ ದರ್ಶನ್‌ನ 6 ಫೋಟೋಗಳನ್ನು ಇಟ್ಟು ಪೂಜೆ ಮಾಡಲಾಗಿತ್ತು. ಈ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದ ಹಿನ್ನೆಲೆಯಲ್ಲಿ ಕೊಲೆ ಆರೋಪಿ ಪೋಟೋವನ್ನು ದೇವರ ಮುಂದಿಟ್ಟು ಪೂಜೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಧಾರ್ಮಿಕ ದತ್ತಿ ಇಲಾಖೆಯಿಂದ ಅರ್ಚಕನನ್ನು ಪೂಜಾ ಸೇವೆಗಳಿಂದ ವಜಾಗೊಳಿಸಲಾಗಿತ್ತು. ಜೊತೆಗೆ, ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದಾಗಿ ಎರಡೇ ದಿನಗಳಲ್ಲಿ ಪುನಃ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಕುರುವತ್ತಿ ಬಸವೇಶ್ವರ ದೇವಾಲಯದಲ್ಲಿ ಇಂತಹ ವಿಕೃತಿಯನ್ನು ಮೆರೆಯಲಾಗುದೆ. ಕುರವತ್ತಿ ಬಸವೇಶ್ವರ ದೇಗುಲ ಅರ್ಚಕ ಬಸಪ್ಪ ಪೂಜಾರಿ ಎನ್ನುವವರು ದೇವಾಲಯದ ಗರ್ಭಗುಡಿಯಲ್ಲಿರುವ ಬಸವೇಶ್ವರ ವಿಗ್ರಹದ ಕಾಲಿನ ಮೇಲೆ ಒಂದು ಫೋಟೋ ಹಾಗೂ ದೇವರ ಮುಂಭಾಗದಲ್ಲಿ ಒಂದು ಫೋಟೋವನ್ನು ಇಟ್ಟು ಪೂಜೆ ಮಾಡಿದ್ದಾನೆ. ದೇವರಿಗೆ ಅರ್ಚನೆ ಮತ್ತು ಮಂಗಳಾರತಿ ಮಾಡುವಾಗಲೇ ಕೊಲೆ ಆರೋಪಿ ದರ್ಶನ್ ಫೋಟೋಗೆ ಪೂಜೆ ಮಾಡಿದ್ದಾರೆ.
ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!
ನಟ ದರ್ಶನ್ ಬಿಡುಗಡೆಗೆ ಪ್ರಾರ್ಥನೆ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಲಭ್ಯವಾಗುತ್ತಿದ್ದು, ಜೈಲೂಟವೇ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಮತ್ತೊಂದೆಡೆ ಜೈಲು ಕುಣಿಕೆ ಭೀತಿ ಹೆಚ್ಚಾಗುತ್ತಿದ್ದಂತೆ ಅವರ ಅಭಿಮಾನಿಗಳಿಂದ ಬಿಡುಗಡೆಗಾಗಿ ಪ್ರಾರ್ಥನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಪೂಜಾರಿ ಬಸಪ್ಪ ಕೂಡ ತಮ್ಮ ನೆಚ್ಚಿನ ಹೀರೋ ಬೇಗ ಬಿಡುಗಡೆ ಆಗಲಿ ಅಂತ ಅರ್ಚನೆ ಮಾಡಿದ್ದಾರಂತೆ. ದರ್ಶನ್ ಫೋಟೋಗೆ ಪೂಜೆ ಮಾಡಿಸಿರೋ ಪೋಟೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಿಂದ ಈ ಫೋಟೋವನ್ನು ಡಿಲೀಟ್ ಮಾಡಲಾಗಿದೆ.