ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

Kannadaprabha News   | Asianet News
Published : Jun 04, 2020, 08:34 AM ISTUpdated : Jun 04, 2020, 03:10 PM IST
ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

ಸಾರಾಂಶ

ಮೈಸೂರಿನ ಟ್ರಯತ್ಲಾನ್‌ ಪಟುವೊಬ್ಬರಿಗಾಗಿ ಮಂಗಳೂರಿನ ಸೈಕಲ್‌ ಮಳಿಗೆಯೊಂದು ತರಿಸಿರುವ ಸೈಕಲ್‌ ನೋಡಿದವರು ಬೆರಗಾಗಲೇಬೇಕು. ಈ ಸೈಕಲ್‌ನ ಬೆಲೆ ಬರೋಬ್ಬರಿ 12 ಲಕ್ಷ ರು.!

ಮಂಗಳೂರು(ಜೂ.04): ಮೈಸೂರಿನ ಟ್ರಯತ್ಲಾನ್‌ ಪಟುವೊಬ್ಬರಿಗಾಗಿ ಮಂಗಳೂರಿನ ಸೈಕಲ್‌ ಮಳಿಗೆಯೊಂದು ತರಿಸಿರುವ ಸೈಕಲ್‌ ನೋಡಿದವರು ಬೆರಗಾಗಲೇಬೇಕು. ಈ ಸೈಕಲ್‌ನ ಬೆಲೆ ಬರೋಬ್ಬರಿ 12 ಲಕ್ಷ ರು.!

ಕೆನಡಾ ಮೂಲದ ರೇಸಿಂಗ್‌ ಸೈಕಲ್‌ಗಳ ಸರ್‌ವೆಲ್ಲೊ ಕಂಪನಿಯವರ ಪಿಎಕ್ಸ್‌ ಸೀರೀಸ್‌ನ ಡ್ಯೂರೇಸ್‌ ಡೈ2 2020 ಮಾದರಿ ಸದ್ಯ ನಗರದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸೈಕ್ಲಿಂಗ್‌-ಈಜು-ಓಟ ಈ ಮೂರರ ಟ್ರಯತ್ಲಾನ್‌ ಕ್ರೀಡೆಗಳಲ್ಲಿ ಅತಿ ವೇಗದ ಸೈಕ್ಲಿಂಗ್‌ಗೆ ಇಂತಹ ಸೈಕಲ್‌ ಬಳಸಲಾಗುತ್ತದೆ.

ಇನ್ಮುಂದೆ ಸೋಂಕಿತರ ಮನೆ ಮಾತ್ರ ಸೀಲ್‌ಡೌನ್!

ಅತಿ ಹಗುರವಾದ ಮೋನೊಕಾಕ್‌ ಕಾರ್ಬನ್‌ನಿಂದ ನಿರ್ಮಾಣಗೊಂಡಿರುವ ಈ ಸೈಕಲ್‌, ಏರೋ ಬೇಸ್‌ ಬಾರ್‌, ಉತ್ಕೃಷ್ಟದರ್ಜೆಯ ಶಿಮಾನೊ ಡ್ಯೂರೇಸ್‌ ಡೈ2 ಡಿರೈಲ್ಯೂರ್‌ಗಳನ್ನು ಹೊಂದಿದೆ. ಮಂಗಳೂರಿನ ತಾಜ್‌ ಸೈಕಲ್‌ನಲ್ಲಿ ಇದನ್ನು ಪ್ರದರ್ಶಿಸಿದ್ದು, ಮೈಸೂರು ಮೂಲದ ಟ್ರಯತ್ಲಟ್‌ವೊಬ್ಬರಿಗೆ ಶೀಘ್ರ ಮಾರಾಟ ಮಾಡಲಾಗುತ್ತದೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು