ಶಿವಮೊಗ್ಗದಿಂದ ಎನ್‌ಆರ್ ಪುರಕ್ಕೆ ತೆರಳುತ್ತಿದ್ದ ಗ್ಯಾಸ್ ಸಿಲಿಂಡರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ವಡ್ಡಿನ ಕೊಪ್ಪ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ಶಿವಮೊಗ್ಗ (ಮಾ.19) : ಶಿವಮೊಗ್ಗದಿಂದ ಎನ್‌ಆರ್ ಪುರಕ್ಕೆ ತೆರಳುತ್ತಿದ್ದ ಗ್ಯಾಸ್ ಸಿಲಿಂಡರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ವಡ್ಡಿನ ಕೊಪ್ಪ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ವಡ್ಡಿನಕೊಪ್ಪ ಪೆಟ್ರೋಲ್ ಬಂಕ್ ಗೆ ಇಂಧನ ತುಂಬಿಸಲು ಹೋಗಿದ್ದ ಲಾರಿ ಈ ವೇಳೆ ಪೆಟ್ರೋಲ್ ಬಂಕ್ ಮುಂದೆ ತೆರಳುವಾಗ ನಡೆದಿರುವ ಘಟನೆ. ಅದೃಷ್ಟವಶಾತ್ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಸಿಲಿಂಡರ್ ನಿಂದ ಆಗಬೇಕಾದ ಅನಾಹುತ ತಪ್ಪಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ.
Karnataka election 2023: ಕಾಫಿನಾಡಲ್ಲಿ ಮಹಿಳಾ ಮತದಾರರೇ ಮೇಲು!...
ಲಾರಿ ಪಲ್ಟಿಯಾಗುತ್ತಿದ್ದಂತೆ ಲೋಡ್ ಮಾಡಲಾಗಿದ್ದ ಗ್ಯಾಸ್ ಸಿಲಿಂಡರ್ ಗಳು ರಸ್ತೆಗೆ ಉರುಳಿಬಿದ್ದಿವೆ. ಗ್ಯಾಸ್ ತುಂಬಿಸಿದ್ದ ಸಿಲಿಂಡರ್ ಸ್ಫೋಟಗೊಳ್ಳುತ್ತವೆ ಎಂದು ಸ್ಥಳೀಯರು ಆತಂಕಕ್ಕೊಳ್ಳಗಾಗಿದ್ದರು. ಆದರೆ ಅಂಥ ಯಾವುದೇ ಅನಾಹುತ ಸಂಭವಿಸದ್ದಕ್ಕೆ ನಿಟ್ಟುಸಿರು ಬಿಟ್ಟರು.
ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದ ಘಟನೆ.
ಕೊಳ್ಳೇಗಾಲ : ಚಲಿಸುತ್ತಿದ್ದ ಕಬ್ಬಿಣ ಇನ್ನಿತರೆ ಸಾಮಾಗ್ರಿ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮುಡಿಗುಂಡ ಸೇತುವೆ ಪಕ್ಕದ ಹಳ್ಳಕ್ಕೆ ಬಿದ್ದು, ಸ್ಥಳದಲ್ಲಿದ್ದ ಮುಸ್ಲಿಂ ಈದ್ಗಾ ಜಖಂಗೊಂಡಿರುವ ಘಟನೆ ನಡೆದಿದೆ. ದಿನ್ನಳ್ಳಿ ಗ್ರಾಮದ ಮಹಮ್ಮದ್ ಹತೀಖ್ ಎಂಬುವರಿಗೆ ಸೇರಿದ ಲಾರಿ ಇದಾಗಿದೆ ಎನ್ನಲಾಗಿದೆ. ಲಾರಿ ಚಾಲಕ ಕೌದಳ್ಳಿ ಗ್ರಾಮದ ಶಿವು ಎಂಬಾತ ಲಾರಿ ಪಲ್ಟಿಯಾದ ಹಿನ್ನೆಲೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಹೈದರಾಬಾದ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಉಸಿರುಕಟ್ಟಿ 6 ಮಂದಿ ಸಾವು
ತಮಿಳುನಾಡಿನಿಂದ ಹುಣಸೂರು ಕಡೆಗೆ ತೆರಳಲು ಕಬ್ಬಿಣದ ಸಲಾಕೆಗಳನ್ನು ತುಂಬಿಕೊಂಡು ಮಂಗಳವಾರ ತಡರಾತ್ರಿ 11 ಗಂಟೆಗೆ ಪಟ್ಟಣದ ಮುಡಿಗುಂಡ ಸೇತುವೆ ಬಳಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಳ್ಳಕ್ಕೆ ನುಗ್ಗಿದೆ. ಅವಘಡದಿಂದ ಸೇತುವೆ ಕೆಳಗಿರುವ ಈದ್ಗಾ ಜಖಂಗೊಂಡಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡ ಚಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.