Kalyana Karnataka Utsava: ಕಲಬುರಗಿಯಲ್ಲಿ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ ಉತ್ಸವ

By Suvarna News  |  First Published Feb 4, 2023, 9:33 PM IST

ಕಲ್ಯಾಣ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಸ್ಥಳೀಯ ಪರಂಪರೆ ಅನಾವರಣಗೊಳಿಸುವ ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲು ಕಲಬುರಗಿ ನಗರದಲ್ಲಿ ಇದೇ ಮೊದಲನೇ ಬಾರಿಗೆ "ಕಲ್ಯಾಣ ಕರ್ನಾಟಕ ಉತ್ಸವ"  ಆಯೋಜಿಸಲಾಗಿದೆ. ಇದೇ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನ ಅದ್ದೂರಿ ಮತ್ತು ಐತಿಹಾಸಿಕವಾಗಿ ಆಯೋಜಿಸಲು ನಿರ್ಧರಿಸಿದೆ.


ಕಲಬುರಗಿ, (ಫೆ.4): ಕಲ್ಯಾಣ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಸ್ಥಳೀಯ ಪರಂಪರೆ ಅನಾವರಣಗೊಳಿಸುವ ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲು ಕಲಬುರಗಿ ನಗರದಲ್ಲಿ ಇದೇ ಮೊದಲನೇ ಬಾರಿಗೆ "ಕಲ್ಯಾಣ ಕರ್ನಾಟಕ ಉತ್ಸವ"  ಆಯೋಜಿಸಲಾಗಿದೆ. ಇದೇ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನ ಅದ್ದೂರಿ ಮತ್ತು ಐತಿಹಾಸಿಕವಾಗಿ ಆಯೋಜಿಸಲು ನಿರ್ಧರಿಸಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದ್ದಾರೆ. ಕಲಬುರಗಿಯ ಕೆ.ಕೆ.ಆರ್.ಡಿ.ಬಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ  ಮಾತನಾಡಿದ ಅವರು, ಗುಲಬರ್ಗಾ ವಿ.ವಿ. ಆವರಣದ ನುಡಿ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ಆಯೋಜಿಸಲಾಗುತ್ತಿದೆ ಎಂದರು. ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಹಾಕಿಕೊಳ್ಳಲಾಗಿದ್ದು, ಈ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ದಶಕದ ಹಿಂದೇ ಕಲಬುರಗಿಯಲ್ಲಿ ಉತ್ಸವ ಆಯೋಜಿಸಲಾಗಿತ್ತು. ತದನಂತರ ಉತ್ಸವ ಆಗಿರಲಿಲ್ಲ. ಸ್ವಾತಂತ್ರ್ಯ ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಮೂರು ದಿನ ಉತ್ಸವ ಆಯೋಜಿಸುತ್ತಿದ್ದು, ವೈವಿಧ್ಯಮಯ ಸ್ಪರ್ಧೇ, ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಪ್ರದೇಶದ ಕಲಾವಿದರ ಜೊತೆಗೆ ಸ್ಯಾಂಡಲವುಡ್ ಮತ್ತು ಬಾಲಿವುಡ್ ಖ್ಯಾತನಾಮದ ಹಿನ್ನೆಲೆ ಗಾಯಕರು, ರಾಷ್ಟ್ರೀಯ-ಅಂತರಾಷ್ಟ್ರೀಯ ಕಲಾವಿದರನ್ನು ಕರೆತರಲು ಅವರೊಂದಿಗೆ ಮಾತುಕತೆ ನಡೆದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಯ ಮಳಿಗೆ ಇಲ್ಲಿ ಹಾಕಲಾಗುತ್ತದೆ. ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐತಿಹಾಸಿಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

Latest Videos

undefined

ಕಲಬುರಗಿ ಅಷ್ಟೆ ಅಲ್ಲ, ಪ್ರದೇಶದ ಉಳಿದ 6 ಜಿಲ್ಲೆಗಳಲ್ಲಿ ಸಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮ ಆಯೋಜನೆಗೆ ಸೂಚನೆ ನೀಡಲಾಗಿದೆ ಎಂದರು.

ಉತ್ಸವಕ್ಕೆ 5 ಕೋಟಿ ರೂ.:
ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ಶುಭ ಗಳಿಗೆಯಲ್ಲಿ ಸ್ವಾತಂತ್ರ್ಯದ ವಿಮೋಚನಾ ಚಳುವಳಿಯ ಘಟನಾವಳಿ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಒಳಗೊಂಡ “ಕಲ್ಯಾಣ ಕರ್ನಾಟಕ ಉತ್ಸವ” ಆಯೋಜನೆಗೆ ಪ್ರಸಕ್ತ ಸಾಲಿನ ಮಂಡಳಿ ಅನುದಾನದಲ್ಲಿ 5 ಕೋಟಿ ರೂ. ಅನುದಾನ ಪ್ರಾಯೋಜನೆ ಮಾಡಿಕೊಂಡು ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಇದ್ದಲ್ಲಿ ರಾಜ್ಯ ಸರ್ಕಾರ ಸಹಾಯ ಮಾಡುವುದಾಗಿ ತಿಳಿಸಿದೆ ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.

ಮಕ್ಕಳ ಮತ್ತು ಮಹಿಳಾ ಉತ್ಸವ:
ಮೂರು ದಿನಗಳ ಉತ್ಸವದ ಯಶಸ್ಸಿಗೆ ಅಧಿಕಾರಿಗಳನ್ನೊಳಗೊಂಡ ಸ್ವಾಗತ ಮತ್ತು ಶಿಷ್ಠಚಾರ, ಸಾರಿಗೆ, ವಸತಿ, ಆಹಾರ, ಪ್ರಚಾರ, ಮೂಲಭೂತ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲೀಕರಣ, ಕಾನೂನು ಸುವ್ಯವಸ್ಥೆ, ಪ್ರದರ್ಶನ, ಕ್ರೀಡಾ, ವೇದಿಕೆ ನಿರ್ಮಾಣ, ಅಗ್ನಿಶಾಮಕ, ಪುಸ್ತಕ ಪ್ರದರ್ಶನ ಮತ್ತು ವಿಚಾರ ಸಂಕಿರಣ, ಚಿತ್ರಕಲೆ ಮತ್ತು ಶಿಲ್ಪಕಲೆ ಪ್ರದರ್ಶನ, ಧ್ವನಿ ಬೆಳಕು, ಕಲಾವಿದರ ಆಯ್ಕೆ, ಪರಿಸರ ಸ್ನೇಹಿ, ಸಾಂಪ್ರದಾಯಿಕ ಖಾದ್ಯಗಳ ಮಳಿಗೆ ಹಾಗೂ ಟೆಂಡರ್ ಮತ್ತು ಪ್ರೋಕ್ಯೂರಮೆಂಟ್ ಸಮಿತಿ ಹೀಗೆ 20 ಸಮಿತಿ ರಚಿಸಲಾಗಿದೆ. ಉತ್ಸವದಲ್ಲಿ ವಿಶೇಷವಾಗಿ ಒಂದು ದಿನ “ಮಕ್ಕಳ ಹಬ್ಬ” ಹಾಗೂ ಒಂದು ದಿನ “ಮಹಿಳಾ ಉತ್ಸವ” ಆಯೋಜಿಸಿ ಅವರಿಗಾಗಿಯೇ ವಿಶೇಷ ಸ್ಪರ್ಧೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಉತ್ಸವದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ವೇದಿಕೆ ಜೊತೆಗೆ ಇನ್ನೆರಡು ಉಪ ವೇದಿಕೆ ಇರಲಿದೆ. ಮುಖ್ಯ ವೇದಿಕೆಯಲ್ಲಿ ಖ್ಯಾತನಾಮ ಕಲಾವಿದರ ಕಾರ್ಯಕ್ರಮಗಳಿರಲಿದ್ದು, ಉಳಿದಂತೆ ವಿ.ವಿ. ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶಾಸ್ತ್ರೀಯ, ಹಿಂದೂಸ್ತಾನಿ ಸಂಗೀತ ಮತ್ತು ಬಯಲು ರಂಗಮಂದಿರದಲ್ಲಿ ಗಝಲ್, ವಚನ ಗಾಯನ ಕಾರ್ಯಕ್ರಮಗಳು ಇರಲಿವೆ.

ಖರ್ಗೆ, ಧರಂರಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಡಿ.ಕೆ.ಶಿವಕುಮಾರ್‌

ಉತ್ಸವದ ಅಂಗವಾಗಿ ಶ್ವಾನಗಳ ಪ್ರದರ್ಶನ, ಕೃಷಿ ಮೇಳ, ಗಾಳಿಪಟ ಉತ್ಸವ, ಚಿತ್ರಕಲೆ ಮತು ಶಿಲ್ಪ ಕಲೆಗಳ ಪ್ರದರ್ಶನ, ಫಲಪುಶ್ಪ ಪ್ರದರ್ಶನ, ಚಿತ್ರ ಸಂತೆ, ಸಾಹಸ ಕ್ರೀಡೆಗಳು ಹಾಗೂ ಜಲ ಕ್ರೀಡೆ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಖಾದ್ಯ ಮೇಳ, ಮತ್ಸ್ಯ ಮೇಳ ಆಯೋಜಿಸಲಾಗುತ್ತಿದೆ. ಪ್ರಮುಖವಾಗಿ ಹೆಲಿಕಾಫ್ಟರ್ ರೈಡ್ ಸಾರ್ವಜನಿಕರ ಆಕರ್ಷಣೆಯಾಗಲಿದೆ. ಜೊತೆಗೆ ಮ್ಯಾರಥಾನ್, ಸೈಕ್ಲಥಾನ್, ಹಾಟ ಏರ್ ಬಲೂನ್‍ಗಳ ಹಾರಾಟ ಸಹ ಆಯೋಜಿಸಲಾಗುತ್ತಿದೆ ಎಂದರು.

ಕಲಬುರಗಿ: ಕಲ್ಯಾಣದ ಬೇಡಿಕೆಗಳಿಗೆ ದೊರಕದ ಸ್ಪಂದನೆ

ಸುದ್ದಿಗೋಷ್ಠಿಯಲ್ಲಿ ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಮಂಡಳಿಯ ಜಂಟಿ ಕಾರ್ಯದರ್ಶಿ ಪ್ರವೀಣಪ್ರಿಯಾ, ಹಣಕಾಸು ನಿಯಂತ್ರಕರಾದ ಅಕ್ಕಮಹಾದೇವಿ ಇತರರು ಉಪಸ್ಥಿತರಿದ್ದರು.

click me!