ಮಲೆನಾಡಿನಲ್ಲಿ ಧರೆ ಕುಸಿತದ ಆತಂಕದಲ್ಲಿರುವ 17 ಕುಟುಂಬಗಳು: ಬದಲಿ ಜಾಗದ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?

By Govindaraj S  |  First Published Aug 8, 2024, 6:07 PM IST

ಅದು 20 ಮನೆಗಳ ಕಾಡಂಚಿನ ಕುಗ್ರಾಮ. ಕಾಡಂಚು ಅನ್ನೋದ್ಕಿಂತ ಗುಡ್ಡಗಳ ಮಗ್ಗಲಿನ ಗ್ರಾಮ ಅನ್ನೋದು ಸೂಕ್ತ. 2019ರ ರಣ ಮಳೆಗೆ ಗುಡ್ಡದ ಜೊತೆ ಮನೆ-ಮನೆಗಳೇ ಧರೆಗುರುಳಿದ್ವು. ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮ್ಮನ್ನ ಬೇರೆಡೆ ಸ್ಥಳಾಂತರ ಮಾಡ್ತೀವಿ ಅಂತ ಭರವಸೆ ನೀಡಿ 3 ಮನೆಗಳನ್ನ ಮಾತ್ರ ಸ್ಥಳಾಂತರಿಸಿದ್ರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.08): ಅದು 20 ಮನೆಗಳ ಕಾಡಂಚಿನ ಕುಗ್ರಾಮ. ಕಾಡಂಚು ಅನ್ನೋದ್ಕಿಂತ ಗುಡ್ಡಗಳ ಮಗ್ಗಲಿನ ಗ್ರಾಮ ಅನ್ನೋದು ಸೂಕ್ತ. 2019ರ ರಣ ಮಳೆಗೆ ಗುಡ್ಡದ ಜೊತೆ ಮನೆ-ಮನೆಗಳೇ ಧರೆಗುರುಳಿದ್ವು. ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮ್ಮನ್ನ ಬೇರೆಡೆ ಸ್ಥಳಾಂತರ ಮಾಡ್ತೀವಿ ಅಂತ ಭರವಸೆ ನೀಡಿ 3 ಮನೆಗಳನ್ನ ಮಾತ್ರ ಸ್ಥಳಾಂತರಿಸಿದ್ರು. ಆದ್ರೆ, ಮಳೆಗಾಲ ಮುಗೀತ್ತಿದ್ದಂತೆ ಕೊಟ್ಟ ಮಾತನ್ನ ಮರೆತ್ರು. ಆದ್ರೆ, ಉಳಿದ 17 ಮನೆಗಳು ಇಂದಿಗೂ ಆತಂಕದಲ್ಲಿ ಬದುಕ್ತಿದ್ದಾರೆ.ನಿತ್ಯವೂ ಆತಂಕದಲ್ಲೇ ಜೀವನ ನಡೆಸುತ್ತಿರುವ ಬಿಳಗಲಿ ಗ್ರಾಮದ ಜನರು ಅಧಿಕಾರಿಗಳು, ಜನಪ್ರತಿನಿಧಿಗಳು ವಿರುದ್ದ ಕಿಡಿಕಾರುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಸಮೀಪದ ಬಿಳಗಲಿ ಗ್ರಾಮದಲ್ಲಿನ ಜನರು ಕಳೆದ 5 ವರ್ಷದಿಂದ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. 

Tap to resize

Latest Videos

undefined

ಬೇರೆಡೆ ಜಾಗವೂ ಇಲ್ಲ, ಸ್ಥಳಾಂತರದ ಮಾತು ಇಲ್ಲ: 2019ರ ರಣಮಳೆಗೆ ಅಕ್ಷರಶಃ ಬೆಚ್ಚಿ ಬಿದ್ದಿತ್ತು.  ಧರೆ ಕುಸಿದು 3 ಮನೆಗಳು ಕೊಚ್ಚಿ ಹೋಗಿದ್ವು. ಅಂದಿನಿಂದ ಅಲ್ಲಿರೋ 17 ಮನೆಗಳಿಗೆ ಇಂದಿಗೂ ಅದೇ ಭಯ...ಆತಂಕ ಕಾಡ್ತಿತ್ತು. ಆ 3 ಮನೆಗಳಂತೆ ನಮ್ದು ಹೋದ್ರೆ ಮುಂದೇನು ಅನ್ನೋ ಭಯ ಆವರಿಸಿತ್ತು. ಅಂದು ಬಂದಿದ್ದ ಅಧಿಕಾರಿಗಳು 3 ಮನೆಗೆ ಪರಿಹಾರ ನೀಡಿ, ನಿಮ್ದು ಸಮಸ್ಯೆ ಇದೆ. ಧರೆ ಕುಸಿಯುತ್ತೇ. ಬೇರೆಡೆ ಜಾಗ ಕೊಡ್ತೀವಿ ಎಂದು ಹೋಗಿದ್ರು. ಆದ್ರೆ, ಮತ್ತೆ ಈ ಕಡೆ ತಲೆಯನ್ನೇ ಹಾಕ್ಲಿಲ್ಲ. ಇಂದಿಗೂ ಅಲ್ಲಿನ ಜನ ಮತ್ತದೇ ಆತಂಕದ ಬದುಕನ್ನೇ ಬದುಕ್ತಿದ್ದಾರೆ. ಇನ್ನು ಇಲ್ಲಿನ ಜನರೂ ಬೇರೆಡೆ ಹೋಗ್ಲಿಲ್ಲ. ಯಾಕಂದ್ರೆ, ಹೋಗೋಕೆ ಅವ್ರಿಗೆ ಜಾಗವೂ ಇಲ್ಲ. ಮಳೆಗಾಲದಲ್ಲಿ ಜಾಗ ಕೊಡ್ತೀವಿ ಅಂದ ಅಧಿಕಾರಿಗಳು ಬೇಸಿಗೆಯಲ್ಲಿ ಕೈತೊಳೆದುಕೊಂಡ್ರು. ಕೇಳಿ-ಕೇಳಿ, ಅಧಿಕಾರಿಗಳ ದಾರಿ ಕಾದು ಸುಸ್ತಾದೋರು ಈಗ ಅಲ್ಲೇ ಮನೆ ಕಟ್ಟಿಕೊಳ್ಳೋಕೆ ಮುಂದಾಗಿದ್ದಾರೆ. 

ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ, ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ: ಸಿ.ಟಿ.ರವಿ ಆಗ್ರಹ

ವ್ಯವಸ್ಥೆ ವಿರುದ್ಧ  ಗ್ರಾಮಸ್ಥರು ಕಿಡಿ: ಮನೆ ಕಟ್ಟಿಕೊಳ್ಳೋಕೆ ಅನುಧಾನ ಬಿಡುಗಡೆ ಮಾಡಿದ ಸರ್ಕಾರ ಜಿ.ಪಿ.ಆರ್.ಎಸ್. ಮೂಲಕ ಅಲ್ಲೆ ಮನೆ ಕಟ್ಕೊಳ್ಳಬೇಕು. ಇಲ್ಲ ನೋಟೀಸ್ ಕೊಡ್ತೀವಿ ಅಂತ ಹೆದರಿಸ್ತಿದೆ. ಬೇರೆ ದಾರಿ ಇಲ್ಲದೆ ಜನ ಅಲ್ಲೇ ಮನೆ ಕಟ್ಟಿಕೊಳ್ಳೋಕೆ ಮುಂದಾಗಿದ್ದಾರೆ. ಕೆಲವರದ್ದು ಗೋಡೆವರೆಗೂ ಕಟ್ಟಿದ್ರೆ ಮತ್ತಲವರು ಪೌಂಡೇಷನ್ ಹಾಕಿದ್ದಾರೆ. ಆದ್ರೆ,  ಮುಂದೆನೋ ಅನ್ನೋ ಭಯವಂತು ಕಾಡ್ತಾನೆ ಇದೆ. ಯಾಕಂದ್ರೆ, ಅವ್ರು ಮನೆ ಕಟ್ಟಿಕೊಳ್ತಿರೋದು ಮತ್ತದೇ ಗುಡ್ಡದ ತಪ್ಪಲಿನಲ್ಲಿ. ಈಗಿನ ಮಳೆ ಮಧ್ಯೆ ಮತ್ತೆ ಗುಡ್ಡ-ಗೆರೆ ಕುಸಿಯುತ್ತಿರೋದು ಅವ್ರಿಗೆ ಕಟ್ಟಿದ ಮನೆಯಲ್ಲಿ ಇರೋಕು ಭಯ ಶುರುವಾಗಿ, 2019ರ ಸ್ಥಿತಿ ನೆನಪಾಗ್ತಿದೆ. ಆದ್ರೆ, ಇಷ್ಟಾದ್ರು ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿಲ್ಲ ಅನ್ನೋದು ಸ್ಥಳಿಯರ ಆರೋಪ.ಒಟ್ಟಾರೆ, ಐದು ವರ್ಷದಿಂದ ಬಿಳುಗಲಿ ಗ್ರಾಮಸ್ಥರ ಭಯದಿಂದಲೇ ಬದುಕ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಅನಾಹುತದ ಮೇಲೆ ಅನಾಹುತವಾಗ್ತಿದ್ರು ಎಚ್ಚೆತ್ತುಕೊಳ್ತಿಲ್ಲ   ಎಂದು ಸ್ಥಳಿಯರು ವ್ಯವಸ್ಥೆ ವಿರುದ್ಧ ಕಿಡಿ ಕಾರ್ತಿದ್ದಾರೆ.

click me!